ಪಾವಗಡ :
ಪಟ್ಟಣದ ಲಕ್ಷ್ಮೀಪತಿ ಬಡಾವಣೆಯಲ್ಲಿ ಅಕ್ರಮವಾಗಿ ರಸ್ತೆ ಮತ್ತು ಚರಂಡಿಯನ್ನು ಒತ್ತುವರಿ ಮಾಡಿಕೊಂಡ ಮನೆಗಳ ಮೇಲೆ ಪುರಸಭಾ ಮುಖ್ಯಾಧಿಕಾರಿ ಬಿ.ಸಿ.ಅರ್ಚನಾ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮ ಕಾಂಪೌಂಡ್‍ಗಳನ್ನು ತೆರೆವುಗೊಳಿಸಿತು.
ಈ ವೇಳೆ ಮಾಹಿತಿ ನೀಡಿದ ಮುಖ್ಯಾಧಿಕಾರಿ, ಪಟ್ಟಣದ ನಾಗರತ್ನ ಎನ್ನುವರು 2017 ರಲ್ಲಿ ಪಟ್ಟಣದ ಕೆಲವು ಕಡೆ ಅಕ್ರಮವಾಗಿ ರಸ್ತೆ ಮತ್ತು ಚರಂಡಿಯನ್ನು ಅತಿಕ್ರಮಿಸಿ ಕಾಂಪೌಂಡ್ ನಿರ್ಮಾಣ ಮಾಡಿದ್ದು, ಈ ಕಾಂಪೌಂಡ್‍ಗಳನ್ನು ತೆರವು ಗೊಳಿಸಬೇಕೆಂದು ಕೆಲ ಸಾರ್ವಜನಿಕರು ಲೋಕಾಯುಕ್ತ ಕಛೇರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಲೋಕಾಯುಕ್ತರ ನಿರ್ದೇಶನದಂತೆ ಇಂದು ನಾರಾಯಣಪ್ಪ ಮತ್ತು ಲಕ್ಷ್ಮಮ್ಮ ಇವರು ಅತಿಕ್ರಮಿಸಿ ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ ಉಳಿದಂತೆ ಈ ಕಾರ್ಯಾಚರಣೆಯನ್ನು ಮುಂದುವರಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಒತ್ತುವರಿ ಕಾರ್ಯಾಚರಣೆಗೆ ಮನೆ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ‘ನಮಗೆ ಯಾವುದೇ ರೀತಿಯ ನೋಟೀಸ್ ನೀಡದೆ ಕಾಂಪೌಂಡ್ ತೆರವುಗೊಳಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಕಾರ್ಯಾಚರಣೆಯಲ್ಲಿ ಪುರಸಭೆಯ ಕಂದಾಯಾಧಿಕಾರಿ ನಾಗಭೂಷಣ್, ತಿಪ್ಪೆಸ್ವಾಮಿ, ವೇಣುಗೋಪಾಲ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ