ಮಿಡಿಗೇಶಿ :
ಮಿಡಿಗೇಶಿ ಗ್ರಾಪಂ ಅಧ್ಯಕ್ಷೆಯ ಪತಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಕೆಲಸ ಕಾರ್ಯಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಗ್ರಾಪಂ ಸದಸ್ಯರುಗಳಾದ ನಮಗೆ ಅಧ್ಯಕ್ಷೆಯ ಪತಿ ಗೌರವ ಕೊಡುತ್ತಿಲ್ಲ, ಅಲ್ಲದೆ ದಿನಪೂರಾ ಪಿಡಿಓರೊಂದಿಗೆ ಸೇರಿ ಗ್ರಾಪಂ ಕಛೇರಿಯಲ್ಲಿಯೆ ಠಿಕಾಣಿ ಹೂಡಿರುತ್ತಾರೆ ಎಂದು ಆರೋಪಿಸಿ, 9 ಸದಸ್ಯರು ಪಿಡಿಓಗೆ ಲಿಖಿತ ದೂರು ಸಲ್ಲಿಸಿ, ಸಾಮಾನ್ಯ ಸಭೆಯಿಂದ ಹೊರ ನಡೆದ ಘಟನೆ ಏ. 19 ರಂದು ನಡೆದಿದೆ. ಕೋರಂ ಕೊರತೆ ಕಾರಣದಿಂದ ಪಿಡಿಓ ಜುಂಜೇಗೌಡರು ಸಭೆಯನ್ನು ರದ್ದುಗೊಳಿಸಿದ್ದಾರೆ.
ಸಾರ್ವಜನಿಕರಿಂದ ಬಂದಿದ್ದ ಬಹಳಷ್ಟು ಅರ್ಜಿಗಳ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು ಇತ್ಯರ್ಥವಾಗಬೇಕಿತ್ತು. ನಾವುಗಳು ಮತ ಹಾಕಿ ಗೆಲ್ಲಿಸಿದ ನೂತನ ಸದಸ್ಯರು ಎರಡನೆ ಸಾಮಾನ್ಯ ಸಭೆಯನ್ನೆ ನಡೆಸದೆ ಹೊರ ನಡೆದಿರುವುದು ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಗೌರವ ತರುವಂತಹದ್ದಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಸಭೆಗೆ ಕುಡಿಯುವ ನೀರು, ಗ್ರಾಮ ನೈರ್ಮಲ್ಯ, ನರೇಗಾ ಯೋಜನೆ ಬಗ್ಗೆ, ಘನತ್ಯಾಜ್ಯ ಘಟಕ ನಿರ್ವಹಣೆ, ನಿವೇಶನ, ಮನೆಗಳ ಮಂಜೂರಾತಿ, ಶೌಚಾಲಯಗಳ ನಿರ್ಮಾಣ ಇತ್ಯಾದಿ ಬೇಡಿಕೆಗಳ ಬಗ್ಗೆ ಸಾಕಷ್ಟು ಅರ್ಜಿ ಸಲ್ಲಿಕೆಯಾಗಿದ್ದವು. ಒಟ್ಟು 16 ಸದಸ್ಯರನ್ನು ಒಳಗೊಂಡ ಗ್ರಾಮ ಪಂಚಾಯಿತಿಯಲ್ಲಿ, ಒಂಭತ್ತು ಜೆಡಿಎಸ್ ಪಕ್ಷದ ಬೆಂಬಲಿತ ಸದಸ್ಯರು ಚುನಾಯಿತರಾಗಿದ್ದರೆ, ಆರು ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರಾಗಿ ಆಯ್ಕೆಗೊಂಡಿದ್ದು, ಓರ್ವ ಮಹಿಳಾ ಸದಸ್ಯರು ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದಾರೆ.
ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಗೆ ಅಧ್ಯಕ್ಷೆ ಪ್ರೇಮಲತಾ ರವಿ, ಉಪಾಧ್ಯಕ್ಷ ಎಸ್.ಸುರೇಶ್, ಸದಸ್ಯರುಗಳಾದ ಹನುಮಂತರಾಯ, ಸಿದ್ದಪ್ಪ ರಮ್ಯ, ಸೌಭಾಗ್ಯಮ್ಮ ಶ್ರೀನಿವಾಸ್ ಹಾಜರಾಗಿದ್ದರೆ, ವಿಜಯಕುಮಾರ್, ರಾಜಗೋಪಾಲ್, ವೇಣು, ಗೋಪಾಲರೆಡಿ,್ಡ ರಾಧಮ್ಮ, ಕವಿತಾ, ಲಕ್ಷ್ಮೀ ದೇವಮ್ಮ, ಸೌಭಾಗ್ಯ, ಮಂಜಮ್ಮ, ಸುಕನ್ಯಾರವರುಗಳು ಗೈರುಹಾಜರಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ