ಶಿರಾ : ವ್ಯಾಪಕವಾಗಿ ಸಿಡಿದ ಕೊರೋನಾ ; ಒಂದೇ ದಿನ 95 ಪಾಸಿಟೀವ್ ಕೇಸ್!

 ಶಿರಾ : 

      ದಿನ ನಿತ್ಯ 20, 25, 30 ರಂತೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಕಾಣಬರುತ್ತಿದ್ದ ಕೋವಿಡ್ ಪ್ರಕರಣಗಳು, ಏ. 19 ರ ಒಂದೇ ದಿನದಂದು 95 ಪಾಸಿಟೀವ್ ಪ್ರಕರಣಗಳು ಕಂಡು ಬರುವ ಮೂಲಕ ಸಾರ್ವಜನಿಕರಲ್ಲಿ ಆತಂಕದ ವಾತಾವರಣವನ್ನು ಮೂಡಿಸಿದೆ.
ಮೊದಲ ಹಂತದ ಕೋವಿಡ್-19 ಅಲೆಯು ರಾಜ್ಯದಲ್ಲಿ ಆರಂಭಗೊಂಡಾಗ ಕೇವಲ ಒಂದೆರಡು ಪ್ರಕರಣಗಳು ಕಂಡು ಬಂದಾಗ ಬೆಚ್ಚಿ ಬಿದ್ದಿದ್ದ ತಾಲ್ಲೂಕಿನ ಜನತೆಗೆ ಏ.19 ರ ಕೋವಿಡ್ ಅಂಕಿ-ಅಂಶಗಳು ನಿಜಕ್ಕೂ ಭೀತಿಯನ್ನುಂಟು ಮಾಡಿದೆ.

      ಯುಗಾದಿ ಹಬ್ಬಕ್ಕೆಂದು ವಿವಿಧೆಡೆಗಳಿಂದ ಶಿರಾ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಗೆ ಬಂದು ಹೋದವರು ಕೋವಿಡ್ ಹರಡುವಿಕೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗುತ್ತಿದೆ. ಯುಗಾದಿ ಹಬ್ಬಕ್ಕೆಂದು ಬಂದವರು ಕೋವಿಡ್ ನಿಯಮಗಳ ಪಾಲನೆ ಮಾಡದ ಪರಿಣಾಮ ಮುಂಬರುವ ಕೋವಿಡ್ ಟೆಸ್ಟ್‍ನಲ್ಲೂ ಅತಿ ಹೆಚ್ಚು ಪ್ರಕರಣಗಳು ಕಂಡು ಬರುವ ಸಾಕಷ್ಟು ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಸೋಮವಾರ ಸ್ವಾಬ್‍ಗಳ ಫಲಿತಾಂಶ ಬಂದಾಗ ಸರ್ಕಾರಿ ಆಸ್ಪತ್ರೆಯ ವೈದ್ಯರು ಕೂಡ ಆತಂಕ ಪಡುವಂತಹ ಸ್ಥಿತಿ ಉಂಟಾಗಿದೆ. ಬೆಂಗಳೂರಿನಿಂದ ಹಬ್ಬಕ್ಕೆಂದು ಶಿರಾ ತಾಲ್ಲೂಕಿಗೆ ಬಂದಾಗ ಕೋವಿಡ್ ಟೆಸ್ಟ್‍ಗೆ ಒಳಗಾಗಿದ್ದ 20 ಮಂದಿಗೆ ಪಾಸಿಟೀವ್ ಕಂಡು ಬಂದಿದೆ ಎನ್ನಲಾಗಿದ್ದು, ಈಗಾಗಲೇ ಸ್ವಾಬ್ ಟೆಸ್ಟ್ ಫಲಿತಾಂಶ ಬರುವ ಮುನ್ನವೇ ಪಾಸಿಟೀವ್ ಬಂದವರು ಬೆಂಗಳೂರಿನಲ್ಲಿರುವ ಕಾರಣ ಅವರನ್ನು ಹೋಂ ಕ್ವಾರಂಟೇನ್‍ನಲ್ಲಿರಲು ಸೂಚಿಸಲಾಗಿದೆ ಎನ್ನಲಾಗಿದೆ.

      ಇತ್ತ ಶಿರಾ ತಾಲ್ಲೂಕಿನಲ್ಲಿ 75 ಮಂದಿಗೆ ಒಂದೇ ದಿನ ಪಾಸಿಟೀವ್ ಕಾಣಿಸಿಕೊಂಡಿದ್ದು, ಈ ಎಲ್ಲರನ್ನೂ ಹೋಂ ಕ್ವಾರಂಟೇನ್‍ನಲ್ಲಿರಲು ಆರೋಗ್ಯ ಇಲಾಖೆ ಸೂಚಿಸಿದೆ ಎನ್ನಲಾಗಿದೆ. ಶಿರಾ ನಗರದ ಜ್ಯೋತಿ ನಗರ ಹಾಗೂ ವಿದ್ಯಾ ನಗರ ಬಡಾವಣೆಯಲ್ಲಿ ಅತಿ ಹೆಚ್ಚು ಪಾಸಿಟೀವ್ ಪ್ರಕರಣಗಳು ಕಂಡು ಬಂದಿದೆ ಎನ್ನಲಾಗಿದೆ. ನಗರದ ಕೆಲ ಖಾಸಗಿ ವೈದ್ಯರಿಗೆ ಕೂಡ ಪಾಸಿಟಿವ್ ಕಂಡು ಬಂದಿದ್ದು, ಸದರಿ ವೈದ್ಯರು ಹೋಂ ಕ್ವಾರಂಟೇನ್‍ಲ್ಲಿದ್ದಾರೆ.

      ಕಳೆದ ಎರಡು ದಿನಗಳಿಂದಲೂ ಕೆಲ ಸರ್ಕಾರಿ ಕಛೇರಿಗಳ ಸಿಬ್ಬಂದಿಗೂ ಕೋವಿಡ್ ಪಾಸಿಟೀವ್ ಕಾಣಿಸಿಕೊಂಡಿದ್ದು, ಕಛೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯೂ ಆತಂಕಕ್ಕೆ ಒಳಗಾಗಿದ್ದಾರೆ. ಏ.19 ರಂದು ಪಟ್ಟನಾಯಕನಹಳ್ಳಿಯ 4 ಸಿಬ್ಬಂದಿಗೆ ಪಾಸಿಟೀವ್ ಬಂದಿದ್ದು, ಬ್ಯಾಂಕಿನ ಉಳಿದ ಸಿಬ್ಬಂದಿ ಕೂಡ ಸ್ವಾಬ್ ಟೆಸ್ಟ್‍ಗೆ ಒಳಪಟ್ಟಿದ್ದಾರೆ.

      ಶಿರಾ ನಗರದಲ್ಲಿ ಕಳೆದ ಯುಗಾದಿ ಹಬ್ಬಕ್ಕೂ ಮುನ್ನಾ ದಿನಗಳಲ್ಲೂ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಅನೇಕ ಮಂದಿ ಓಡಾಟ ನಡೆಸುತ್ತಿದ್ದುದು ಸಾಮಾನ್ಯವಾಗಿಯೇ ಇತ್ತು. ಸಾಮಾಜಿಕ ಅಂತರ ಕಾಪಾಡುವಿಕೆಯಲ್ಲೂ ಜನ ಮೈ ಮರೆತು ಬಿಟ್ಟಿದ್ದರು. ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳು ಸಿಡಿಯುತ್ತಿದ್ದರೂ, ಕೋವಿಡ್ ನಿಮಯಗಳನ್ನು ಮರೆತ ಪರಿಣಾಮ ಇದೀಗ ಶಿರಾ ಕೂಡ ಪ್ರಕರಣಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕಾರಣವಾಗಿದೆ.

      ಯುಗಾದಿ ಹಬ್ಬದ ನಂತರ ತಾಲ್ಲೂಕಿನಾದ್ಯಂತ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದನ್ನು ಕಂಡರೆ ಪಾಸಿಟೀವ್ ಬಂದು ಹೋಂ ಕ್ವಾರಂಟೇನ್‍ನಲ್ಲಿರಬೇಕಾದವರು ಮನೆಯಲ್ಲಿಯೇ ಇದ್ದಾರೋ ಅಥವ ಊರಲ್ಲೆಲ್ಲಾ ಓಡಾಡಿಕೊಂಡಿದ್ದಾರೋ ಅನ್ನುವ ಆತಂಕವೂ ತಾಲ್ಲೂಕು ಆಡಳಿತಕ್ಕೆ ಉಂಟಾಗಿದೆ.

      ಕಳೆದ ಒಂದು ವಾರದಿಂದಲೂ ಆರಕ್ಷಕ ಇಲಾಖೆ ಹಾಗೂ ನಗರಸಭೆಯ ಸಿಬ್ಬಂದಿ ಮಾಸ್ಕ್ ಧರಿಸದವರ ಮೇಲೆ 100 ರೂ. ದಂಡ ವಿಧಿಸಿ ಎಚ್ಚರಿಸುತ್ತಿದ್ದರು ನಿಜ, ಆದರೆ ಏ.19 ರಂದು ದಿಢೀರನೆ 95 ಪ್ರಕರಣಗಳು ಕಂಡು ಬರುತ್ತಿದ್ದಂತೆಯೇ ಸೋಮವಾರ ಬೆಳಗ್ಗೆಯಿಂದಲೇ ಅಂಗಡಿ-ಮುಂಗಟ್ಟುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಓಡಾಡುವವರನ್ನು ಹುಡುಕಿ ಹುಡುಕಿ ಹಿಡಿದು ದಂಡವನ್ನು ವಿಧಿಸುತ್ತಿದ್ದಾರೆ.

      ಒಟ್ಟಾರೆ ದಿನ ದಿನಕ್ಕೂ ಶಿರಾ ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮೀಣ ಭಾಗದಲ್ಲೂ ಕೂಡಾ ಪಾಸಿಟೀವ್ ಪ್ರಕರಣ ಹೆಚ್ಚಾಗಿ ಕಾಣ ಬರುತ್ತಿದ್ದು ಕೋವಿಡ್ ನಿಯಮಗಳನ್ನು ಸಾರ್ವಜನಿಕರು ಪರಿಪಾಲನೆ ಮಾಡುವುದು ಅಗತ್ಯವಾಗಿದೆ.

ಯುಗಾದಿ ಹಬ್ಬದ ನಂತರ ತಾಲ್ಲೂಕಿನಾದ್ಯಂತ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದನ್ನು ಕಂಡರೆ ಪಾಸಿಟೀವ್ ಬಂದು ಹೋಂ ಕ್ವಾರಂಟೇನ್‍ನಲ್ಲಿರಬೇಕಾದವರು ಮನೆಯಲ್ಲಿಯೇ ಇದ್ದಾರೋ ಅಥವಾ ಊರಲ್ಲೆಲ್ಲಾ ಓಡಾಡಿಕೊಂಡಿದ್ದಾರೋ ಅನ್ನುವ ಆತಂಕ ಕೂಡ ತಾಲ್ಲೂಕು ಆಡಳಿತಕ್ಕೆ ಉಂಟಾಗಿದೆ.

ಕಳೆದ ಎರಡು ದಿನಗಳಿಂದಲೂ ಕೆಲ ಸರ್ಕಾರಿ ಕಛೇರಿಗಳ ಸಿಬ್ಬಂದಿಗೂ ಕೋವಿಡ್ ಪಾಸಿಟೀವ್ ಕಾಣಿಸಿಕೊಂಡಿದ್ದು, ಕಛೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಕೂಡ ಆತಂಕಕ್ಕೆ ಒಳಗಾಗಿದ್ದಾರೆ. ಏ. 19 ರಂದು ಪಟ್ಟನಾಯಕನಹಳ್ಳಿಯ 4 ಮಂದಿ ಸಿಬ್ಬಂದಿಗೆ ಪಾಸಿಟೀವ್ ಬಂದಿದ್ದು ಬ್ಯಾಂಕಿನ ಉಳಿದ ಸಿಬ್ಬಂದಿ ಸ್ವಾಬ್ ಟೆಸ್ಟ್‍ಗೆ ಒಳಪಟ್ಟಿದ್ದಾರೆ.

 

(ಬರಗೂರು ವಿರೂಪಾಕ್ಷ)

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link