ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಿರ್ಲಕ್ಷ : ಸಾರ್ವಜಿಕರಿಂದ ದಿಢೀರ್ ಪ್ರತಿಭಟನೆ

 ಗುಬ್ಬಿ : 

??????

      ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷದಿಂದ ಇಡಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮದಲ್ಲೂ ಅಭಿವೃದ್ಧಿಯೆ ಮರೀಚಿಕೆಯಾಗಿದೆ ಕೂಡಲೆ ಅಬಿವೃದ್ಧಿ ಅಧಿಕಾರಿಯನ್ನು ಬದಲಾಯಿಸುವಂತೆ ಒತ್ತಾಯಿಸಿ ಅಮ್ಮನಘಟ್ಟ ಗ್ರಾ.ಪಂ ಸದಸ್ಯರು ಪಂಚಾಯಿತಿ ಕಚೇರಿ ಬಾಗಿಲು ಹಾಕಿ ದಿಢೀರ್ ಪ್ರತಿಭಟನೆ ನಡೆಸಿದರು.

      ತಾಲ್ಲೂಕಿನ ಅಮ್ಮನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಹಲವು ಸದಸ್ಯರು ಒಗ್ಗೂಡಿ ಪಂಚಾಯಿತಿ ಕಚೇರಿ ಬಾಗಿಲು ಹಾಕಿ ಸಿಬ್ಬಂದಿಗಳನ್ನು ಕಚೇರಿಯಿಂದ ಹೊರ ಇಟ್ಟು ಪ್ರತಿಭಟನೆ ನಡೆಸಿದರು ಕಳೆದ ನಾಲ್ಕು ತಿಂಗಳಿಂದ ಸಾರ್ವಜನಿಕರಿಗೂ ಸದಸ್ಯರಿಗೂ ಸಿಗದ ಪಿ.ಡಿ.ಓ ಅಶೋಕ್ ಬಸವನಾಳ ಕಚೇರಿಗೆ ಅಪರೂಪಕ್ಕೆ ಬರುತ್ತಾರೆ ಬಂದರೂ ಒಂಡೆರಡು ಗಂಟೆಗಳಲ್ಲಿ ಜಾಗ ಖಾಲಿ ಮಾಡಿ ಸಿಬ್ಬಂದಿಗಳಿಂದ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಾರೆ ಅಭಿವೃದ್ಧಿ ಕೆಲಸಗಳ ಕುರಿತು ಚರ್ಚಿಸಲು ಸಭೆ ನಡೆಸಲು ಮನವಿ ಮಾಡಿದರೂ ಡೋಂಟ್‍ಕೇರ್ ಎನ್ನುವ ಪಿ.ಡಿ.ಓ ನಮಗೆ ಬೇಕಿಲ್ಲ ಎಂದು ಚುನಾಯಿತ ಪ್ರತಿನಿಧಿಗಳೆ ದರಣಿ ನಡೆಸಿದ್ದು ಸ್ಥಳೀಯ ಜನರಲ್ಲಿ ಅಚ್ಚರಿ ಮೂಡಿಸಿತ್ತು.

      ಸಾಮಾನ್ಯ ಸಭೆಯನ್ನು ನಡೆಸದೆ ಅಭಿವೃದ್ಧಿ ಅದಿಕಾರಿ ಬೇಜವಾಬ್ದಾರಿತನ ಮಾಡಿದ್ದಾರೆ ಅವರ ಕೈ ಕೆಳಗಿನ ಸಿಬ್ಬಂದಿಗಳು ಸಹ ಕಚೇರಿಯತ್ತ ಬಾರದಂತಾಗಿದ್ದರು 15 ನೇ ಹಣಕಾಸು ಯೋಜನೆಯನ್ನೂ ಈ ಕಚೇರಿಯಲ್ಲಿ ಮಾತ್ರ ಅನುಷ್ಠಾನ ಮಾಡಿಲ್ಲ ವಾಸಸ್ಥಳ ದೃಢೀಕರಣ ಪತ್ರಕ್ಕೆ ತಿಂಗಳು ಅಲೆಯುವಂತಾಯಿತು ಜನರಿಗೆ ಮೂಲಭೂತ ಸವಲತ್ತು ಒದಗಿಸಲು ಪರದಾಡುವಂತಾದ ಈ ಕೋವಿಡ್ ತುರ್ತುಪರಿಸ್ಥಿತಿಯಲ್ಲೂ ಕಚೇರಿಗೆ ಬರುತ್ತಿಲ್ಲ ಕೋವಿಡ್ ಜಾಗೃತಿ ಕೆಲಸ ಹಾಗೂ ಮುನ್ನಚ್ಚರಿಕೆ ಕ್ರಮವಹಿಸಲಿಲ್ಲ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಬಂದಿರುವ ಬಗ್ಗೆ ಕೂಡಾ ಮಾಹಿತಿ ಇಲ್ಲದ ಇಂತಹ ಅಧಿಕಾರಿಯಿಂದ ಪಂಚಾಯಿತಿ ಅಭಿವೃದ್ದಿ ಕಾಣದು ಕೂಡಲೆ ಪಿ.ಡಿ.ಓ ಬದಲಿಸಬೇಕು ಎಂದು ಪಟ್ಟು ಸಾರ್ವಜನಿಕರು ಹಿಡಿದರು.

      ಗ್ರಾಮ ಪಂಚಾಯತಿಯ ಹೊಸ ಕಟ್ಟಡ ನಿರ್ಮಾಣವಾಗಿ 7 ವರ್ಷಗಳಾದರೂ ಸಹ ಇದುವರೆಗೂ ಅದನ್ನು ಉದ್ಘಾಟಿಸುವ ಗೋಜಿಗೆ ಹೋಗಿಲ್ಲ ಈಗಾಗಲೇ ಕಟ್ಟಡ ಪಾಳುಕೊಂಪೆಯಾಗಿದೆ 4 ವರ್ಷದ ಹಿಂದೆ ಆರಂಭಿಸಿದ ಶೌಚಾಲಯ ನಿರ್ಮಾಣ ಆಮೆಗತಿಯಲ್ಲಿ ಸಾಗಿದೆ ಕಚೇರಿಯ ಮಹಿಳಾ ಸಿಬ್ಬಂದಿಗಳಿಗೆ ಮತ್ತು ಮಹಿಳಾ ಸದಸ್ಯರಿಗೂ ಶೌಚಾಲಯ ನಿರ್ಮಿಸದ ಅದಿಕಾರಿ ಗ್ರಾಮಸ್ಥರ ಆರೋಗ್ಯ ಹೇಗೆ ಕಾಪಾಡುತ್ತಾರೆ ಎಂದು ಪ್ರಶ್ನಿಸಿದ ಸದಸ್ಯರು ಕುಡಿಯುವ ನೀರು ಬೀದಿ ದೀಪ ಮತ್ತು ಕರೋನಾ ದಂತಹ ಕಷ್ಟಕರ ಸಮಯದಲ್ಲಿ ಅಧಿಕಾರಿ ಪಂಚಾಯಿತಿಗೆ ಬಾರದೆ ಯಾವುದಕ್ಕೂ ಸ್ಪಂದಿಸದ ಅಭಿವೃದ್ಧಿ ಅದಿಕಾರಿ ಬದಲಾವಣೆ ಆಗುವವರೆವಿಗೂ ಬಾಗಿಲು ತೆಗೆಯುವುದಿಲ್ಲ ಎಂದು ಪ್ರತಿಭಟಿಸಿದರು.

      ಸ್ಥಳಕ್ಕೆ ದಾವಿಸಿದ ತಾ.ಪಂ. ಯೋಜನಾಧಿಕಾರಿ ಗಿರೀಶ್ ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಪ್ರಭಾರ ಸಹಾಯಕ ನಿರ್ದೇಶಕ ಶ್ರೀ ನಿವಾಸ್ ಪ್ರತಿಭಟನಾನಿರತರೊಂದಿಗೆ ಚರ್ಚಿಸಿದರು ಸಮಸ್ಯೆಗಳನ್ನು ಆಲಿಸಿ ಕೂಡಲೆ ಪಿ.ಡಿ.ಓ ಬದಲಿಸುವ ಭರವಸೆ ನೀಡಿದರು. ಈ ಜತೆಗೆ ಕಾರ್ಯದರ್ಶಿ ಬಿಲ್ ಕಲೆಕ್ಟರ್ ಅವರಿಗೆ ಎಚ್ಚರಿಕೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು ಪ್ರತಿಭಟನೆ ಹಿಂಪಡೆದ ಸದಸ್ಯರು ಕೂಡಲೆ ಪಿ.ಡಿ.ಓ ಬದಲಾಗದಿದ್ದರೆ ತಾ.ಪಂ.ಕಚೇರಿಗೆ ಬೀಗ ಹಾಕುವಂತೆ ಎಚ್ಚರಿಕೆ ನೀಡಿದರು.

      ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಉಪಾಧ್ಯಕ್ಷ ದಿನೇಶ್, ಸದಸ್ಯರಾದ ರಮೇಶ್, ಶ್ರೀ ನಿವಾಸ್, ದೇವರಾಜು, ಯತೀಶ್, ಭದ್ರಣ್ಣ, ಪ್ರೇಮಲತಾ ದಿನೇಶ್, ಮುದ್ದಣ್ಣ, ಮಮತಾಜ್ ಬೇಗಮ್, ಶಿವನಂಜಪ್ಪ, ಲೀಲಾ ನಟರಾಜು ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link