ತುರುವೇಕೆರೆ :

ತಾಲ್ಲೂಕಿನಲ್ಲಿ ಕೋವಿಡ್ 2ನೇ ಅಲೆ ಗಣನೀಯ ಪ್ರಮಾಣದಲ್ಲಿ ಹೇರಿಕೆ ಯಾಗುತ್ತಿರುವ ಹಿನ್ನಲೆಯಲ್ಲಿ ಪ್ರಜ್ಞಾವಂತ ನಾಗರೀಕರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಸಾರ್ವಜನಿಕ ಆಸ್ಪತ್ರೆಗಳಿಗೆ ಇದೀಗ ಮುಗಿಬಿದ್ದಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದ್ದು ಅದರಂತೆ ತುರುವೇಕೆರೆ ಯಲ್ಲಿಯೂ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿರುವುದು ತಾಲ್ಲೂಕು ಆಡಳಿಕ್ಕೆ ತಲೆನೋವಾಗಿ ಪರಿಣಮಿಸಿದೆ ಇದಕ್ಕೆ ಕಾರಣ ಸಾರ್ವಜನಿಕರು ಸರ್ಕಾರದ ಯಾವುದೆ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಸರ್ಕಾರದ ಕೊರೋನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಜನ ರಾಜಾ ರೋಷವಾಗಿ ಬೀದಿಗಿಳಿದಿರುವುದೆ ಸೋಂಕಿತರ ಹೆಚ್ಚಳಕ್ಕೆ ಮುಖ್ಯ ಕಾರಣ ಪ್ರತಿದಿನ ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಪ್ರಮಾಣ ಹೆಚ್ಚುತ್ತಿದ್ದು ತಾಲ್ಲೂಕು ಆಡಳಿತ ಯಾವುದೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ ಎಂಬುದಕ್ಕೆ ಸೋಮವಾರ ಪಟ್ಟಣದಲ್ಲಿ ಓಡಾಡುತ್ತಿದ್ದ ಜನರೆ ಉದಾಹರಣೆ ಕೆಲವೆ ಮಂದಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಪಾಲಿಸದೆ ಕೊಂಡು ಕೊಳ್ಳುವ ಭರದಲ್ಲಿ ತೊಡಗಿದ್ದರೆ ಮತ್ತೆ ಕೆಲವರು ಕಾಟಾಚಾರಕ್ಕೆ ಎಂಬಂತೆ ಕುತ್ತಿಗೆಯಲ್ಲಿ ಮಾಸ್ಕ್ ಜೋತು ಬಿಟ್ಟು ಓಡಾಡುತ್ತಿದ್ದವರೆ ಜಾಸ್ತಿ ತಾಲ್ಲೂಕು ಆಡಳಿತ ಇದರ ಬಗ್ಗೆ ಕೂಡಲೆ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಲಸಿಕೆ ಪಡೆಯಲು ದುಂಬಾಲು: ಈಗಾಗಲೇ ಪ್ರಜ್ಞಾವಂತರು ನಾಗರೀಕರು ಕೊರೋನಾ ಬಗ್ಗೆ ಎಚ್ಚೆತ್ತು ಕೊರೋನಾ ವ್ಯಾಕ್ಸಿನ್ ಪಡೆಯಲು ಸಾರ್ವಜನಿಕ ಆಸ್ಪತ್ರೆಗೆ ಮುಗಿಬಿದ್ದಿದ್ದಾರೆ ತಾಲ್ಲೂಕಿನಲ್ಲಿ 11 ಕೇಂದ್ರಗಳಲ್ಲಿ ಕೋವ್ಯಾಕ್ಷಿನ್ ನೀಡುತ್ತಿದ್ದು ಇದೀಗ ಎಚ್ಚೆತ್ತ ಹಳ್ಳಿಯ ಜನತೆ ಸಮೀಪದ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯುತ್ತಿದ್ದಾರೆ ತಾಲ್ಲೂಕಿನಲ್ಲಿ ಒಟ್ಟು 1804 ಕೊರೋನಾ ಕೇಸುಗಳಿದ್ದು ಅದರಲ್ಲಿ ಕೊರೋನಾ 2ನೇ ಅಲೆಯಲ್ಲಿ 220 ಕೇಸುಗಳು ಸಹಾ ದಾಖಲಾಗಿದ್ದು 67 ಕೇಸುಗಳು ಕೊರೋನಾ 2ನೇ ಅಲೆ ಪ್ರಾರಂಭದಿಂದ ಒಟ್ಟು 19 ಜನ ಈಗಾಗಲೇ ಕೊರೋನಾಕ್ಕೆ ತುತ್ತಾಗಿದ್ದಾರೆ.
ತಾಲ್ಲೂಕಿನಾದ್ಯಂತ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೋವಿಸೀಲ್ಡ್ ಹಾಗೂ ತಾಲ್ಲೂಕು ಕೇಂದ್ರದಲ್ಲಿ ಕೋವ್ಯಾಕ್ಸಿನ್ ನೀಡುತ್ತಿದ್ದು ಈಗಾಗಲೇ ತಾಲ್ಲೂಕಿನಾದ್ಯಂತ 18540 ಜನ ಲಸಿಕೆ ಪಡೆಯುವ ಮೂಲಕ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಭಯಭೀತಿಯಿಲ್ಲದ ಜನತೆ: ತಾಲ್ಲೂಕಿನಲ್ಲಿ ಕೊರೋನಾ 2ನೇ ಅಲೆ ಅಬ್ಬರ ಜೋರಾಗಿದ್ದರೂ ಜನತೆ ಕೇರ್ ಮಾಡುತ್ತಿಲ್ಲ. ಸುಖಾಸುಮ್ಮನೆ ಪಟ್ಟಣದಲ್ಲಿ ಓಡಾಡುತ್ತಾರೆ. ಹೋಟೆಲ್, ಅಂಗಡಿಗಳ ಬಳಿ ಜನಸಂದಣಿ ಹೆಚ್ಚಿರುತ್ತದೆ. ಕಾಟಾಚಾರಕ್ಕೆಂಬಂತೆ ಮಾಸ್ಕನ್ನು ಧರಿಸಿ ಕುತ್ತಿಗೆಯಲ್ಲಿ ಧರಿಸಿ ಓಡಾಡುತ್ತಾರೆ. ಬೈಕುಗಳಲ್ಲಿ ಮೂರು ನಾಲ್ಕು ಮಂದಿ ಒಟ್ಟಿಗೆ ಕುಳಿತು ಪೋಲೀಸರ ಕಣ್ತಪ್ಪಿಸಿ ಧೈರ್ಯವಾಗಿ ಓಡಾಡುತ್ತಾರೆ. ಇದರ ಬಗ್ಗೆ ಪೋಲೀಸರು ಸಹಾ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ತುರ್ತು ಕ್ರಮದ ಅವಶ್ಯಕತೆ:
ತಾಲ್ಲೂಕಿನಲ್ಲಿ ಕೊರೋನಾ ಹೆಚ್ಚುತ್ತಿರುವ ಬಗ್ಗೆ ತಾಲ್ಲೂಕು ಆಡಳಿತ ತುರ್ತು ಕ್ರಮ ಕೈಗೊಳ್ಳಬೇಕಾಗಿದೆ. ಕೇವಲ ಸಂತೆ ರದ್ದು ಮಾಡಿಸಿದರೆ ಸಾಲದು. ರಸ್ತೆ ಬದಿ ತರಕಾರಿ ಮಾರಾಟ ಮಾಡುವುದನ್ನು ತಡೆದು ವಾರ್ಡ್‍ಗಳಿಗೆ ತೆರಳಿ ಮಾರಾಟ ಮಾಡುವಂತೆ ಆದೇಶಿಸಬೇಕು. ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಂಗಡಿ ವ್ಯಾಪಾರಿಗಳಿಗೆ ಹಾಗೂ ಬಾರ್, ಹೋಟೆಲ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಲೀಕರುಗಳಿಗೆ ಸೂಕ್ತ ಎಚ್ಚರಿಕೆ ನೀಡಬೇಕು. ಕೆಲಸವಿಲ್ಲದೆ ಹಾಗೂ ಮಾಸ್ಕ್ ಧರಿಸದೆ ಪಟ್ಟಣಕ್ಕೆ ಬರುವವರ ಬಗ್ಗೆ ಪೊಲೀಸ್ ನಿಗಾ ವಹಿಸಿ ದಂಡ ವಿದಿಸಬೇಕು ಮದುವೆ, ಜಾತ್ರೆ, ಸಭೆ, ಸಮಾರಂಭಗಳಲ್ಲಿ ಅತಿ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು.ಶಾಲಾ ಅವದಿ ಮುಗಿದು ವಿಧ್ಯಾರ್ಥಿಗಳು ಹೊರಬಂದ ಸಂದರ್ಭದಲ್ಲಿ ಗುಂಪು ಗುಂಪಾಗಿ ಹೋಗುವುದರ ಬಗ್ಗೆ ಶಿಕ್ಷಕರುಗಳ ಗಮನಕ್ಕೆ ತರಬೇಕು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಪ್ರಿಯಾ ಮಾತನಾಡಿ ಇತ್ತಿಚೆಗೆ ಜನರಲ್ಲಿ ಕೊರೋನಾ ಬಗ್ಗೆ ಭಯ ಮೂಡುತ್ತಿದ್ದು ಲಸಿಕೆ ಪಡೆಯಲು ಹೆಚ್ಚೆಚ್ಚು ಸಂಖ್ಯೆಯಲ್ಲಿ ಆಸ್ಪತ್ರೆಗೆ ಬಂದು ಲಸಿಕೆ ಪಡೆಯುತ್ತಿದ್ದಾರೆ ಪ್ರತಿದಿನ 750 ರಿಂದ 1000 ಮಂದಿ ಲಸಿಕೆ ಪಡೆಯುತ್ತಿದ್ದು ಕೇವಲ ಲಸಿಕೆ ಪಡೆದುಕೊಂಡ ಮಾತ್ರಕ್ಕೆ ಕೊರೋನಾದಿಂದ ಪಾರಾದೆವು ಎಂಬ ಭ್ರಮೆ ಬಿಟ್ಟು ಕಡ್ಡಾಯವಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಎಂದರು ನಿಮ್ಮ ಗ್ರಾಮಗಳಿಗೆ ವೈದ್ಯರು, ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿದಾಗ ಅವರೊಂದಿಗೆ ಸಹಕರಿಸಿ. 45 ವರ್ಷ ಮೀರಿದ ಎಲ್ಲಾ ಕುಟುಂಬದ ಸದಸ್ಯರೆಲ್ಲರೂ ಲಸಿಕೆ ಪಡೆಯಿರಿ ಎಂದು ತಾಲ್ಲೂಕು ಜನತೆಯಲ್ಲಿ ಮನವಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








