ಮಧುಗಿರಿ :
ಸುಮಾರು 5 ವರ್ಷ ಪ್ರಾಯದ ಜಿಂಕೆಯೊಂದು ಮೃತಪಟ್ಟಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಗೌರಿಬಿದನೂರು ರಸ್ತೆಯ ಬೈಪಾಸ್ ಸಮೀಪವಿರುವ ಮಧುವೈನ್ಸ್ ಹಿಂಭಾಗದಲ್ಲಿ ಮಂಗಳವಾರ ಬೆಳಗ್ಗೆ ಜಿಂಕೆಯ ಕಳೇಬರವೊಂದು ಪತ್ತೆಯಾಗಿದ್ದು, ರಾತ್ರಿ ಸುರಿದ ಮಳೆ ಹಾಗೂ ಸಿಡಿಲಿನಿಂದ ಜಿಂಕೆಯು ಮೃತಪಟ್ಟಿದೆ ಎಂದು ಹೇಳಲಾಗಿದೆ.
ಸಾರ್ವಜನಿಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಅರಣ್ಯಾಧಿಕಾರಿ ಮುತ್ತುರಾಜ್ ಭೇಟಿ ನೀಡಿದ್ದರು. ನಂತರ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಜಿಂಕೆಯು ಹೃದಯಾಘಾತದಿಂದ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
