ಕುಣಿಗಲ್ :
ಪಟ್ಟಣದಲ್ಲಿ ಮಾಸ್ಕ್ ಹಾಕದೆ ಅಡ್ಡಾ ದಿಡ್ಡಿಯಾಗಿ ಓಡಾಡುತ್ತಿದ್ದ ಜನರಿಗೆ ಹಾಗೂ ಬಸ್ ಗಳಲ್ಲೂ ಸಂಚರಿಸುತ್ತಿದ್ದ ಪ್ರಯಾಣಿಕರು ಸೇರಿದಂತೆ 600 ಜನರಿಗೆ ಇಲ್ಲಿನ ಡಿ.ವೈ.ಎಸ್.ಪಿ. ರಮೇಶ್ ಅವರು ದಂಡವಿಧಿಸಿ ಮಾಸ್ಕ್ ಖಡ್ಡಾಯವಾಗಿ ಹಾಕುವಂತೆ ಎಚ್ಚರಿಕೆ ನೀಡಿದರು.
ಕುಣಿಗಲ್ ತಾಲ್ಲೂಕಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಪ್ರಕರಣದ ಹಿನ್ನೆಲೆ ಹಾಗೂ ಸರ್ಕಾರದ ಆದೇಶದಂತೆ ಪಟ್ಟಣದ ಹುಚ್ಚ ಮಾಸ್ತಿಗೌಡ ವೃತ್ತ ಹುಲಿಯೂರುದುರ್ಗ ಹಾಗೂ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋವಿಡ್- 2 ನೇ ಅಲೆಯ ಹೊಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಹಾಕದೇ ಓಡಾಡುತ್ತಿದ್ದ ಜನರಿಗೆ ತಲಾ 100 ರೂ. ದಂಡವಿಧಿಸಿದರು ಬೆಂಗಳೂರು, ಹಾಸನ, ಮಂಗಳೂರು, ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದವರಿಗೂ ಬಸ್ ನಿಲ್ಲಿಸಿ ಎಚ್ಚರಿಕೆ ಮೂಡಿಸಿದ ಅವರು ಸಾರ್ವಜನಿಕರಲ್ಲಿ ಮಾಸ್ಕ್ ಹಾಕಿಕೊಳ್ಳುವಂತೆ ಜಾಗೃತಿ ಹಾಗೂ ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ 600 ಜನರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು ಇಂದಿನ ಕೋವಿಡ್ 2ನೇ ಹಂತದಲ್ಲಿ ಅತಿವೇಗವಾಗಿ ಹರಡುತ್ತಿದ್ದು ಆಸ್ಪತ್ರೆಗಳಲ್ಲಿ ಬೆಡ್ ಗಳು ಆಮ್ಲಜನಕ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರು ತಪ್ಪದೆ ಕಡ್ಡಾಯವಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸುವ ಮೂಲಕ ಹಾಗೂ ಅಂತರ ಕಾಪಾಡಬೇಕು ಮತ್ತು ಗುಂಪು ಸೇರುವುದನ್ನು ಬಿಡಬೇಕು ಆ ಮೂಲಕ ಈ ಕೊರೋನಾ ವೈರಸ್ಸ್ನ್ನು ಹತೋಟಿಗೆ ತರಬಹುದು ಎಂದು ಅವರು ಅಲ್ಲಿನ ಜನರಿಗೆ ತಿಳಿಸಿದರು ಈ ಸಂದರ್ಭದಲ್ಲಿ ಸಿ.ಪಿ.ಐ.ಗುರುಪ್ರಸಾದ್, ಪುರಸಭಾ ಸಿ.ಒ. ರವಿಕುಮಾರ್, ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ