ತುರುವೇಕೆರೆ :
ತಾಲ್ಲೂಕಿನ ಹಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಅಶ್ವಿನಿ ಮಳೆಯ ತೀವ್ರ ಮಳೆಗಾಳಿಗೆ ತೆಂಗು, ಬಾಳೆ, ಹಾಗೂ ವಿದ್ಯುತ್ ಕಂಬಗಳು ಮುರಿದು ನೆಲಕಚ್ಚುವ ಮೂಲಕ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.
ಹಲವಾರು ವರ್ಷಗಳಿಂದ ಬೀಳು ದಿದ್ದಅಶ್ವಿನಿ ಮಳೆ ಇದೆ ಪ್ರಥಮವಾಗಿ ಶುಕ್ರವಾರ ತಡ ರಾತ್ರಿ ಗುಡುಗು, ಸಿಡಿಲು, ಮತ್ತು ಗಾಳಿಯ ಮೂಲಕ ಶುರುವಾದ ಮಳೆಗೆ ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಇಟ್ಟಿಗೆಹಳ್ಳಿಯಲ್ಲಿ ಸಾವಿರಕ್ಕೂ ಹೆಚ್ಚು ಹಾಗೂ ಮಲ್ಲೂರಿನ ರೈತ ರಾಮಣ್ಣರ ಬಾಳೆಗಿಡಗಳು ಮುರಿದು ಸಂಪೂರ್ಣ ನೆಲಕಚ್ಚ್ಚಿವೆ.
ದಬ್ಬೇಘಟ್ಟ ಹೋಬಳಿಯ ಕೆ.ಹೊಸೂರು ಆಸುಪಾಸು ಒಂದೆರಡು ತೆಂಗಿನ ಮರಗಳು ಗಾಳಿಗೆ ಧರೆಗುರುಳಿವೆ ಅದೆ ಊರಿನ ಹೊರ ವಲಯದಲ್ಲಿ ಮುದ್ದನಹಳ್ಳಿ ಫೀಡರ್ ವ್ಯಾಪ್ತಿಯ ತೆಂಗಿನ ಮರ ಗಾಳಿಗೆ ಬಿದ್ದು 11 ಕೆ.ವಿ ವಿದ್ಯುತ್ ಕಂಬ ಮುರಿದು ಬಿದ್ದಿದೆ ಹಾಗೂ ಮಾಯಸಂದ್ರ ಹೋಬಳಿಯ ಇಟ್ಟಿಗೆಹಳ್ಳಿ ಬಳಿ ವಿದ್ಯುತ್ ಪರಿವರ್ತಕ ಮಳೆಗಾಳಿಗೆ ಮುರಿದು ಬಿದ್ದಿದೆ. ಪಟ್ಟಣದ ಮಾಯಸಂದ್ರ ರಸ್ತೆ ಇಟ್ಟಿಗೆಹಳ್ಳಿ ಮರದ ಕೊಂಬೆಗಳು ಅಲ್ಲಲ್ಲಿ ಮುರಿದು ಬಿದ್ದಿವೆ ದಂಡಿನಶಿವರ ಹಾಗೂ ಕಸಬಾದಲ್ಲಿಯೂ ಹೆಚ್ಚು ಮಳೆಯಾಗಿದ್ದರೂ ಯಾವುದೆ ಹಾನಿಯಾಗಿಲ್ಲ.
ತುರುವೇಕೆರೆ ಪಟ್ಟಣದ ಜಿ.ಜೆ.ಸಿ. ಕ್ರೀಡಾಗಣನದಲ್ಲಿ ಶುಕ್ರವಾರ ಸುರಿದ ಅಶ್ವಿನಿ ಮಳೆಯಿಂದ ಕ್ರೀಡಾಂಗಣ ಮಳೆಯ ನೀರಿನಿಂದ ಆವೃತವಾಗಿ ಕೆರೆಯಂತಾಗಿದ್ದು ವಾಯು ವಿಹಾರಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ನಿರಾಸೆಯಾಯಿತು ವಾಯುವಿಹಾರಿಗಳು ಕಲ್ಲು ಹಾಸಿನ ಮೇಲೆ ನಡಿಗೆ ಮಾಡಿದರೆ ಕ್ರಿಕೆಟ್ ಕ್ರೀಡಾಪಟುಗಳು ನೀರಿನ ಮದ್ಯೆ ಬಯಲಿನಲ್ಲಿ ಕ್ರಿಕೆಟ್ ಆಟವಾಡುತ್ತಿದ್ದು ಕಾಣಬಂತು.
ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ರೈತರ ಕೃಷಿ ಕಾರ್ಯ ಚಟುವಟಿಕೆಗಳು ಗರಿಗೆದರಿವೆ. ಪಟ್ಟಣದಲ್ಲಿ 7 ಸೆಂಟಿ.ಮೀಟರ್ ಮಳೆಯಾಗಿದ್ದು ಮಾಯಸಂದ್ರ 21, ದಬ್ಬೇಘಟ್ಟ 40, ಸಂಪಿಗೆ17, ದಂಡಿನಶಿವರ 08 ಮಿ.ಮೀಟರ್ ಮಳೆಯಾಗಿರುವುದು ಮಳೆ ಮಾಪಕದಲ್ಲಿ ವರದಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ