ಚಿಕ್ಕನಾಯಕನಹಳ್ಳಿ : ಸರ್ಕಾರಿ ಶಾಲಾ ಮೈದಾನಕ್ಕೆ ಮಾರುಕಟ್ಟೆ ಸ್ಥಳಾಂತರ

 ಚಿಕ್ಕನಾಯಕನಹಳ್ಳಿ : 

      ಕೊರೋನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಡೆಯುವ ಬೆಳಗಿನ ಮಾರುಕಟ್ಟೆಯನ್ನು ಕೆ.ಎಂ.ಎಚ್.ಪಿ.ಎಸ್. ಮೈದಾನದಲ್ಲಿ ನಡೆಸಲು ಪುರಸಭೆ ವ್ಯಾಪಾರಸ್ತರಿಗೆ ಸ್ಥಳ ಗುರುತಿಸಿದೆ.

      ತಾಲ್ಲೂಕಿನಲ್ಲಿ ಕೊರೋನ ಸೊಂಕೀತರ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳ ಸಭೆ ನಡೆಸಿದಾಗ ಮುಖ್ಯಧಿಕಾರಿಗಳಿಗೆ ಮಾರುಕಟ್ಟೆ ಸ್ಥಳವನ್ನು ವಿಶಾಲವಾದ ಶಾಲಾ ಅವರಣಕ್ಕೆ ಬದಲಾಯಿಸಲು ಸೂಚಿಸಿದ್ದರು, ಅವರ ಆದೇಶದಂತೆ ಪಟ್ಟಣದ ಮಾರುಕಟ್ಟೆಯನ್ನು ಸರ್ಕಾರಿ ಪ್ರೌಢಶಾಲೆ ಶಾಲಾ ಆವರಣದಲ್ಲಿ ನಾಳೆಯಿಂದ ಮೇ 4 ರವರೆಗೆ ನಡೆಸುವಂತೆ ಪುರಸಭೆ ವ್ಯಾಪಾರಸ್ತರಿಗೆ ತಿಳಿಸಿದೆ.

      ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಸೋಮವಾರ ತಮ್ಮ ಸ್ಥಳವನ್ನು ಗುರುತಿಸಲು ರಂಗೋಲಿ ಹಾಗೂ ಚೀಲಗಳನ್ನು ಸ್ಥಳದಲ್ಲಿ ಇಟ್ಟಿದ್ದರು ಬೆಳಿಗ್ಗೆ 6 ರಿಂದ 10 ರವರೆಗೆ ವ್ಯಾಪಾರಸ್ಥರು ಮಾರುಕಟ್ಟೆ ಯಲ್ಲಿ ವ್ಯಾಪಾರ ಮಾಡಬಹುದಾಗಿದೆ.

      ಪಟ್ಟಣದ ವೆಂಕಟರಮಣ ದೇವಾಲಯದ ಬಳಿ ಬೆಳಗಿನ ಮಾರುಕಟ್ಟೆ ನಡೆಯುವಾಗ ಅಲ್ಲಿನ ಸ್ಥಳ ಚಿಕ್ಕದಾದ್ದರಿಂದ ವ್ಯಕ್ತಿಗತ ಅಂತರ ಪಾಲನೆ ಮಾಡಲು ವ್ಯಾಪಾರಸ್ಥರಿಗೂ ಹಾಗೂ ಸಾರ್ವಜನಿಕರಿಗೂ ಕಷ್ಟವಾದ್ದರಿಂದ ಮಾರುಕಟ್ಟೆ ಸ್ಥಳವನ್ನು ವಿಶಾಲವಾದ ಸ್ಥಳಕ್ಕೆ ಬದಲಿಸಲಾಗಿದೆ.

      ಈಗ ಪುರಸಭೆ ಗುರುತಿಸಿರುವ ಸರ್ಕಾರಿ ಪ್ರೌಢಶಾಲಾ ಆವರಣ ಶಾಲಾ ಕಾಲೇಜಿಗೆ ರಜೆ ಇರುವುದರಿಂದ ಮಕ್ಕಳಿಗೂ ವ್ಯಾಪಾರಸ್ಥರಿಗೂ ಮಾರುಕಟ್ಟೆಯಿಂದ ಯಾವುದೆ ತೊಂದರೆಯಾಗುವುದಿಲ್ಲ. ವೆಂಕಟರಮಣ ದೇವಾಲಯದ ಬಳಿ ನಡೆಯುತ್ತಿರುವ ಬೆಳಗಿನ ಮಾರುಕಟ್ಟೆಯಲ್ಲಿ 50 ರಿಂದ 60 ಅಂಗಡಿಗಳು ಇರುತ್ತವೆ, ಸರ್ಕಾರಿ ಪ್ರೌಢಶಾಲೆ ಬಳಿ ನಡೆಯುವ ಮಾರುಕಟ್ಟೆ ಗೂ 60ಕ್ಕೂ ಹೆಚ್ಚಿನ ವ್ಯಾಪಾರಸ್ಥರು ಸ್ಥಳ ಗುರುತು ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap