ಕುಣಿಗಲ್ : ನಿರ್ಮಾಪಕ, ನಟಿ ಮಾಲಾಶ್ರೀ ಪತಿ ರಾಮು ಅಂತ್ಯಕ್ರಿಯೆ

ಕುಣಿಗಲ್ :

      ಖ್ಯಾತ ಚಲನಚಿತ್ರ ನಿರ್ಮಾಪಕ ಕೋಟಿ ರಾಮು ಕೊರೋನಾ ಗೆ ತುತ್ತಾದ ಹಿನ್ನಲೆಯಲ್ಲಿ ಅವರ ಹುಟ್ಟೂರು ಕೊಡಗಿಹಳ್ಳಿ ತೋಟದಲ್ಲಿ ಅಂತ್ಯಸಂಸ್ಕಾರವನ್ನು ಕೋವಿಡ್ ನಿಯಮದಂತೆ ಅಗ್ನಿಸ್ಪರ್ಶ ಮಾಡಲಾಯಿತು.

      ಚಲನಚಿತ್ರ ನಿರ್ಮಾಪಕ ಕೋಟಿ ರಾಮು 52 ಕೊರೋನಗೆ ತುತ್ತಾದ ಹಿನ್ನೆಲೆಯಲ್ಲಿ ಅವರ ಹುಟ್ಟೂರಾದ ಕುಣಿಗಲ್ ತಾಲ್ಲೂಕಿನ ಅಮೃತೂರು ಹೋಬಳಿ ಕೊಡಗಿಹಳ್ಳಿ ಗ್ರಾಮದ ಅವರ ತೋಟದಲ್ಲಿ ಕೋವಿಡ್ ನಿಯಮದಂತೆ ಅವರ ಪತ್ನಿಯಾದ ಚಿತ್ರನಟಿ ಮಾಲಾಶ್ರೀ ಮಗ ಹಾಗೂ ಪುತ್ರಿ ಮತ್ತು ಅವರ ಸೋದರನ ಪುತ್ರ ರಂಗಸ್ವಾಮಿ ಇವರು ಪಿ.ಪಿ ಕಿಟ್ ಧರಿಸಿ ಅಂತಿಮ ನಮನ ಸಲ್ಲಿಸಿ ಮೃತದೇಹಕ್ಕೆ ಅಗ್ನಿಸ್ಪರ್ಶ ನೆರವೇರಿಸಿದರು.

ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ರಾಮು ತಮ್ಮ ಬಾಲ್ಯದಲ್ಲಿ ಹುಟ್ಟೂರಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಮುಗಿಸಿ ಬೆಂಗಳೂರಿಗೆ ಹೋಗಿ ಪದವಿ ಶಿಕ್ಷಣ ಮುಗಿಸಿ ವಾರ್ಡ್ ಬಾಯ್ ಆಗಿ ಕೆಲಸ ಮಾಡಿ ಚಲನಚಿತ್ರ ಕ್ಷೇತ್ರದಲ್ಲಿ ವಿತರಕರಾಗಿ ಚಿತ್ರ ನಿರ್ಮಾಪಕರಾಗಿ ನಾಡಿನ ಹೆಸರಾಂತ ಚಿತ್ರನಟರ 37ಕ್ಕೂ ಹೆಚ್ಚು ಚಲನಚಿತ್ರಗಳನ್ನು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಸಿನಿಮಾ ತೆಗುಯುತ್ತಿದ್ದರಿಂದ ಇವರನ್ನು ಕೋಟಿ ರಾಮು ಎಂದೆ ಹೆಸರು ವಾಸಿಯಾಗಿದ್ದರು.

      ಇವರ ನಿಧನದಿಂದ ಕನ್ನಡ ಚಿತ್ರರಂಗ ತುಂಬಲಾರದ ನಷ್ಟ ಉಂಟಾಗಿದೆ ತಾಲ್ಲೂಕಿನ ನಾಗರಿಕರು ಮತ್ತು ಸಂಸದ ಡಿ.ಕೆ.ಸುರೇಶ್, ಶಾಸಕ ಡಾ. ರಂಗನಾಥ್ , ರಾಜ್ಯ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಡಿ. ಕೃಷ್ಣಕುಮಾರ್ ಮಾಜಿ ಶಾಸಕ ಡಿ. ನಾಗರಾಜಯ್ಯ ಮಾಜಿ ಸಂಸದ ಎಸ್ಪಿ ಮುದ್ದಹನುಮೇಗೌಡ, ಮಾಜಿ ಶಾಸಕ ಬಿ.ಬಿ ರಾಮಸ್ವಾಮಿಗೌಡ ಮುಂತಾದವರು ಸಂತಾಪ ಸೂಚಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link