ಕೊರೋನಾಗೆ ಎಚ್ಚೆತ್ತು ಕೊಳ್ಳದ ಜನತೆಗೆ ಪೊಲೀಸ್ ಪಾಠ

ತಿಪಟೂರು :

     ತಾಲ್ಲೂಕಿನಲ್ಲಿ ಗುರುವಾರವು ಸಹ ಶತಕದ ಸನಿಹವೆ ಸೋಂಕಿತರು ಕಂಡುಬಂದಿದ್ದು 93 ಮಂದಿಗೆ ಕೊರೋನಾದೃಢವಾಗಿದ್ದು ಇಂದು 96 ಜನರು ಸೋಂಕಿನಿಂದ ಮುಕ್ತವಾಗಿದ್ದು ತಾಲ್ಲೂಕಿನಲ್ಲಿ ಒಟ್ಟು 486 ಕೊರೋನಾ ಸಕ್ರಯ ಪ್ರಕರಣಗಳಿವೆ.

      ಇಂದು ಕೊರೋನಾ ಕಫ್ರ್ಯೂ ಇದ್ದರು ಸಹ ಬೆಳಗ್ಗೆ ಅನಾಶ್ಯಕವಾಗಿ ಸಂಚಾರ ಮಾಡುತ್ತಿರುವ ಜನರನ್ನು ಆರಕ್ಷಕರು ತಪಾಸಣೆ ಮಾಡಿ ಕಳುಹಿಸುತ್ತಿದ್ದರು ಸಹ ಆರಕ್ಷಕರ ಇರುವ ವರೆಗೂ ರಸ್ತೆಗಳಲ್ಲಿ ಜನಸಂದಣಿ ವಿರಳವಾಗಿರುತ್ತದೆ ಆದರೆ ಜನರು ಸಹ ಇನ್ನು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ ಏನಾದರು ಕಾರಣವನ್ನು ಹುಡುಕಿಕೊಂಡು ಮನೆ ಇಂದ ಹೊರಬರುತ್ತಾರೊ ಇಲ್ಲ ಹೊರಗಡೆ ಹೇಗಿದೆ ಬೆಂಗಳೂರು ತುಮಕೂರಿನಲ್ಲಿ ಹಾಗೂ ಇನ್ನಿತರೆಕಡೆ ಆರಕ್ಷಕ್ಷರು ಬ್ಯಾಟಿಂಗ್ ಪ್ರಾರಂಭಿಸಿದ್ದಾರೆ. ಇಲ್ಲಿ ಏನು ಮಾಡುತ್ತಾರೊ ಎಂದು ಸುಲಭವಾಗಿ ರಸ್ತೆಗೆ ಇಳಿಯುತ್ತಿದ್ದಾರೆ. ಇನ್ನೊಂದೆಡೆ ಮುಖ್ಯರಸ್ತೆಯಲ್ಲಿ ಆರಕ್ಷಕರಿದ್ದರೆ ಇನ್ನಿತರೆ ಕಡೆಗಳಿಂದ ನುಸುಳಿಕೊಂಡು ಹೋಗುತ್ತಿದ್ದಾರೆ.

ಸಿಗರೇಟ್, ಸ್ಟಾರ್, ಆರ್.ಎಂ.ಡಿ.ಗೆ ಬಂಗಾದರ ಬೆಲೆ : 

      ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿರು ವ್ಯಾಪಾರಸ್ಥರು ಈಗಾಗಲೇ ಸಾಕಷ್ಟು ಗುಟ್ಕಾ, ಪಾನ್ ಮಸಾಲ, ಮತ್ತು ಸಿಗರೇಟ್‍ಗಳನ್ನು ದಾಸ್ತಾನು ಮಾಡಿದ್ದು ಅವುಗಳನ್ನು ಕಫ್ರ್ಯೂ ಸಮಯದಲ್ಲಿ ಹೆಚ್ಚಿನದರಕ್ಕೆ ಮಾರಾಟಮಾಡಿ ಲಾಭಗಳಿಸುವ ಹುನ್ನಾರಿನಲ್ಲಿದ್ದರು, ಆದರೆ ಗುಟ್ಕಾ ಸಿಗರೇಟ್ ಪ್ರಿಯರು ನಾವೇನು ವ್ಯಾಪಾರಸ್ಥರಿಗೆ ಕಡಿಮೆ ಇಲ್ಲವೆಂದು ಕಫ್ರ್ಯೂ ಆದೇಶ ಹೊರಬೀಳುತ್ತಿದ್ದಂತೆಯೆ ಅಂಗಡಿಗಳ ಹೋದರೆ ಆಗಲೆ ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ಧರಕ್ಕೆ ಮಾರಟಾಮಾಡುತ್ತಾರೆ. ಇನ್ನು ಕೆಲ ಅಂಗಡಿಗಳಲ್ಲಿ ಬೆಳಗ್ಗೆ 10 ಗಂಟೆ ನಂತರವೂ ಕದ್ದು ಮುಚ್ಚಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಇವುಗಳನ್ನು ಹುಡುಕುವಲ್ಲಿ ಕೊರೋನಾವನ್ನು ಮರೆಯುತ್ತಿರುವುದು ಸಹ ಕೊರೋನಾ ಸೋಂಕಿತರು ಹೆಚ್ಚಾಗಲು ಕಾರಣವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link