ಮಿಡಿಗೇಶಿ :
ಛತ್ತೀಸ್ಗಡ ರಾಜ್ಯದಿಂದ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರಿಗೆ ಭತ್ತವನ್ನು ಸಾಗಿಸುತ್ತಿದ್ದ ಲಾರಿ (14 ಚಕ್ರದ್ದು ಎಪಿ 02 ಟಿಇ 5985) ಯು ಮೇ 01 ರ ಸಂಜೆ 6 ಗಂಟೆಯಲ್ಲಿ ಲಾರಿಯ ಸ್ಟೇರಿಂಗ್ ಜಾಮ್ ಆಗಿ, ರಾಜ್ಯ ಹೆದ್ದಾರಿಯ ಮಿಡಿಗೇಶಿ-ಚಿನ್ನೇನಹಳ್ಳಿ ಮಧ್ಯದಲ್ಲಿ ರಸ್ತೆ ಬದಿಗೆ ಲಾರಿ ಪಲ್ಟಿಯಾಗಿ ಬಿದ್ದಿರುವ ಬಗ್ಗೆ ವರದಿಯಾಗಿದೆ. ‘
ಲಾರಿ ಚಾಲಕ ರಾಜಸ್ಥಾನ ರಾಜ್ಯದ ಮುಸ್ತಾಫ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ