ಸ್ವಂತ ಖರ್ಚಿನಲ್ಲಿ ಅನಾಥ ಶವ ಸಂಸ್ಕಾರಗೈವ ಅಪರೂಪದ ಪೇದೆ..!

 ಶಿರಾ :

      ಇವರ ಹೆಸರು ಮಲ್ಲಿಕಾರ್ಜುನ್. ತೋವಿನಕೆರೆ ಸಿರಾ ನಗರ ಠಾಣೆಯಲ್ಲಿ ಸುಮಾರು ಆರೇಳು ವರ್ಷದಿಂದ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

      ವಾರಗಳ ಹಿಂದೆ ಬುಕ್ಕಾಪಟ್ಟಣ ಬಳಿಯ ಪಶು ಆಸ್ಪತ್ರೆಯ ಬಳಿ ಭಿಕ್ಷುಕನೋರ್ವ ಅಸು ನೀಗಿದ್ದರು. ವಾರಸುದಾರರಿಲ್ಲದ ಈ ಶವವನ್ನು ನಿಯಮಾನುಸಾರ ಶವಾಗಾರದಲ್ಲಿ ಅವರ ಕಡೆಯವರು ಯಾರಾದರೂ ಬರುವರೆಂದು ಇಡುವುದು ನಿಯಮವಷ್ಟೆ. ಆದರೆ ಲಾಕ್‍ಡೌನ್ ಜಾರಿಯಾದ ಪರಿಣಾಮ ಕಾರ್ಯ ಒತ್ತಡದಿಂದ ಇನ್ನು ವಾರಗಳ ಕಾಲ ಈ ಶವದ ಅಂತಿಮ ಕಾರ್ಯ ಮಾಡಲಾಗದೆಂಬ ಮಾನವೀಯ ಕಳಕಳಿಯಿಂದ ಆತ್ಮ ತೃಪ್ತಿಗಾಗಿ ಹಾಗೂ ಆಸಕ್ತಿಯಿಂದ ಸ್ವಂತ ಖರ್ಚಿನಲ್ಲಿ ಭಿಕ್ಷುಕನ ಅಂತಿಮ ಕಾರ್ಯಗಳನ್ನು ಮೇ. 9 ರಂದು ಆರಕ್ಷಕ ಮಲ್ಲಿಕಾರ್ಜುನ್ ತಾವೇ ನೆರವೇರಿಸಿದ್ದಾರೆ.

      ಅಚ್ಚರಿಯ ಸಂಗತಿ ಎಂದರೆ ಇದು ಇವರ ಮೊದಲ ಶವ ಸಂಸ್ಕಾರದ ಕಾರ್ಯವಲ್ಲ. ಯಾವುದೇ ಸದ್ದು ಗದ್ದಲವಿಲ್ಲದೆ ಈಗಾಗಲೇ ಹಲವಾರು ವಾರಸುದಾರರಿಲ್ಲದ ಅನೇಕ ಮೃತ ದೇಹಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿಯೇ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದಾರೆ. ಪೊಲೀಸರೆಂದರೆ ಒರಟು, ಗಡಸು ಸ್ವಭಾವದ, ಮಾನವೀಯ ಅಂತಃಕರಣವಿಲ್ಲದವರೆಂದು ಸುಖಾಸುಮ್ಮನೆ ಟೀಕೆ ಮಾಡುವ ಮಂದಿಗೆ ಮಲ್ಲಿಕಾರ್ಜುನ್‍ನಂತಹ ಕೆಲ ಆರಕ್ಷಕರ ಕರ್ತವ್ಯ ನಿಷ್ಠೆ ಉತ್ತಮ ಆದರ್ಶವಾಗಬಲ್ಲರು.
 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap