ಮಧುಗಿರಿ :
ಲಾಕ್ಡೌನ್ ಇದ್ದರೂ ಮಧುಗಿರಿಯಲ್ಲಿ ಅನವಶ್ಯಕವಾಗಿ ದ್ವಿಚಕ್ರ ವಾಹಗಳಲ್ಲಿ ಸಂಚರಿಸುತ್ತಿದ್ದವರಿಗೆ ದಂಡ ವಿಧಿಸದೆ, ಲಾಠಿ ರುಚಿ ತೋರಿಸದೆ ಪೊಲೀಸ್ ಠಾಣಾ ಆವರಣದಲ್ಲಿ ಕುಳ್ಳ್ಳಿರಿಸಿದರು. ಅಷ್ಟೇ ಅಲ್ಲದೆ ಅವರುಗಳಿಗೆ ಡಿವೈಎಸ್ಪಿ ಕೆ.ಜಿ. ರಾಮಕೃಷ್ಣ ಉಪಾಹಾರವನ್ನೂ ಕೊಡಿಸಿ, ಹಿತವಚನ ಹೇಳಿ ಕಳುಹಿಸಿರುವುದು ಜನತೆಯ ಪ್ರಶಂಸೆಗೆ ಒಳಗಾಗಿದೆ.
ಕಳೆದೆರಡು ದಿನಗಳಿಂದ ಮಧುಗಿರಿ ಪೊಲೀಸರು ಲಾಕ್ಡೌನ್ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶ ಪಡಿಸಿಕೊಂಡು ಜಾಗೃತಿ ಮೂಡಿಸಲು ಯತ್ನಿಸಿದ್ದಾರೆ. ಆದರೆ ವಾಹನ ವಶಪಡಿಸಿಕೊಂಡ ತಕ್ಷಣವೆ ಜನಪ್ರತಿನಿಧಿಗಳಿಂದ ಹಾಗೂ ಪ್ರಭಾವಿ ವ್ಯಕ್ತಿಗಳಿಂದ ವಾಹನ ಬಿಡಿಸಿಕೊಳ್ಳಲು ಸವಾರರು ಪ್ರಭಾವ ಬೀರುತ್ತಿದ್ದುದು ಸರ್ವೆ ಸಾಮಾನ್ಯವಾಗಿತ್ತು. ಒತ್ತಡಕ್ಕೆ ಸಿಲುಕಿದ ಪೆÇಲೀಸರಿಗೆ ಇಂಥ ಕ್ರಮದಿಂದ ಸ್ವಲ್ಪ ರಿಲೀಫ್ ಸಿಕ್ಕಿದಂತಾಗಿದೆ.
ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ ವಿಭಿನ್ನವಾಗಿ ತಮ್ಮ ಕಚೇರಿ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಸವಾರರನ್ನು ಆವರಣದಲ್ಲಿ ಕುಳ್ಳ್ಳಿರಿಸಿದರು. ನೂರು ರೂ. ದಂಡ ಹಾಕಿದರೆ ಕಟ್ಟುತ್ತಾರೆ, ಐನೂರು ರೂ. ದಂಡ ಹಾಕಿದರೆ ಹೊರೆಯಾಗುತ್ತದೆ.
ಇದ್ಯಾವುದೂ ಬೇಡವೆಂದು ತೀರ್ಮಾನಿಸಿ, ಸಂಜೆಯವರೆಗೂ ಆವರಣದಲ್ಲೇ ಸವಾರರನ್ನು ಕುಳ್ಳಿರಿಸಿದ್ದಾರೆ. ಬೆಳಗಿನ ಉಪಾಹಾರವಲ್ಲದೆ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ. ಊಟ ಮಾಡದ ಅವರಿಗೆ ತಿಳಿ ಹೇಳಿ ಊಟ ಮಾಡುವಂತೆ ಮನವೊಲಿಸಿ, ಡಿವೈಎಸ್ಪಿ ಮಾನವೀಯತೆ ಮೆರೆದಿದ್ದಾರೆ. ಈ ವೇಳೆ ಸಿಬ್ಬಂದಿ ಗಣೇಶ್, ಶ್ರೀನಿವಾಸ್, ರಾಮಕೃಷ್ಣ, ರಾಘವೇಂದ್ರ ಮತ್ತು ರಂಗರಾಜು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
