ಕೊರಟಗೆರೆ :
ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಕೊರೊನಾ ವ್ಯಕ್ತಿಯ ಶವವನ್ನು 3 ಗಂಟೆಗಳ ಕಾಲ ಮತ್ತೊಬ್ಬ ರೋಗಿಯ ಬಳಿಯೆ ಬಿಟ್ಟರೆ ಆತನ ಆತ್ಮಬಲ ಕುಗ್ಗುವುದರ ಜೊತೆ ಸೋಂಕಿನ ಪ್ರಮಾಣ ದ್ವಿಗುಣ ಆಗುವುದಿಲ್ಲವೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಕೊರಟಗೆರೆ ಟಿಎಚ್‍ಓ ವಿಜಯಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‍ಗೆ ಶುಕ್ರವಾರ ದಿಢೀರ್ ಭೇಟಿ ನೀಡಿ ಕೊರೊನಾ ರೋಗಿಗಳಿಂದ ಮಾಹಿತಿ ಪಡೆದು ಅಧಿಕಾರಿಗಳ ತುರ್ತು ಸಭೆ ನಡೆಸಿ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ತುರ್ತುಕ್ರಮಕ್ಕೆ ಆದೇಶ ಮಾಡಿದರು.
ಕೊರಟಗೆರೆ ಕ್ಷೇತ್ರದ ಜನತೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಆದ್ಯತೆ ನೀಡಿ ಆಮ್ಲಜನಕ ಪೂರೈಕೆ ಇರುವಂತಹ ಹಾಸಿಗೆಯನ್ನು ಮೀಸಲಿಡಬೇಕು. ಕೊರೊನಾ ರೋಗದ ಪರೀಕ್ಷೆ ಹಗಲಿನಲ್ಲಿ ಮಾತ್ರ ನಡೆಯುತ್ತಿದೆ ಎಂಬ ಆರೋಪವಿದೆ. ತುರ್ತು ಚಿಕಿತ್ಸೆಗಾಗಿ ರೋಗಿಗಳು ರಾತ್ರಿ ಆಸ್ಪತ್ರೆಗೆ ಬಂದರೆ ಅವರ ಆರೋಗ್ಯ ಪರಿಸ್ಥಿತಿ ಏನಾಗಬೇಕು. ದಿನದ 24 ಗಂಟೆಯು ಕೊರೊನಾ ರೋಗದ ಪರೀಕ್ಷೆ ಮಾಡಬೇಕು ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಪ್ರಕಾಶ್‍ಗೆ ಸೂಚಿಸಿದರು.
ಕೊರೊನಾ ರೋಗಿಗಳ ಸಾವಿನ ಅಂಕಿ ಅಂಶ ಮುಚ್ಚಿಡಲು ಕಾರಣವೇನು. ಪತ್ರಿಕಾ ಮಾಧ್ಯಮಕ್ಕೆ ನೀಡದಿರಲು ಭಯವೇಕೆ. ಸಾರ್ವಜನಿಕ ಆಸ್ಪತ್ರೆಯ ಆಡಳಿತದ ಮೇಲೆ ಸ್ಥಳೀಯರ ಬಹಳಷ್ಟು ಆರೋಪಿವಿದೆ. ಕೊರಟಗೆರೆ ಟಿಎಚ್‍ಓ ಮತ್ತು ಆರೋಗ್ಯಾಧಿಕಾರಿ ಪಾತ್ರವೇನು ಎಂಬುದೇ ಪ್ರಶ್ನೆಯಾಗಿದೆ. ತುರ್ತು ಪರಿಸ್ಥಿತಿಯಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಜನಸಾಮಾನ್ಯರ ಮಾನಸಿಕ ಆತ್ಮಬಲ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ ಎಂದು ತಿಳಿಸಿದರು.
ಕೊರಟಗೆರ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಒಟ್ಟು 4659 ಪಾಸಿಟಿವ್ ಕೇಸ್ ಬಂದಿವೆ. ಅದರಲ್ಲಿ ಆಸ್ಪತ್ರೆ ಮತ್ತು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 3565 ಜನ ಗುಣಮುಖರಾಗಿ ಆರೋಗ್ಯವಾಗಿದ್ದಾರೆ. ಇನ್ನುಳಿದಂತೆ 1028 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಇಲ್ಲಿಯವರೆಗೆ 46 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಕೊರೊನಾ ಸೈನಿಕರಾಗಿ ಕೆಲಸ ಮಾಡುತ್ತಿರುವ ಫ್ರಂಟ್‍ಲೈನ್ ವಾರಿಯರ್ಸ್ ಮತ್ತು ಕೊರಟಗೆರೆ ಆಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಕೊರಟಗೆರೆ ಪಟ್ಟಣದ 16 ವಾರ್ಡ್‍ಗಳು ಮತ್ತು ಪ್ರತಿಯೊಂದು ಗ್ರಾಮಕ್ಕೂ ಪ್ರತಿನಿತ್ಯ ಸ್ಯಾನಿಟೈಸರ್ ಮಾಡಬೇಕಾದ ಅನಿವಾರ್ಯತೆ ಇದೆ. ಪಪಂ ಮುಖ್ಯಾಧಿಕಾರಿ ಮತ್ತು ತಾಪಂ ಇಓ ಕೊರೊನಾ ಹರಡುವಿಕೆ ತಡೆಗೆ ಮುಂದಾಗಬೇಕಿದೆ. ಸರಕಾರ ಮತ್ತು ಜಿಲ್ಲಾಧಿಕಾರಿ ಜೊತೆ ಮಾತನಾಡಿ ಆರ್ಥಿಕ ಬಲವನ್ನು ಕೂಡಿಸುವ ಪ್ರಯತ್ನ ಮಾಡುತ್ತೇನೆ. ಜನ ಸಾಮಾನ್ಯರು ಧೈರ್ಯವಾಗಿ ಮತ್ತೊಬ್ಬರಿಗೆ ಸಹಾಯಹಸ್ತ ಚಾಚುವ ಕೆಲಸ ಮಾಡಬೇಕಾಗಿದೆ ಎಂದು ಮನವಿ ಮಾಡಿದರು.
ತುರ್ತು ಸಭೆಯಲ್ಲಿ ತಹಶೀಲ್ದಾರ್ ಗೋವಿಂದರಾಜು, ತಾಪಂ ಆಡಳಿತಾಧಿಕಾರಿ ಅಶೋಕ್, ಇಓ ಶಿವಪ್ರಕಾಶ್, ಮಾಜಿ ತಾ.ಪಂ.ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣಕುಮಾರ್, ಸದಸ್ಯ ಓಬಳರಾಜು, ನಾಗರಾಜು, ಬಲರಾಮಯ್ಯ, ಮಾಜಿ ಉಪಾಧ್ಯಕ್ಷ ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ತಾಲ್ಲೂಕು ಯುವಾಧ್ಯಕ್ಷ ವಿನಯ್ ಸೇರಿದಂತೆ ಇತರರು ಇದ್ದರು.
ಕೊರೊನಾ ಸಂಕಷ್ಟದ ಸಮಯದಲ್ಲಿ ಸೈನಿಕರಂತೆ ಕೆಲಸ ಮಾಡುತ್ತೀರುವ ಪ್ರೇಂಟ್‍ಲೈನ್ ಅಧಿಕಾರಿಗಳಿಗೆ ತುಂಬು ಹೃದಯದಧನ್ಯವಾದ. ಕೊರಟಗೆರೆ ಪಟ್ಟಣ ಮತ್ತು ಪ್ರತಿಗ್ರಾಮಕ್ಕೂ ಪ್ರತಿನಿತ್ಯ ಸ್ಯಾನಿಟೈಸರ್‍ಅಗತ್ಯವಾಗಿದೆ. ಪಪಂ ಮುಖ್ಯಾಧಿಕಾರಿ ಮತ್ತುತಾಪಂ ಇಓ ಕಾರ್ಯಪ್ರವೃತ್ತಆಗಬೇಕಾಗಿದೆ. ಕೊರೊನಾ ಸಂಕಷ್ಟದಲ್ಲಿಒಬ್ಬರು ಮತ್ತೋಬ್ಬರಿಗೆ ಸಹಾಯಹಸ್ತ ನೀಡಿದರೇ ಮಾತ್ರಆತ್ಮಬಲ ಹೆಚ್ಚಾಗಲು ಸಾಧ್ಯ.
-ಡಾ.ಜಿ.ಪರಮೇಶ್ವರ. ಶಾಸಕ. ಕೊರಟಗೆರೆ