ಗುಬ್ಬಿ :
ಕೊರೋನಾ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರುತ್ತಿರುವ ಹಿನ್ನಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಆದೇಶದ ಮೇರೆಗೆ ಪಟ್ಟಣದ ಇಂದಿರಾ ಕ್ಯಾಂಟೀನ್ನಲ್ಲಿ ಕೂಲಿ ಕಾಮಿಕರು, ವಲಸಿಗರು ಮತ್ತು ಇತರೆ ದುರ್ಬಲ ವರ್ಗದವರಿಗೆ ಅನುಕೂಲವಾಗುವಂತೆ ಉಚಿತವಾಗಿ ಬೆಳೆಗಿನ ಉಪಹಾರ, ಮಧ್ಯಾನ್ಹ ಮತ್ತು ರಾತ್ರಿ ಊಟವನ್ನು ವಿತರಿಸಲಾಗುತ್ತಿದ್ದು ವಿತರಿಸುವ ಆಹಾರ ಯಾವುದೇ ಕಾರಣಕ್ಕೂ ಕಳಪೆಯಾಗಬಾರದು ಉತ್ತಮ ಗುಣಮಟ್ಟದ ಆಹಾರ ತಯಾರಿಸಿ ವಿತರಿಸುವಂತೆ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಎಚ್ಚರಿಕೆ ನೀಡಿದರು.
ಪಟ್ಟಣದ ಇಂದಿರಾ ಕ್ಯಾಂಟೀನ್ಗೆ ದಿಢೀರ್ ಭೇಟಿ ನೀಡಿ ಮದ್ಯಾನ್ಹದ ಆಹಾರ ಪರಿಶೀಲಿಸಿದ ನಂತರ ಮಾತನಾಡಿದ ಅವರು ಉಚಿತವಾಗಿ ವಿತರಿಸುತ್ತೇವೆಂದು ಆಹಾರ ತಯಾರಿಕೆಯ ಗುಣಮಟ್ಟ ಕಳಪೆಯಾಗಬಾರದು. ಉತ್ತಮ ಗುಣಮಟ್ಟದ ತಿಂಡಿ ಮತ್ತು ಊಟವನ್ನು ತಯಾರಿಸಿ ವಿತರಿಸುವಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ತಯಾರಿಸುವ ಆಹಾರಕ್ಕೆ ಪೌಷ್ಠಿಕಾಂಶದ ತರಕಾರಿಗಳನ್ನು ಬಳಸಿ ಉತ್ತಮವಾದ ತಿಂಡಿ ಮತ್ತು ಊಟವನ್ನು ವಿತರಿಸುವಂತೆ ತಿಳಿಸಿದ ಅವರು ಇಂದಿರಾ ಕ್ಯಾಂಟೀನ್ನಲ್ಲಿ ಪ್ರತಿ ದಿನ ಉಚಿತವಾಗಿ ಬೆಳಗಿನ ಉಪಹಾರ, ಮದ್ಯಾನ್ಹ ಮತ್ತು ರಾತ್ರಿ ಊಟವನ್ನು ನಿರಂತರವಾಗಿ ನೀಡಲಾಗುವುದು ಫಲಾನುಭವಿಗಳು ನಿಗದಿತ ಸಮಯಕ್ಕೆ ಹಾಜರಾಗಿ ಊಟ ತಿಂಡಿ ಪಡೆದುಕೊಳ್ಳುವಂತೆ ತಿಳಿಸಿದರು.
ಕೊರೋನಾ ಪ್ರಕರಣ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಪಂಚಾಯ್ತಿ ಸಭಾಂಗಣದಲ್ಲಿ ಪಟ್ಟಣದ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊರೋನಾ ಸುರಕ್ಷಾ ಪರಿಕರಗಳಾದ ಫಲ್ಸ್ ಆಕ್ಸಿಮೀಟರ್, ಫೇಸ್ಶೀಲ್ಡ್, ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ವಿತರಿಸಿ ಕೊರೋನಾ ಪಾಸಿಟೀವ್ ಇರುವವವರ ಮನೆಗೆ ತೆರಳಿ ಆಕ್ಷಿಜನ್ ಲೆವಲ್ ಚೆಕ್ ಮಾಡಿ ವರದಿಕೊಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪ್ರತಿ ದಿನ ಎರಡು ಭಾರಿ ಭೇಟಿ ನೀಡಿ ನಿಗಧಿತ ನಮೂನೆಯಲ್ಲಿ ಪಟ್ಟಣ ಪಂಚಾಯ್ತಿಗೆ ವರದಿಯನ್ನು ಸಲ್ಲಿಸುವಂತೆ ತಿಳಿಸಲಾಗಿದೆ. ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಡೀ ಪಟ್ಟಣದ ಎಲ್ಲಾ ಬಡಾವಣೆಗಳಿಗೂ ಟ್ಯಾಂಕರ್ ಮೂಲಕ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಈಗಾಗಲೆ ಎರಡು ಬಾರಿ ಪಟ್ಟಣ ಪಂಚಾಯ್ತಿವತಿಯಿಂದ ಎಲ್ಲಾ ಬಡಾವಣೆಗಳಿಗೂ ಸ್ಯಾನಿಟೈಸರ್ ಮಾಡಲಾಗಿದ್ದು ರೋಗ ನಿಯಂತ್ರಣಕ್ಕೆ ಬರುವವರೆಗೂ ನಿರಂತರವಾಗಿ ಸ್ಯಾನಿಟೈಸರ್ ಸಿಂಪರಣೆ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಪಪಂ ಸದಸ್ಯೆ ಜಯಲಕ್ಷ್ಮೀಕುಮಾರ್, ಮುಖ್ಯಾಧಿಕಾರಿ ಯೋಗೇಶ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ