ಗುಬ್ಬಿ :

ಕೋವಿಡ್ ಎರಡನೇ ಅಲೆ ಪ್ರಾರಂಭದಿಂದ ಇಲ್ಲಿಯವರೆವಿಗೂ ಅಕ್ರಮ ಮದ್ಯಕ್ಕೆ ಸಂಬಂಧಪಟ್ಟ 46 ಪ್ರಕರಣ ದಾಖಲಾಗಿದ್ದು 60.286 ಲೀಟರ್ ಮದ್ಯ 4.950 ಲೀಟರ್ ಬಿಯರ್, ಎರಡು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ಅಬಕಾರಿ ನಿರೀಕ್ಷಕರಾದ ಎಸ್.ವನಜಾಕ್ಷಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲು ಸಾಧ್ಯವಿಲ್ಲದ ಕಾರಣ ಜಾಮೀನು ನೀಡಿ ಬಿಡಲಾಗಿದ್ದು ಇನ್ನು ಕೆಲವರು ತಲೆ ಮರೆಸಿಕೊಂಡಿದ್ದು, ಅವರನ್ನು ಪತ್ತೆ ಹಚ್ಚುವ ಕಾರ್ಯವನ್ನು ಮಾಡಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯಂತೆ ತಾಲೂಕಿನ ಎಲ್ಲಾ ಮದ್ಯದಂಗಡಿಗಳನ್ನು 10 ಗಂಟೆಯೊಳಗೆ ಬಂದ್ ಮಾಡಲು ಸೂಚಿಸಿದ್ದು, ಅದರಂತೆ ಪ್ರತಿನಿತ್ಯ ಬಂದ್ ಮಾಡುವ ಕೆಲಸವನ್ನು ಮದ್ಯದಂಗಡಿ ಮಾಲೀಕರು ಮಾಡುತ್ತಾ ಇದ್ದಾರೆ ಎಂದು ತಿಳಿಸಿದರು.
ನಮ್ಮ ಇಲಾಖೆಯ ಮೂರು ಮಂದಿಗೂ ಕೋವಿಡ್ ಪಾಸಿಟಿವ್ ಬಂದಿರುವ ಕಾರಣ ಸಿಬ್ಬಂದಿಯ ಕೊರತೆಯಿದ್ದರೂ ಸಹ ಎಲ್ಲವನ್ನು ನಿಭಾಯಿಸಲಾಗುತ್ತಿದ್ದು, ನಮ್ಮ ಇಲಾಖೆಯ ಸಿಬ್ಬಂದಿಗಳನ್ನು ಕೊರೊನ ವಾರಿರ್ಯಸ್ ಎಂದು ಸರ್ಕಾರವು ಘೋಷಿಸಿದರೆ ಒಳ್ಳೆಯದು. ನಾವು ಎಲ್ಲರಂತೆ ಪ್ರತಿನಿತ್ಯ ಕಾರ್ಯ ನಿರ್ವಹಣೆ ಮಾಡುತ್ತಾ ಬಂದಿದ್ದೇವೆ. ಹಾಗಾಗಿ ನಮ್ಮನ್ನು ವಾರಿರ್ಯಸ್ ಎಂದು ಪರಿಗಣನೆಗೆ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ತಿಳಿಸಿದರು.
ಅಕ್ರಮ ಮದ್ಯದ ಕಾರ್ಯಾಚರಣೆ ವೇಳೆಯಲ್ಲಿ ಅಬಕಾರಿ ಸಿಬ್ಬಂದಿಗಳಾದ ಪ್ರದೀಪ್, ತಿಮ್ಮಯ್ಯ, ಶಿವಕುಮಾರ್ ಇದ್ದರು ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








