ಗುಬ್ಬಿ:
ತಾಲ್ಲೂಕಿನಲ್ಲಿ ಗುರುವಾರ ಸುರಿದ ಭಾರಿ ಮಳೆಯಿಂದಾಗಿ ಕಡಬ ಗ್ರಾಮದಲ್ಲಿ ಉಪ ಪೊಲೀಸ್‍ಠಾಣೆ ಮುಂಭಾಗದಲ್ಲಿದ್ದ ಬೃಹತ್ ಆಲದಮರವು ಬುಡಸಮೇತ ರಸ್ತೆಗೆ ಅಡ್ಡವಾಗಿ ಉರುಳಿದ್ದರಿಂದ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಇದರ ಜೊತೆಗೆ ವಿದ್ಯುತ್‍ಕಂಬವು ಬಿದ್ದಿದ್ದರಿಂದ ಕೆಲಕಾಲ ವಿದ್ಯುತ್ ಕೂಡ ಇಲ್ಲದಂತಾಯಿತು.
ಮರ ಬಿದ್ದ ರಭಸಕ್ಕೆ ಸಮೀಪದಲ್ಲಿದ್ದ ಕಟ್ಟಡಕ್ಕೆ ಸ್ವಲ್ಪ ಹಾನಿ ಉಂಟಾಗಿದ್ದನ್ನು ಹೊರತು ಪಡಿಸಿ ಬೇರೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದುಬಂದಿದೆ. ಮರಬಿದ್ದ ತಕ್ಷಣವೇ ಎಚ್ಚೆತ್ತುಕೊಂಡ ಕಡಬ ಉಪ ಪೊಲೀಸ್ ಠಾಣೆಯ ಮುಖ್ಯಪೇದೆ ಚಂದ್ರಶೇಖರ್ ಅವರು ಸ್ಥಳೀಯರ ಸಹಕಾರದೊಂದಿಗೆ ಮರದ ಕೊಂಬೆಗಳನ್ನು ಕಡಿದು ರಸ್ತೆಯ ಪಕ್ಕಕ್ಕೆ ಸರಿಸುವುದರ ಜೊತೆಗೆ, ಬೆಸ್ಕಾಂನವರಿಗೆ ವಿಷಯ ತಿಳಿಸಿ ವಿದ್ಯುತ್ ಕಂಬವನ್ನು ರಸ್ತೆಯಿಂದ ತೆರವುಗೊಳಿಸಿ ವಾಹನಸಂಚಾರಕ್ಕೆ ಅನುವುಮಾಡಿಕೊಟ್ಟರು. ಸ್ಥಳಕ್ಕೆ ಆಮಿಸಿದ ಬೆಸ್ಕಾಂನವರು ತುಂಡಾಗಿದ್ದ ವಿದ್ಯುತ್ ತಂತಿಗಳನ್ನು ಸರಿಪಡಿಸಲು ಕ್ರಮ ಕೈಗೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ