ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಿದ ವೈದ್ಯಕೀಯ ತಂಡ

 ಕೊರಟಗೆರೆ : 

      ಕೊರೋನಾ ಮಹಾಮಾರಿಯ ಅಟ್ಟಹಾಸಕ್ಕೆ ಜನಸಮಾನ್ಯರ ಬದುಕು ದುಸ್ಥಿತಿಗೆ ತಲುಪಿದೆ. ಕುಟುಂಬ ನಿರ್ವಹಣೆಗೆ ಹೆಣಗಾಡುತ್ತಿರುವುದು ಒಂದೆಡೆಯಾದರೆ, ಕೊರೋನಾದಿಂದ ಮುಕ್ತಿ ಹೊಂದಲು ಹರಸಾಹಸ ಪಡುತ್ತಿರುವ ಸಂಕಷ್ಟಕಾಲದಲ್ಲಿ ಡಾ. ಜಿ. ಪರಮೇಶ್ವರರವರ ಸಿದ್ದಾರ್ಥ ವೈದ್ಯಕೀಯ ತಂಡ ಕೊರೋನಾ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬಲು ಕೊರಟಗೆರೆ ವಿಧಾನಸಭಾ ವ್ಯಾಪ್ತಿಯ ಎಲ್ಲಾ ಗ್ರಾಪಂಗಳಿಗೂ ಭೇಟಿ ನೀಡಿ, ರೋಗಿಗಳಿಗೆ ಔಷಧೋಪಚಾರ ನೀಡುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಡ್ಲಹಳ್ಳಿ ಅಶ್ವತ್ಥನಾರಾಯಣ ತಿಳಿಸಿದರು.

     ಅವರು ಕ್ಯಾಮೇನಹಳ್ಳಿ ಹಾಗೂ ಬಿಡಿ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕೊರೋನಾ ಸೋಂಕಿತರ ಮನೆಗಳಿಗೆ ವೈದ್ಯಕೀಯ ಕಿಟ್ ನೀಡಿ ಮಾತನಾಡಿದರು. ಕೊರೋನಾ ಸಂಕಷ್ಟ ಕಾಲದಲ್ಲಿ ಕೊರಟಗೆರೆ ವಿಧಾಸಭ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಸಿದ್ದಾರ್ಥ ವೈದ್ಯಕೀಯ ತಂಡ ಭೇಟಿ ನೀಡಿ ಎಲ್ಲಾ ಸೋಕಿತರಿಗೂ ಔಷಧೋಪಚಾರ ನೀಡುವ ಜೊತೆಗೆ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ ಎಂದರು.

     ಗ್ರಾಮಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಗ್ರಾಮೀಣ ಭಾಗದ ಸೋಂಕಿತರಿಗೆ ಇದರ ಅರಿವಿನ ಕೊರತೆ ಇರುತ್ತದೆ. ಅದಕ್ಕಾಗಿ ಕ್ಷೇತ್ರದ ಶಾಸಕರಾದ ಡಾ. ಜಿ. ಪರಮೇಶ್ವರ್ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯಿಂದ 12 ಮಂದಿ ನುರಿತ ತಜ್ಞರೊಂದಿಗೆ ವೈದ್ಯಕೀಯ ಕಿಟ್‍ಗಳನ್ನು ಗ್ರಾಮಗಳ ಪ್ರತಿ ಸೋಂಕಿತರ ಮನೆಗಳಿಗೆ ಕಳುಹಿಸಿದ್ದಾರೆ. ಸೋಂಕಿತರನ್ನು ತಪಾಸಣೆ ಮಾಡಿ, ಆತ್ಮಸ್ಥೈರ್ಯ ತುಂಬಿ, ವೈದ್ಯಕೀಯ ಕಿಟ್ ನೀಡಿ, ಸೋಂಕು ತೀವ್ರತೆ ಇದ್ದಲ್ಲಿ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಿಸಿ, ಉಚಿತ ಚಿಕಿತ್ಸೆ ನೀಡುತ್ತದೆ.ಈ ಕಾರ್ಯದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಅಧಿಕಾರಿ, ಸಿಬ್ಬಂದಿಯವರು, ಕಂದಾಯ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಕೈ ಜೋಡಿಸಿ ಶ್ರಮ ಪಡುತ್ತಿದ್ದಾರೆ ಎಂದರು.

ಕ್ಯಾಮೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ ಶಿವಣ್ಣ ಮಾತನಾಡಿ. ಶಾಸಕಾರಾದ ಡಾ.ಜಿ.ಪರಮೇಶ್ವರ್‍ರವರ ವೈದ್ಯಕೀಯ ಸೇವಾ ಕಾರ್ಯ ಪ್ರಸಂಶನೀಯವಾಗಿದೆ. ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದ್ದು, ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳಲ್ಲಿ ಕ್ರಿಮಿನಾಶಕ ಸಿಂಪಡನೆ, ಸ್ವಚ್ಛತೆಗೆ ಒತ್ತು ಮತ್ತು ಗ್ರಾಮಸ್ಥರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿದೆ ಎಂದರು.
ಸಿದ್ದಾರ್ಥ ವೈದ್ಯಕೀಯ ತಂಡದ ಡಾ.ಎಚ್ ವಿ ಜಯಪ್ರಕಾಶ್ ಮಾತನಾಡಿ, ಸಂಸ್ಥೆಯ ವ್ಯವಸ್ಥಾಪಕರಾದ ಡಾ.ಜಿ ಪರಮೇಶ್ವರ್ ಆದೇಶದಂತೆ ವೈದ್ಯರ ನಡೆ ಹಳ್ಳಿಯ ಕಡೆಗೆ ಎನ್ನುವ ಸೂತ್ರದಡಿ ಗ್ರಾಮಗಳಲ್ಲಿನ ಸೋಂಕಿತರ ಸೇವೆಯನ್ನು ಮಾಡುತ್ತಿದ್ದೇವೆ. ಈಗಾಗಲೇ 6 ಗ್ರಾಮ ಪಂಚಾಯತಿಗಳಲ್ಲಿ ಯಶಸ್ವಿಯಾಗಿ ವೈದ್ಯರ ತಂಡ ಸೇವೆ ಸಲ್ಲಿಸಿದ್ದು, ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಈ ಸೇವೆಯನ್ನು ಸಲ್ಲಿಸಲಾಗುವುದು ಎಂದರು.

ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಚಲಪತಿ, ಪಿಡಿಓ ವೈ.ಯಶೋಧ ಲೊಕೇಶ್, ತಾಲ್ಲೂಕು ಅರಣ್ಯಾಧಿಕಾರಿ ಸುರೇಶ್‍ಕುಮಾರ್, ಆರ್.ಐ ಲಕ್ಷ್ಮೀಶ್, ವಿ.ಎ. ಹಾರಿಕಾ, ಗ್ರಾಪಂ ಸದಸ್ಯ ಕೆ.ಡಿ. ನಾಗರಾಜು, ಹನುಮಂತರಾಜು, ನರಸಿಂಹಮೂರ್ತಿ, ರಾಘವೇಂದ್ರ, ಶಶಿಧರ್, ರವಿ, ಪುಟ್ಟಕಾಮಯ್ಯ, ಕಾರ್ಯದರ್ಶಿ ರಮೇಶ್, ಕಂಪ್ಯೂಟರ್ ಆಪರೇಟರ್ ಶಿವರಾಮ್, ಬಿಲ್‍ಕಲೆಕ್ಟರ್ ಹನುಮರಾಜು, ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಣ್ಣ, ಉಮಾಶಂಕರ್, ತ್ರಿಯಂಭಕಾರಾಧ್ಯ, ವೈದ್ಯರಾದ ಡಾ. ವವಿಕಾರ್, ಡಾ. ಅಪೂರ್ವ ಮತ್ತು ತಂಡ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರುಗಳು, ತಾಲ್ಲೂಕು ಮಟ್ಟದ ಸಿಬ್ಬಂದಿ ಹಾಜರಿದ್ದರು .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap