ತುಮಕೂರು :
ರಾಜ್ಯ ಮಟ್ಟದ ಹದಿನಾಲ್ಕು ವರ್ಷದೊಳಗಿನ ಆನ್ ಲೈನ್ ಚೆಸ್ ಪಂದ್ಯಾವಳಿಯನ್ನು ಮಹಿಳಾ ಗ್ರಾಂಡ್ ಮಾಸ್ಟರ್ ಆರತಿ ರಾಮಸ್ವಾಮಿ ಹಾಗು ಎಸ್.ನಾಗಣ್ಣ ಉದ್ಘಾಟಿಸಿದರು.
ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆಯು ಆಯೋಜಿಸಿರುವ ರಾಜ್ಯಮಟ್ಟದ ಬಾಲಕ ಹಾಗು ಬಾಲಕಿಯರ ಆನ್ ಲೈನ್ ಚೆಸ್ ಪಂದ್ಯಾವಳಿಯ ಮೂರನೇಯ ವಿಭಾಗವಾದ ಹದಿನಾಲ್ಕು ವರ್ಷದೊಳಗಿನ ಮಕ್ಕಳ ಆನ್ ಲೈನ್ ಪಂದ್ಯಾವಳಿಯನ್ನು ಜೂನ್ 7ರಂದು ಬೆಳಿಗ್ಗೆ 9:45ಗಂಟೆಗೆ ಉದ್ಘಾಟಿಸಲಾಯಿತು.
ಚೆಸ್ ಆಟದ ಸೈನಿಕನನ್ನು ನಡೆಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಮಹಿಳಾ ಗ್ರಾಂಡ್ ಮಾಸ್ಟರ್ ಆರತಿ ರಾಮಸ್ವಾಮಿ, ಆನ್ ಲೈನ್ ಪಂದ್ಯಾವಳಿಗಳು ಚೆಸ್ ಆಟಕ್ಕೆ ಹೊಸ ಭಾಷ್ಯ ಬರೆಯುತ್ತಿದೆ ಹಾಗು ಮಕ್ಕಳಿಗೆ ತಾವು 1999ರಲ್ಲಿ ವಿಶ್ವ ಯುವ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಪಡೆಯಲು ನಡೆಸಿದ ತಯಾರಿಯ ಬಗ್ಗೆ ಹಂಚಿಕೊಂಡರು. ಮಕ್ಕಳು ಚೆಸ್ ಆಟವನ್ನು ಆನಂದಿಸಿ ಎಂದು ತಿಳಿಸಿದರು .
ರಾಜ್ಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷರಾಗಿರುವ ಎಸ್ ನಾಗಣ್ಣ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ, ಮಕ್ಕಳ ಬುದ್ಧಿವಂತಿಕೆಯನ್ನು ಚುರುಕುಗೊಳಿಸುವ ಚೆಸ್ ಆಟಕ್ಕೂ ನಮ್ಮ ಜೀವನಕ್ಕೂ ಸಾಮ್ಯತೆ ತಿಳಿಸಿ, ಚೆಸ್ ಆಟವು ಭಾರತದ ಯುದ್ಧದ ಪರಿಕಲ್ಪನೆ ಚೆಸ್ ಮನೆಯಲ್ಲಿ ಅಡಕವಾಗಿದೆ ಎಂದು ಮಕ್ಕಳಿಗೆ ಬೋಧಿಸಿದರು.
ತುಮಕೂರು ಜಿಲ್ಲಾ ಚೆಸ್ ಸಂಸ್ಥೆಯ ಅಧ್ಯಕ್ಷರಾಗಿರುವ ಮಧುಕರ್.ಎನ್ ಮಾತನಾಡಿ ಎಲ್ಲಾ ಸ್ಪರ್ಧಿಗಳು ಕ್ರೀಡಾಸ್ಫೂರ್ತಿಯಿಂದ ಪಂದ್ಯಾವಳಿಯಲ್ಲಿ ಆಡಿ, ಪ್ರಾಯಶಃ ಚೆಸ್ ಒಂದೇ ಆಟ ಈ ರೀತಿ ಆನ್ ಲೈನ್’ನಲ್ಲಿ ಆಡುವಂತದ್ದು ಎಂದು ತಿಳಿಸಿ ಎಲ್ಲಾ ಮಕ್ಕಳಿಗೂ ಶುಭಾಷಯ ಕೋರಿದರು.
ಹದಿನಾರು ವರ್ಷದೊಳಗಿನ ಬಾಲಕರು ಹಾಗು ಬಾಲಕಿಯರ ವಿಭಾಗದಲ್ಲಿ ಮೂನ್ನೂರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ