ಗೊಬ್ಬರ ದಾಸ್ತಾನು ಪರಿಶೀಲನೆ: ದುಬಾರಿ ಬೆಲೆಗೆ ಮಾರಿದರೆ ಕ್ರಮ

 ತುರುವೇಕೆರೆ : 

      ಪಟ್ಟಣದ ಖಾಸಗಿ ರಸಗೊಬ್ಬರದ ಅಂಗಡಿಗಳು ಹಾಗು ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಕೇಂದ್ರ ಸರ್ಕಾರದ ಪರಿಷ್ಕøತ ಬೆಲೆಗೆ ಡಿಎಪಿ ಗೊಬ್ಬರ ಮಾರಾಟ ಹಾಗು ಗೊಬ್ಬರದ ದಾಸ್ತಾನು ಸಮರ್ಪಕವಾಗಿದೆಯೆ ಎಂಬುದರ ಬಗ್ಗೆ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ಪರಿಶೀಲನೆ ನಡೆಸಿದರು.

      ತಾಲ್ಲೂಕಿನಲ್ಲಿ ಒಟ್ಟು 12 ಖಾಸಗಿ ರಸಗೊಬ್ಬರದ ಅಂಗಡಿ ಹಾಗು 16 ಪ್ರಾಥಮಿಕ ಕೃಷಿ ಸಹಕಾರಿ ಸಂಘಗಗಳಿವೆ. ಅದರಲ್ಲಿ ಪಟ್ಟಣದಲ್ಲಿ 8 ಖಾಸಗಿ ರಸಗೊಬ್ಬರದ ಅಂಗಡಿ ಹಾಗು ಒಂದು ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ಭೇಟಿ ನೀಡಿದರು.

      ಎಲ್ಲಾ ರಸಗೊಬ್ಬರದ ಬೆಲೆಗಳನ್ನು ಮತ್ತು ಸಂಗ್ರಹದ ಪ್ರಮಾಣವನ್ನು ಅಂಗಡಿಯ ಹೊರಭಾಗದಲ್ಲಿ ರೈತರಿಗೆ ಗೊತ್ತಾಗುವಂತೆ ನಾಮಫಲಕದಲ್ಲ ಹಾಕಿದ್ದಾರಾ, ಒಟ್ಟು ದಾಸ್ತಾನಿನಲ್ಲಿ ಎಷ್ಟು ಗೊಬ್ಬರ ಮಾರಾಟ ಮಾಡಲಾಗಿದೆ, ಇನ್ನು ಉಳಿಕೆ ಎಷ್ಟಿದೆ, ಗೊಬ್ಬರದ ಬಿಲ್ ಬುಕ್‍ಗಳನ್ನು ಸರಿಯಾಗಿ ನಿರ್ವಹಣೆ ಮಾಡಲಾಗಿದೆಯಾ, ವಿವಿಧ ಭಿತ್ತನೆ ಬೀಜಗಳು, ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯ ಅವಧಿ ಪೂರ್ಣಗೊಂಡಿದೆಯಾ ಇವುಗಳನ್ನು ಮಾರಾಟ ಮಾಡಲು ಪರವಾನಗಿ ಇದೆಯಾ ಮತ್ತು ಅದನ್ನು ನವೀಕರಣಗೊಳಿಸಿದ್ದಾರೆಯೆ ಎಂಬುದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಇವುಗಳ ಬಗ್ಗೆ ಸಕಾಲಕ್ಕೆ ಮಾಹಿತಿಯನ್ನು ಇಲಾಖೆ ನೀಡುತ್ತಿರಬೇಕೆಂದು ಅಂಗಡಿ ಮಾಲೀಕರಿಗೆ ತಿಳಿಸಿದರು.

      ಅದೇ ರೀತಿ ಕೇಂದ್ರ ಸರ್ಕಾರ ಈ ಹಿಂದೆ ಡಿಎಪಿ ರಸಗೊಬ್ಬರದ ಬೆಲೆಯನ್ನು 1800 ರೂ.ಗಳಿಗೆ ಹೆಚ್ಚಳ ಮಾಡಿತ್ತು. ಇದರಿಂದ ರೈತರಿಗೆ ಹೊರೆಯಾಗುವ ಬಗ್ಗೆ ಮನಗಂಡ ಸರ್ಕಾರ ಆ ಗೊಬ್ಬರದ ಬೆಲೆಯನ್ನು 1200 ರೂ.ಗಳಿಗೆ ಇಳಿಸಿದೆ. ಎಲ್ಲ ಅಂಗಡಿ ಮಾಲೀಕರು ಸರ್ಕಾರ ನಿಗಧಿಪಡಿಸಿದ ಬೆಲೆಗೆ ಗೊಬ್ಬರವನ್ನು ಮಾರಾಟ ಮಾಡಬೇಕು. ಈ ಬಗ್ಗೆ ರೈತರಿಂದ ದೂರು ಬಂದಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಗಿರೀಶ್ ಮತ್ತು ಸಿಬ್ಬಂದಿ ವರ್ಗ ಹಾಜರಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap