ತುರುವೇಕೆರೆ : ಆರಂಭವಾದ ಅಂಗಡಿ ವಹಿವಾಟು

 ತುರುವೇಕೆರೆ:

      ಕೊರೋನ ವೈರಸ್ಸ್ ಎರಡನೆಯ ಅಲೆಯ ಕೊರಾನ ಸೋಂಕು ತಡೆಗಟ್ಟುವ ಹಿನ್ನಲೆಯಲ್ಲಿ ಸುಮಾರು ದಿನಗಳಿಂದ ರಾಜ್ಯ ಸರ್ಕಾರ ವಿಧಿಸಿದ್ದ ಲಾಕ್ ಡೌನ್ ಸೋಮವಾರದಿಂದ ಸಂಜೆ 5ರವರೆಗೂ ತೆರವುಗೊಳಿಸಿದ ಹಿನ್ನಲೇ ಪಟ್ಟಣದಲ್ಲಿ ಎಲ್ಲ ಅಂಗಡಿ ಮುಂಗಟ್ಟುಗಳು ಸಂಜೆವರೆಗೆ ತೆರೆದು ವ್ಯಾಪಾರ ವಹಿವಾಟು ನೆಡೆದವು.

       ರಾಜ್ಯದಲ್ಲಿ ಕೊವಿಡ್ ಎರಡನೇ ಅಲೆಯು ಹೆಚ್ಚಾಗಿ ರಾಜ್ಯದಲ್ಲಿ ವ್ಯಾಪಿಸಿದ್ದರಿಂದ ಎಪ್ರಿಲ್‍ನಲ್ಲಿ ಜನತಾ ಕರ್ಫ್ಯೂ ವಿಧಿಸಿದ್ದು ನಂತರ ಲಾಕ್ ಡೌನ್ ಘೋಷಿಸಲಾಗಿದ್ದರೂ ಪಟ್ಟಣದ ದಿನಸಿ, ಹಾಲು, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಹಾಗೂ ಖರೀದಿಗಾಗಿ ಸಾರ್ವಜನಿಕರಿಗೆ ಬೆಳಿಗ್ಗೆ 10 ಗಂಟೆವರೆಗೂ ಅವಕಾಶ ನೀಡಿದ್ದು ನಂತರ ಮದ್ಯಾಹ್ನ 2 ಗಂಟೆವೆರೆಗೂ ವಿಸ್ತರಿಸಲಾಗಿತ್ತು. ಸರ್ಕಾರ ಮತ್ತೆ ಜೂನ್ 21ರಿಂದ ಸೋಮವಾರ ಸಂಜೆ 5ರವರೆಗೂ ಅವಕಾಶ ನೀಡಿದ ಹಿನ್ನಲೆಯಲ್ಲಿ ಮೊಬೈಲ್, ಚಪ್ಪಲಿ ಅಂಗಡಿ, ಬಟ್ಟೆ, ಎಲೆಕ್ಟ್ರಿಕಲ್, ಕಬ್ಬಿಣ, ಕೃಷಿ ಉಪಕರಣಗಳ ಅಂಗಡಿ ಟೀ ಅಂಗಡಿ, ಹೋಟಲ್‍ಗಳು, ಬೀದಿ ಬದಿ ಹೋಟಲ್ ಗಳು ಸೇರಿದಂತೆ ಎಲ್ಲ ಅಂಗಡಿಗಳನ್ನು ತೆರೆದು ವ್ಯಾಪಾರಿಗಳು ವ್ಯಾಪಾರ ವಹಿವಾಟು ನೆಡೆಸಿದರು.

ಸಾರಿಗೆ ಬಸ್ ಸಂಚಾರ ಆರಂಭ, ಆಗಮಿಸದ ಪ್ರಯಾಣಿಕರು. ಸೋಮವಾರ ಬೆಳಿಗ್ಗೆಯಿಂದಲೇ ಬಸ್ ಸಂಚಾರ ಆರಂಭಗೊಂಡಿದ್ದು ಪಟ್ಟಣದಲ್ಲಿ ಬಸ್ ನಿಲ್ದಾಣದಿಂದ 29 ಬಸ್ ಗಳು ಸಂಚಾರ ಮಾಡಿದವು. ತಿಪಟೂರು, ಕೆ.ಬಿ.ಕ್ರಾಸ್, ಬೆಂಗಳೂರು, ತುಮಕೂರು, ಕದಬಳ್ಳಿ ಸೇರಿ ಎಲ್ಲ ಕಡೆಗಳಿಗೂ ಬಸ್ ಸಂಚಾರ ಆರಂಭಿಸಿದ್ದರು. ಪ್ರಯಾಣಿಕರು ವಿರಳವಾಗಿ ಆಗಮಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link