ತಿಪಟೂರು :
ನಗರದ ಪ್ರತಿಷ್ಠಿತ ಬಡಾವಣೆಯಾದ ವಿದ್ಯಾನಗರದ (ಕಂಚಾಘಟ್ಟ) ವಾರ್ಡ್ ನಂ 15 ರಲ್ಲಿ ಹಂದಿ ಮತ್ತು ನಾಯಿಗಳ ಕಾಟ ವಿಪಾರೀತವಾಗಿದ್ದು ತಕ್ಷಣವೆ ಇದಕ್ಕೆ ಪರಿಹಾರ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಂದು ಕಡೆ ಕೊರೊನಾ ಕಾಟವಾದರೆ ಮತ್ತೊಂದೆಡೆ ಹಂದಿ ನಾಯಿಗಳ ಹಾವಳಿಯಿಂದ ವಿದ್ಯಾನಗರದ ಜನತೆ ರೋಸಿಹೋಗಿದ್ದಾರೆ. ರಾತ್ರಿಯಾಯಿತೆಂದರೆ ಸಾಕು ನಾಯಿಗಳು ಹಸಿವಿಂದಲೊ, ಇಲ್ಲ ಅಪರಿಚಿತನ್ನು ನೋಡಿಯೊ ರಾತ್ರಿಯೆಲ್ಲ ಬೊಗಳುತ್ತಿದ್ದು, ಜನತೆಗೆ ನಿದ್ರೆ ಇಲ್ಲದಂತಾಗಿದೆ. ಜೊತೆಗೆ ಹೆಚ್ಚಾಗಿರುವ ನಾಯಿಗಳು ವಾಹನಗಳಿಗೆ ಅಡ್ಡ ಬಂದು ಇಲ್ಲವೆ, ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗಿ ಅವರು ಬಿದ್ದಿರುವ ಉದಾಹರಣೆಗಳು ಸಾಕಷ್ಟಿವೆ. ಈ ನಾಯಿಗಳ ಜೊತೆಗೆ ಹಂದಿಗಳು ಸಹ ವಾರ್ಡಿನಲ್ಲಿ ಹೆಚ್ಚಾಗಿದ್ದು, ಜನರು ನೆಮ್ಮದಿಯಿಂದ ಓಡಾಡುವುದಕ್ಕೂ ಸಮಸ್ಯೆಯಾಗಿದೆ. ಮಕ್ಕಳು ಮತ್ತು ವಯೋವೃದ್ಧರು ಮನೆಯಿಂದ ಹೊರ ಹೋಗುವುದನ್ನೆ ನಿಲ್ಲಿಸಿದ್ದಾರೆ.
ನಗರಸಭೆಯವರು ಈ ಬಗ್ಗೆ ಶೀಘ್ರವಾಗಿ ಕ್ರಮ ಕೈಗೊಂಡು ಹಂದಿ ಮತ್ತು ನಾಯಿಗಳ ಕಾಟದಿಂದ ಮುಕ್ತಿ ದೊರಕಿಸಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ