ಬೆಂಕಿಯಿಂದಾಗಿ ಹುಲ್ಲಿನ ಬಣವೆ ಭಸ್ಮ

 ಕೊಡಿಗೇನಹಳ್ಳಿ : 

      ರೈತ ಬಸವರಾಜು ಸಿ. ಎಂಬುವವರ ಜಮೀನಿನಲ್ಲಿದ್ದ ಎಂಟು ಲೋಡ್ ಮುಸುಕಿನ ಜೋಳದ ಹುಲ್ಲಿನ ಬಣವೆಗೆ ಜೂನ್ 23ರಂದು ಬೆಂಕಿ ಬಿದ್ದು ಸುಟ್ಟು ಹೋಗಿದೆ. ಬಸವರಾಜು ಮತ್ತು ಕುಟುಂಬ ಮಾಗಿ ಉಳುಮೆ ಕಾರ್ಯಕ್ಕೆ ಜಮೀನಿನಲ್ಲಿ ಇದ್ದಾಗ ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

      ಗಾಳಿ ಹೆಚ್ಚು ಇದ್ದ ಕಾರಣ ಬೆಂಕಿಯ ಜ್ವಾಲೆ ಹೆಚ್ಚಿದೆ. ಆಗ ಸ್ಥಳೀಯರಾದ ಲತಾ, ಮಂಜುಳಾ, ಜಯಮಂಗಳ, ಅಶ್ವತ್ಥರೆಡ್ಡಿ, ರಾಜಗೋಪಾಲರೆಡ್ಡಿ, ಪುಟ್ಟನರಸರೆಡ್ಡಿ, ದಿಲೀಪ್ ಮುಂತಾದವರು ಸೇರಿಕೊಂಡು ಬೆಂಕಿಯನ್ನು ನಂದಿಸಿದರು ಎಂದು ರೈತ ಬಸವರಾಜು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

      ಕಿಡಿಗೇಡಿಗಳು ಮಾಡಿದ ಕೃತ್ಯದಿಂದ ಸುಮಾರು 30 ಸಾವಿರ ರೂ.ಗೂ ಹೆಚ್ಚು ಮೌಲ್ಯದ ಮುಸುಕಿನ ಜೋಳದ ಹುಲ್ಲು ಸುಟ್ಟು ಹೋಗಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ತಿಳಿಸಲಾಗಿದೆ. ದನಕರುಗಳಿಗೆ ಮೇವಿಲ್ಲದಂತಾಗಿದ್ದು, ಜಿಲ್ಲಾಡಾಳಿತ ಕೂಡಲೆ ನೆರವು ನೀಡಬೇಕು ಎಂದು ಬಸವರಾಜುರವರ ಸಹೋದರ ರಘುನಾಥರೆಡ್ಡಿ ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap