ಕೊರಟಗೆರೆ :
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೃದ್ದೆಯ ಮೇಲೆ ಕಡಜಗಳು ದಾಳಿ ಮಾಡಿದ ಪರಿಣಾಮ, ವೃದ್ದೆ ತೀವ್ರ ಅಸ್ವಸ್ಥರಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರೆಳೆದಿರುವ ಘಟನೆ ಕೊರಟಗೆರೆ ತಾಲ್ಲೂಕಿನಲ್ಲಿ ಜರುಗಿದೆ.
ತಾಲ್ಲೂಕಿನ ತೋವಿನಕೆರೆ ಹೋಬಳಿ ಮಣ್ಣಿನಕುರಿಕೆ ಗ್ರಾಮದಲ್ಲಿ ಈ ದುರ್ಘಟನೆ ಜರುಗಿದ್ದು, ಲಕ್ಕಮ್ಮ (70) ಎಂಬ ವೃದ್ದೆ ಇದೇ ಗ್ರಾಮದ ತನ್ನ ಜಮೀನಿನಲ್ಲಿ ಕೆಲಸ ಮಾಡುತಿದ್ದ ಸಂದರ್ಭದಲ್ಲಿ ಮಾವಿನ ಗಿಡದಿಂದ ಏಕ ಕಾಲದಲ್ಲಿ ಬಂದ ಹತ್ತಾರು ಕಡಜಗಳು ಕಚ್ಚಿವೆ.
ಕಡಜಗಳ ಕಡಿತದಿಂದ ವೃದ್ಧೆ ಕಿರುಚಾಡಿದಾಗ ಊರಿನ ಗ್ರಾಮಸ್ಥರು ತೀವ್ರ ಅಸ್ವಸ್ಥರಾಗಿದ್ದ ವೃದ್ದೆಗೆ ತೋವಿನಕೆರೆಯ ಖಾಸಗಿ ಆಸ್ಪತ್ರೆ ವೈದ್ಯ ಸತೀಶ್‍ರಿಂದ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲ ನೀಡದೆ ವೃದ್ದೆ ಕೊನೆ ಉಸಿರೆಳೆದಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
