ಮಧುಗಿರಿ :

ಹೃದಯ ಸಂಬಂಧಿ ತೊಂದರೆಯಿಂದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿರುವ ಸಿದ್ದಾಪುರ ಗ್ರಾಪಂ ಹಾಗೂ ವಿಎಸ್.ಎಸ್.ಎನ್ ಅಧ್ಯಕ್ಷ ವೀರಣ್ಣನವರನ್ನು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಇವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾದಾಗ ಮಾಜಿ ಶಾಸಕ ಕೆ.ಎನ್. ರಾಜಣ್ಣನವರು ತಕ್ಷಣ ಅವರ ನೆರವಿಗೆ ದಾವಿಸಿ, ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಲ್ಲದೆ ಹೃದಯದ ಬೈಪಾಸ್ ಸರ್ಜರಿ ಅವಶ್ಯಕತೆಯಿದೆ ಎಂದು ಜಿಲ್ಲೆಯ ವೈದ್ಯರು ಸೂಚಿಸಿದ ಮೇರೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿ ವಿಶೇಷ ನೆರವಿನ ಹಸ್ತ ಚಾಚಿದ್ದಾರೆ.
ಜಯದೇವ ಸಂಸ್ಥೆಯ ಹೃದಯ ತಜ್ಞ ಡಾ.ಮಂಜುನಾಥ್‍ರವರ ಜೊತೆ ಮಾತನಾಡಿ, ವೀರಣ್ಣನವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು. ರಾಜ್ಯ ಸಹಕಾರ ಮಹಾ ಮಂಡಳದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್ ಬಾಬು, ಅಪೆಕ್ಸ್ ಬ್ಯಾಂಕ್ ಜಗದೀಶ್‍ರವರು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








