ಬೆಂಗಳೂರು:

ಡಿಆರ್ಡಿಓ ದ ಮಾಜಿ ವಿಜ್ಞಾನಿ ಖ್ಯಾತ ವಿಜ್ಞಾನ ಅಂಕಣಕಾರರಾಗಿದ್ದ ಸುದೀಂದ್ರ ಹಾಲ್ದೊಡ್ಡೇರಿಯವರು ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಅವರಿಗೆ 61 ವರ್ಷ ವಯಸ್ಸಾಗಿತ್ತು. ಕಳೆದ ವಾರದ ಹಿಂದೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳಿಗೆ ಆಮ್ಲಜನಕ ಸರಬರಾಜು ಆಗದ ಹಿನ್ನೆಲೆಯಲ್ಲಿ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾದರು.
ಅವರ ಕೈಯಲ್ಲಿ ಕನ್ನಡದಲ್ಲೇ ವಿಜ್ಞಾನ ಕೌತುಕಗಳ ಬಗ್ಗೆ ಸಾಮಾನ್ಯರಿಗೂ ಅರ್ಥವಾಗುವಂತೆ ಬರಹ ಮೂಡಿ ಬರುತ್ತಿತ್ತು .ಕನ್ನಡದ ಹಲವು ಪತ್ರಿಕೆಗೆ ಅಂಕಣವನ್ನೂ ಸಹ ಬರೆಯುತ್ತಿದ್ದರು. ಹಾಗೆಯೇ ‘ಕನ್ನಡದಲ್ಲಿ ವಿಜ್ಞಾನ ಸಂವಹನ ಸವಾಲುಗಳು’ ಎಂಬುದರ ಕುರಿತು ಉಪನ್ಯಾಸಗಳನ್ನು ನೀಡಿದ್ದಾರೆ.
ಅವರ ಮೃತದೇಹವನ್ನು ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








