ತುಮಕೂರು :
ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಾಗಲೀ ಯಾರೇ ಬಂದೂ ನಿಂತರೂ ಸ್ವಾಗತಿಸುವೆ.ನಿಲ್ಲುವವರನ್ನು ನಾವು ತಡೆಯಲಾಗುತ್ತದೆಯೇ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸಿದ್ದರು. ನಾವ್ಯಾರು ಸ್ಪರ್ಧೆ ಬೇಡವೆಂದು ತಡೆದಿಲ್ಲ. ಮುಂದೆಯೂ ಯಾರು ಬರುತ್ತಾರೋ ಬರಲಿ. ಅವರು ಬರುತ್ತಾರೆ, ಇವರು ಸ್ಪರ್ಧಿಸುತ್ತಾರೆಂದು ನಾನು ರಾಜಕಾರಣದಲ್ಲಿ ಉಳಿದಿಲ್ಲ.ಕಳೆದ ಮೂರ್ನಾಲ್ಕು ದಶಕಗಳಿಂದ ತಳ ಮಟ್ಟದ ಸಂಘಟನೆ, ಹೋರಾಟದಿಂದ ರಾಜಕಾರಣ, ಚುನಾವಣೆ ಮಾಡುತ್ತಿದ್ದೇನೆ ಎಂದು ನುಡಿದರು.
ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವ ಪ್ರಶ್ನೆಯಿಲ್ಲ. ಕಾಂಗ್ರೆಸ್‍ನಿಂದ ಆಹ್ವಾನವೂ ಬಂದಿಲ್ಲ.ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಮಾಧುಸ್ವಾಮಿ ಪ್ರತಿಕ್ರಿಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ