ತಿಪಟೂರು :
ನಗರದ ಐ.ಬಿ ವೃತ್ತವನ್ನು ಜೂ. 03 ರಿಂದ ಅನ್ವಯವಾಗುವಂತೆ ಸದರಿ ವೃತ್ತಕ್ಕೆ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವೆಂದು ನಾಮಕರಣ ಮಾಡಿ ಪೌರಾಡಳಿತ ನಿರ್ದೇಶನಾಲಯವು ಕರ್ನಾಟಕ ಪುರಸಭೆಗಳ ಅಧಿನಿಯಮ 1964ರ ಕಲಂ 211ರ ಪ್ರಕಾರ ಅನುಮೋದನೆ ನೀಡಿದೆ.
ದಶಕದಿಂದಲೂ ಪ್ರವಾಸಿ ಮಂದಿರ ವೃತ್ತಕ್ಕೆ ಮಹಾನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೆಸರಿಡಬೇಕೆಂದು ದಸಂಸ ಹಾಗೂ ದಲಿತಪರ ಸಂಘಟನೆಗಳು ಹೋರಾಟ ನಡೆಸಿ, ಪರಿಶಿಷ್ಟಜಾತಿ ಮತ್ತು ವರ್ಗದ ಕುಂದು ಕೊರತೆ ಸಭೆಯಲ್ಲಿಯೂ ಸಹ ಹೋರಾಟವನ್ನು ಮಾಡಿದ್ದರು. ಹಾಗೂ ಈ ಬಗ್ಗೆ ನಗರಸಭೆಗೆ ಹಲವಾರು ಬಾರಿ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ ಈ ಕುರಿತು ಅರೆಬೆತ್ತಲೆ ಮೆರವಣಿಗೆ ಮಾಡುತ್ತವೆ ಎಂದು ದಸಂಸ ಮುಖಂಡರು ಸರ್ಕಾರವನ್ನು ಎಚ್ಚರಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸದರಿ ವೃತ್ತಕ್ಕೆ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತವೆಂದು ಪೌರಾಡಳಿತ ನಿರ್ದೇಶನಾಲಯ ನಾಮಕರಣ ಮಾಡಿ ಆದೇಶಿಸಿರುವುದಕ್ಕೆ ದಲಿತ ಮುಖಂಡರುಗಳು ಹರ್ಷವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ