ಬ್ಯಾಲ್ಯ :
ಕೊರೋನಾ ಎಂಬ ಕಾಯಿಲೆ ಬಂದು ಮನುಕುಲವನ್ನು ಅಧೋಗತಿಗೆ ತಳ್ಳಿ, ಬಹಳ ಕಷ್ಟ-ನಷ್ಟಗಳನ್ನು ತಂದೊಡ್ಡಿದೆ. ದುಡಿದು ತಿನ್ನುವ ಜನ ಹಸಿವಿನಿಂದ ಕಂಗೆಡುವಂತೆ ಮಾಡಿದೆ ಎಂದು ಮಾಜಿ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬ್ಯಾಲ್ಯ ಗ್ರಾಮ ಪಂಚಾಯ್ತಿಯಲ್ಲಿನ ಎಲ್ಲಾ ಬಿಪಿಎಲ್ ಕಾರ್ಡ್ದಾರರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಅನೇಕ ಸಾವು- ನೋವುಗಳಾದವು. ನಮ್ಮ ಜೊತೆಯವರೆ ಅನೇಕರು ಇಲ್ಲವಾದರು. ಇಂತಹ ಸಂದರ್ಭದಲ್ಲಿ ಅನೇಕ ಜನ ದಾನಿಗಳು ಆಹಾರ ಪದಾರ್ಥಗಳನ್ನು ದಾನ ಮಾಡಿದರು. ನಾನೂ ಸಹ ನನ್ನ ಕ್ಷೇತ್ರ ವ್ಯಾಪ್ತಿಯ ಎಲ್ಲ ಪಂಚಾಯ್ತಿಗಳಿಗೂ ದಿನಸಿ ಕಿಟ್ಗಳನ್ನು ನೀಡಿದ್ದೆ. ಬ್ಯಾಲ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗರತ್ನಮ್ಮನವರ ಪತಿ ಕಾಂಗ್ರೆಸ್ ಮುಖಂಡ ಭೈರಪ್ಪನವರು ಮತ್ತು ಪಂಚಾಯಿತಿ ಸದಸ್ಯರು, ಮುಖಂಡರುಗಳು ಜೊತೆಗೂಡಿ ಬ್ಯಾಲ್ಯ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಬಡವರಿಗೂ ದಿನಸಿ ಕಿಟ್ ವಿತರಿಸುತ್ತಿದ್ದಾರೆ. ಅವರೆಲ್ಲರಿಗೂ ಅಭಿನಂದನೆಗಳನ್ನು ಅರ್ಪಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗಂಗರತ್ನಮ್ಮ, ಉಪಾಧ್ಯಕ್ಷೆ ಅಮೃತ ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥ ನಾರಾಯಣ್, ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಸಿ ಭೈರಪ್ಪ, ಶಿವಕುಮಾರ್, ಗ್ರಾಪಂ ಮಾಜಿ ಸದಸ್ಯೆ ರಮಾಬಾಯಿ, ಎ.ಪಿ.ಎಂ.ಸಿ ಅಧ್ಯಕ್ಷ ರಾಜ್ಕುಮಾರ್, ವೆಂಕಟಾಚಲಯ್ಯ, ಬಿ.ಕೆ ನಂಜೇಗೌಡ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ, ಪಂಚಾಯಿತಿ ಸದಸ್ಯರಾದ ಶಾರದಮ್ಮ, ಶಿವಣ್ಣ, ಶೇಖರಪ್ಪ, ಸ್ವಾತಿ ಇನ್ನೂ ಮುಂತಾದ ಪ್ರಮುಖರು ಹಾಜರಿದ್ದರು. ಪತ್ರಕರ್ತ ವರದರಾಜ್ ಸ್ವಾಗತಿಸಿ, ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
