ತುಮಕೂರು : ಸ್ಮಾರ್ಟ್’ಸಿಟಿ ಲಿಮಿಟೆಡ್ ನಿಂದ ಹೆಲ್ತ್’ಸಿಟಿಯತ್ತ ನಗರ!

ತುಮಕೂರು :

      ಸ್ಮಾರ್ಟ್‍ಸಿಟಿ ಯೋಜನೆ ಎಂದರೆ ಕೇವಲ ರಸ್ತೆ, ಕಟ್ಟಡಗಳಷ್ಟೇ ಅಲ್ಲದೇ, ಜನರ ಜೀವನ ಮಟ್ಟ ಸುಧಾರಣೆ, ಸಾಮಾಜಿಕ, ಆರ್ಥಿಕ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ. ಅದರಂತೆ, ಸ್ಮಾರ್ಟ್‍ಸಿಟಿ ಮಿಷನ್ ಮಾರ್ಗಸೂಚಿಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ತುಮಕೂರು ಸ್ಮಾರ್ಟ್‍ಸಿಟಿ ಪರಿಷ್ಕøತ ಯೋಜನೆಯಡಿ ನಗರದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಕೆಳಕಂಡ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

1) ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅಪಘಾತ ಕೇಂದ್ರವನ್ನು ಆರಂಭಿಸುವುದು.
2) ತುಮಕೂರಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗು ಜಿಲ್ಲಾಸ್ಪತ್ರೆಯಲ್ಲಿ ಡಿಜಿಟಲ್ ನರ್ವ್ ಸೆಂಟರ್ ಆರಂಭಿಸುವುದು.
3) ಜಿಲ್ಲಾ ಆಸ್ಪತ್ರೆಗೆ ಆಧುನಿಕ ಜೀವರಕ್ಷಕ ಆ್ಯಂಬ್ಯುಲೆನ್ಸ್ ಒದಗಿಸುವುದು.
4) ಜಿಲ್ಲಾಸ್ಪತ್ರೆ ಆವರಣದಲ್ಲಿ ಆರ್‍ಟಿಪಿಸಿಆರ್ ಲ್ಯಾಬ್ ಸ್ಥಾಪಿಸುವುದು.

     ಮೇಲ್ಕಂಡ ಎಲ್ಲ ಯೋಜನೆಗಳು ಸ್ಮಾರ್ಟ್‍ಸಿಟಿ ಅನುದಾನದಿಂದ ಕಾರ್ಯಗತವಾಗುತ್ತಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸ್ಮಾರ್ಟ್‍ಸಿಟಿ ಸಹಯೋಗದೊಂದಿಗೆ ಇವುಗಳನ್ನು ಅನುಷ್ಠಾನಗೊಳಿಸುತ್ತಿದೆ.

ಅಪಘಾತ ಚಿಕಿತ್ಸಾ ಕೇಂದ್ರ (Trauma Care Centre):

      ತುಮಕೂರು ಸ್ಮಾರ್ಟ್‍ಸಿಟಿ ಪ್ರಮುಖ ಯೋಜನೆಗಳಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಅಪಘಾತ ಚಿಕಿತ್ಸಾ ಕೇಂದ್ರ ಆರಂಭಿಸುವುದು ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ತುಮಕೂರು ನಗರದಲ್ಲಿ 2 ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು ಹಾದು ಹೋಗುವುದರಿಂದ ಅಪಘಾತಗಳು ಸಂಭವ ಹೆಚ್ಚಾಗಿದೆ. ಅಪಘಾತದ ಸಂದರ್ಭದಲ್ಲಿ ಗಾಯಗೊಂಡವರಿಗೆ ಈ ಕೇಂದ್ರದಲ್ಲಿ ಚಿಕಿತ್ಸೆ ನೀಡುವುದು ಇದರ ಉದ್ದೇಶ. ಅಪಘಾತದ `ಗೋಲ್ಡನ್ ಅವರ್’ (ಅಮೂಲ್ಯ ಅವಧಿ) ನಲ್ಲಿಯೇ ಚಿಕಿತ್ಸೆ ನೀಡಿದರೆ ಗಾಯಾಳುವನ್ನು ಬದುಕಿಸಿಕೊಳ್ಳಲು ಸಾಧ್ಯ. ಬೆಂಗಳೂರಿಗೆ ಕರೆದುಕೊಂಡು ಹೋಗುವ ಬದಲು ತುಮಕೂರು ನಗರದಲ್ಲಿಯೇ ಅಪಘಾತ ಚಿಕಿತ್ಸಾ ಕೇಂದ್ರ ತೆರೆಯುವುದರಿಂದ ಗಾಯಗೊಂಡವರಿಗೆ ಕೂಡಲೇ ಅವಶ್ಯಕವಾದ ಚಿಕಿತ್ಸೆ ದೊರೆಯುತ್ತದೆ.

ಅಪಘಾತ ಚಿಕಿತ್ಸಾ ಕೇಂದ್ರದ ಕಟ್ಟಡದಲ್ಲಿ ಅಳವಡಿಸಿರುವ ಸವಲತ್ತುಗಳು:

ನೆಲಮಹಡಿ -ವಿಸ್ತೀರ್ಣ: 2310.00 ಚ.ಮೀ.
1) ವಾಹನ ನಿಲುಗಡೆ 2) ಕಟ್ಟಡ ನಿರ್ವಹಣಾ ವ್ಯವಸ್ಥೆ 3) ಎರಡು ಲಿಫ್ಟ್ 4) ರ್ಯಾಂಪ್
ನೆಲಮಹಡಿ-ವಿಸ್ತೀರ್ಣ 2058.00 ಚ.ಮೀ.
1) ಸ್ವಾಗತಕಾರರು 2) ಕ್ಷ- ಕಿರಣ ವಿಭಾಗ 3) ಶಸ್ತ್ರಚಿಕಿತ್ಸಾ ಕೊಠಡಿ 4) ಅಲ್ಟ್ರಾ ಸೌಂಡ್ ಕೊಠಡಿ 5) ಪ್ರಯೋಗಾಲಯ 6) ಸಂದರ್ಶನ ಕೊಠಡಿ 7) ತುರ್ತುಚಿಕಿತ್ಸಾ ವಾರ್ಡ್ 8) ರೇಡಿಯೋಲಜಿ 9) ಹೊರರೋಗಿಗಳ ದಾಖಲಾತಿ ವಿಭಾಗ 10 ವೈದ್ಯರ ಹಾಗೂ ಶುಶ್ರೂಷಕಿಯರ ಕೊಠಡಿಗಳು 11) ಔಷಧಿ ವಿತರಣಾಕೊಠಡಿ

ಒಂದನೇ ಮಹಡಿ : ವಿಸ್ತೀರ್ಣ 2103.00 ಚ.ಮೀ.
1) ವಾರ್ಡ್ ವಿಭಾಗ-67 ಹಾಸಿಗೆಗಳು 2) ಸ್ಪೆಷಲ್ ವಾರ್ಡ್‍ಗಳು-7 ಹಾಸಿಗೆಗಳು 3) ಸಿ.ಎಸ್.ಎಸ್.ಡಿ. ವಿಭಾಗ.
ಎರಡನೇ ಮಹಡಿ: ವಿಸ್ತೀರ್ಣ 2103.00 ಚ.ಮೀ.
1) 2 ಭಾರಿ ಶಸ್ತ್ರಚಿಕಿತ್ಸಾ ಕೊಠಡಿಗಳು 2) 1 ಲಘು ಶಸ್ತ್ರಚಿಕಿತ್ಸಾ ಕೊಠಡಿ 3) 25 ಹಾಸಿಗೆಗಳ ಐಸಿಯು ವಾರ್ಡ್ 4) ಪ್ರೀ ಆಪರೇಟಿವ್ ಮತ್ತು ಪೋಸ್ಟ್ ಆಪರೇಟಿವ್ ವಾರ್ಡ್‍ಗಳು. 5) ನಿರೀಕ್ಷಣಾ ಕೊಠಡಿಗಳು.
ಮೂರನೇ ಮಹಡಿ: ವಿಸ್ತೀರ್ಣ 367.75 ಚ.ಮೀ.

1) ಉಪಹಾರ ಗೃಹ ಹಾಗೂ ಡೈನಿಂಗ್ ಹಾಲ್, 2) ಎಎಚ್‍ಯು ವಿಭಾಗ 3) ಸ್ಟೋರ್ ವಿಭಾಗ.

ಇತರೆ ಸೌಲಭ್ಯಗಳು: 1)ಒಳ ಮತ್ತು ಹೊರ ಭಾಗದ ವಿದ್ಯುತೀಕರಣ ಕಾಮಗಾರಿಗಳು, 2)ಒಳ ಮತ್ತು ಹೊರ ಭಾಗದ ನೀರು ಸರಬರಾಜು ಮತ್ತು ಸ್ಯಾನಿಟರಿ ಕಾಮಗಾರಿಗಳು, 3)ಎರಡು 320 ಕೆ.ವಿ.ಎ.ಡಿ.ಜಿ.ಸೆಟ್ ಅಳವಡಿಸಲಾಗುವುದು, 4)ಸಿವೇಜ್ ಟ್ರೀಟ್‍ಮೆಂಟ್ ಘಟಕ 40 ಕೆ.ಎಲ್.ಡಿ. 5)ಆಸ್ಪತ್ರೆಯ ಮುಂಭಾಗದಲ್ಲಿ ಉದ್ಯಾನ ವನ ನಿರ್ಮಾಣ, 6)ಮಳೆ ನೀರು ಕೊಯ್ಲು, ರಸ್ತೆ, ಮುಂಭಾಗದಲ್ಲಿ ಹುಲ್ಲಿನ ಹಾಸು ಹಾಗೂ ಇತರೆ ಕೆಲಸಗಳು, 7)ಎರಡು ಕೊಳವೆ ಬಾವಿಗಳನ್ನು ಕೊರೆದು ನೀರು ಸರಬರಾಜು ಮಾಡಲು ಪಂಪ್ ಅಳವಡಿಸಲಾಗುವುದು, 8)ಎರಡು ಮಾಡುಲರ್ ಒ.ಟಿ.ಗಳನ್ನು ಅಳವಡಿಸಲಾಗುವುದು, 10)ಬಿಲ್ಡಿಂಗ್ ಮ್ಯಾನೇಜ್‍ಮೆಂಟ್ ಸಿಸ್ಟಂ, 11)ಸೋಲಾರ್ ಹೀಟರ್‍ಗಳನ್ನು ಬೀದಿದೀಪದ ಕಂಬಗಳನ್ನು ಅಳವಡಿಸುವುದು ಮತ್ತು 12)ಸೆಕ್ಯೂರಿಟಿ ಹಾಗೂ ಮುಖ್ಯ ದ್ವಾರಗಳನ್ನು ಅಳವಡಿಸಲಾಗುವುದು.

      ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ರೂ.41.53 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅಪಘಾತ ಚಿಕಿತ್ಸಾ ಕೇಂದ್ರದ ಕಟ್ಟಡ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು, ಫ್ಲೋರಿಂಗ್ ಕಾರ್ಯ ಪ್ರಗತಿಯಲ್ಲಿದೆ ಹಾಗೂ ಡಿಸೆಂಬರ್ 2021ರ ವೇಳೆಗೆ ಮುಕ್ತಾಯಗೊಳಿಸುವ ಗುರಿಯನ್ನು ಹೊಂದಿದೆ. ಈ ಆಸ್ಪತ್ರೆಯು 100 ಹಾಸಿಗೆಗಳನ್ನು ಒಳಗೊಂಡಿದ್ದು, ಅಪಘಾತ ಚಿಕಿತ್ಸಾ ಕೇಂದ್ರಕ್ಕೆ ಬೇಕಾಗಿರುವ ಸಲಕರಣೆಗಳನ್ನು ಒದಗಿಸಲು ಅತಿಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ.

ಬಿ) ಡಿಜಿಟಲ್ ನರ್ವ್ ಸೆಂಟರ್ (ಡಿಐಎನ್‍ಸಿ):

      ಈ ಯೋಜನೆಯು ಕೋಲಾರ ಡೇಟಾ ಸೆಂಟರ್ ಮಾದರಿ ಅಳವಡಿಸಿಕೊಂಡು ತುಮಕೂರು ಜನತೆಗೆ ಸೌಲಭ್ಯ ಒದಗಿಸುವ ಯೋಜನೆಯಾಗಿದ್ದು, ಜನರಿಂದಲೇ ಸಂಯೋಜನೆಗೊಂಡಿರುವ ದತ್ತಾಂಶ ಜಾಲ ವ್ಯವಸ್ಥೆಯಲ್ಲಿ ತಂತ್ರಜ್ಞಾನ ವಿನಿಮಯದ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ತಲುಪಿಸುವ ವ್ಯವಸ್ಥೆಯಾಗಿದೆ.

ಈ ಯೋಜನೆಯ ಪ್ರಮುಖ ಅಂಶಗಳು:

• ಆರೋಗ್ಯ ಸೇವೆ, ವೈದ್ಯರ ಲಭ್ಯತೆಯ ಕುರಿತು ಅತಿಶೀಘ್ರವಾಗಿ ಸೌಲಭ್ಯ ದೊರಕುವಂತೆ ಮಾಡುವುದು.
• ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಮಾಹಿತಿ, ಸಂಪನ್ಮೂಲವನ್ನು ವರ್ಚುವಲ್ ಸಮಾಲೋಚನೆ ಮೂಲಕ ಸಂಪರ್ಕಿಸುವಂತೆ ಮಾಡಿ ಆರೋಗ್ಯ ಕ್ಷೇತ್ರ ಮತ್ತು ಜನರ ನಡುವೆ ಸೇತುವೆ ನಿರ್ಮಿಸುವುದು.
• ಸಂಚಾರ ವ್ಯವಸ್ಥೆಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವುದು, ಆರ್ಥಿಕ ವೆಚ್ಚದ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಮುಂಚಿತವಾಗಿಯೇ ಆರೋಗ್ಯ ಸಮಾಲೋಚನೆ ವ್ಯವಸ್ಥೆಯನ್ನು ಜಾರಿಗೆ ತರುವುದು.
• ಆಶಾ ಕಾರ್ಯಕರ್ತೆಯರು ಮತ್ತು ರೋಗಿಗಳ ಆರೈಕೆ ಮಾಡುವ ಸಂಯೋಜಕರು ಈ ಯೋಜನೆಯ ಅನುಷ್ಟಾನಕ್ಕಾಗಿ ಸರ್ವೆ ಕಾರ್ಯವನ್ನು ನಡೆಸಿದ್ದು, ಡಿಜಿಟಲ್ ನರ್ವ್ ಸೆಂಟರ್ ಇದರ ಮೇಲ್ವಿಚಾರಣೆ ನಡೆಸುತ್ತಿದೆ.

     ತುಮಕೂರಿನ ಜಿಲ್ಲಾಸ್ಪತ್ರೆ ಹಾಗೂ ನಗರದ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಯೋಜನೆಯು 2019 ರಿಂದಲೆ ಜಾರಿಗೆ ಬಂದಿರುತ್ತದೆ. ಪ್ರತಿ ತಿಂಗಳು ಸರಾಸರಿ 800 ಕರೆಗಳನ್ನು ಸ್ವೀಕರಿಸಲಾಗಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಈ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ.

     ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ನಗರದಲ್ಲಿರುವ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ದುರಸ್ತಿ ಮಾಡಿ, ಪೀಠೋಪಕರಣ ಒದಗಿಸಲಾಗಿದ್ದು, ಮಾಹಿತಿ ತಂತ್ರಜ್ಞಾನ ಸೌಕರ್ಯಗಳನ್ನು ಒಟ್ಟು 1.55ಕೋಟಿಗಳ ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಹಾಗೂ ಕಳೆದ 2 ವರ್ಷಗಳಿಂದ ಅವಶ್ಯಕವಾದ ಮಾನವ ಸಂಪನ್ಮೂಲ ಒದಗಿಸಲು ಒಟ್ಟು 2.32ಕೋಟಿ ರೂಗಳನ್ನು ವ್ಯಯಿಸಲಾಗಿದೆ.

ಎಎಲ್‍ಎಸ್ ಆಂಬುಲೆನ್ಸ್:

      ಜಿಲ್ಲಾ ಶಸ್ತ್ರಚಿಕಿತ್ಸಕರ ಕೋರಿಕೆಯ ಮೇರೆಗೆ ತುಮಕೂರು ಸ್ಮಾರ್ಟ್‍ಸಿಟಿ ವತಿಯಿಂದ ರೂ.53.98 ಲಕ್ಷಗಳ ವೆಚ್ಚದಲ್ಲಿ ಸುಧಾರಿತ ಆಧುನಿಕ ಜೀವರಕ್ಷಕ ಆಂಬುಲೆನ್ಸ್‍ನ್ನು ಒದಗಿಸಲಾಗಿದ್ದು, ಈ ಆಂಬ್ಯೂಲೆನ್ಸ್‍ನಲ್ಲಿ ವೆಂಟಿಲೇಟರ್, ಡೆಫಿಬ್ರಿಲೆಟರ್, ಮಲ್ಟಿ ಪ್ಯಾರಾ ಮಾನಿಟರ್, ಸಕ್ಷನ್ ಅಪಾರ್ಟಸ್, ಸಿರಿಂಜ್ ಇನ್‍ಫ್ಯೂಜನ್ ಪಂಪ್ ಇತ್ಯಾದಿ ಸೌಲಭ್ಯಗಳನ್ನು ಒಳಗೊಂಡಿರುತ್ತದೆ.

ಜಿಲ್ಲಾಸ್ಪತ್ರೆಯಲ್ಲಿ ಆರ್‍ಟಿಪಿಸಿಆರ್ ಲ್ಯಾಬ್:

      ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ರಕ್ತದ ಮಾದರಿ ಸಂಗ್ರಹವನ್ನು ಬೆಂಗಳೂರಿಗೆ ಪರೀಕ್ಷೆಗಾಗಿ ಕಳುಹಿಸಬೇಕಾಗಿತ್ತು. ಇದರಿಂದ ಪರೀಕ್ಷಾ ವರದಿ ಪಡೆಯುವುದು ವಿಳಂಬವಾಗಿದ್ದು, ಇದನ್ನು ನಿವಾರಿಸುವ ಸಲುವಾಗಿ ಹಾಗೂ ಶೀಘ್ರವಾಗಿ ಪರೀಕ್ಷಾ ವರದಿ ಪಡೆಯುವ ಉದ್ದೇಶದಿಂದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಆರ್‍ಟಿಪಿಸಿಆರ್ ಕೇಂದ್ರವನ್ನು ರೂ.74.39 ಲಕ್ಷಗಳ ವೆಚ್ಚದಲ್ಲಿ ಸ್ಥಾಪಿಸಲಾಗಿದೆ. ಪ್ರತಿದಿನ ಒಂದು ಸಾವಿರದಿಂದ ಒಂದು ಸಾವಿರದ ಐನೂರು ಪರೀಕ್ಷೆಗಳನ್ನು ಈ ಪ್ರಯೋಗಾಲಯದಲ್ಲಿ ಮಾಡಬಹುದಾಗಿದೆ.
ಈ ರೀತಿಯಾಗಿ ನಗರದಲ್ಲಿ ಮೂಲಭೂತ ಸೌಕರ್ಯಗಳ ಜೊತೆಗೆ ಸರ್ಕಾರದ ವೈದ್ಯಕೀಯ ಸೇವೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ತುಮಕೂರು ಸ್ಮಾರ್ಟ್‍ಸಿಟಿ ಅನುದಾನವು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link