ಬನುಮಯ್ಯನವರ ವೃತ್ತ : ರಾಜ್ಯದಲ್ಲೆ ಪ್ರಥಮ

ಮಧುಗಿರಿ : 

      ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ರಾವ್‍ಬಹದ್ದೂರ್ ಡಿ. ಬನುಮಯ್ಯನವರ ವೃತ್ತ ಎಂದು ನಾಮಕರಣ ಮಾಡಿರುವುದು ರಾಜ್ಯದಲ್ಲೇ ಮೊದಲು, ಪುತ್ಥಳಿ ನಾಲ್ಕನೆಯದಾಗಿದ್ದು, ಈ ಕಾರ್ಯದಿಂದಾಗಿ ಇತಿಹಾಸ ನಿರ್ಮಾಣವಾದಂತಾಗಿದೆ ಎಂದು ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶಾಂತವೀರ ಮಹಾಸ್ವಾಮಿಗಳು ತಿಳಿಸಿದರು.

      ಅವರು ಆ.17ರಂದು ಹೊಸಕೆರೆ ಗ್ರಾಮದಲ್ಲಿ ವಿಶ್ವ ಕುಂಚಿಟಿಗರ ಯುವಶಕ್ತಿ ಹಾಗೂ ಹೊಸಕೆರೆ ಗ್ರಾಮ ಪಂಚಾಯಿತಿಯ ಸಂಯುಕ್ತಾಶ್ರಯದಲ್ಲಿ ಡಿ. ಬನುಮಯ್ಯನವರ ಪುತ್ಥಳಿ ಅನಾವರಣ ಹಾಗೂ ವೃತ್ತ ನಾಮಕರಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

       ಮೈಸೂರಿನಲ್ಲಿ ರಸ್ತೆಗೆ ಡಿ.ಬನುಮಯ್ಯನವರ ಹೆಸರಿಡಲಾಗಿದೆ. ವೃತ್ತಕ್ಕೆ ಹೆಸರಿಟ್ಟಿರುವುದು ಇದೇ ಮೊದಲು, ಇನ್ನೂ ಪುತ್ಥಳಿ ಮೈಸೂರು ಮತ್ತು ಶಿರಾದಲ್ಲಿದ್ದು ನಾಲ್ಕನೆಯದಾಗಿ ಮಧುಗಿರಿಯಲ್ಲಾಗಿದೆ. ಈ ಮಹತ್ಕಾರ್ಯಕ್ಕೆ ಕಾರಣೀಭೂತರಾದ ಹೊಸಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಹಾಗೂ ಪಿಡಿಓ ಮತ್ತು ಸಿಬ್ಬಂದಿ ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಕಾರ್ಯ ಮಾಡಿದ್ದಕ್ಕೆ ಅಭಿನಂದನೆ ತಿಳಿಸಿ, ಪುತ್ಥಳಿಗಳನ್ನು ನಿರ್ಮಿಸುವುದರ ಮೂಲಕ ಅವರುಗಳ ಆದರ್ಶ, ಮೌಲ್ಯಗಳು ಯುವ ಪೀಳಿಗೆಗೆ ಪರಿಚಯಿಸಿದಂತಾಗುತ್ತದೆ. ಪೀಠಗಳು- ಮಠಗಳು ಆಯಾ ಜನಾಂಗದ ಜಾಗೃತಿ ಮೂಡಿಸಲು ಪಾರಂಭವಾದವು, ಎಲ್ಲಾ ಸಮುದಾಯಗಳು ಶಿಕ್ಷಣ, ಮೀಸಲಾತಿ, ರಾಜಕೀಯ ಪ್ರಾವೀಣ್ಯತೆ ಪಡೆದಿದ್ದಾರೆ. ಆದರೆ ಕುಂಚಿಟಿಗರು ಇದನ್ನು ಪಡೆಯುವಲ್ಲಿ ವಿಫಲರಾಗಿದ್ದೇವೆ. ಸಮುದ್ರಕ್ಕೆ ನೆಂಟಸ್ಥನ ಉಪ್ಪಿಗೆ ಬರ ಎನ್ನುವ ಪರಿಸ್ಥಿತಿ ಕುಂಚಿಟಿಗರದ್ದಾಗಿದೆ ಎಂದರು.

ನಮ್ಮವರೆ ನಮ್ಮನ್ನು ಬೆಂಬಲಿಸುವುದಿಲ್ಲ:-

      ನಮ್ಮಿಂದ ಗೆದ್ದವರು ನಮಗೆ ಮೀಸಲಾತಿ ಬೇಕು ಎಂದು ಹೋರಾಟ ಮಾಡುತ್ತಾರೆ. ಆದರೆ ನಮ್ಮವರೇ ಹೋರಾಟ ಮಾಡುವಲ್ಲಿ ಹಿಂದಿರುವುದು ಬೇಸರ ತಂದಿದೆ. 1994 ರಲ್ಲಿ ಕುಂಚಿಟಿಗರಿಗೆ ಕೇಂದ್ರ ಸರ್ಕಾರವು ಮೀಸಲತಿ ನೀಡಿತ್ತು. ನಂತರ ನಮ್ಮ ಜನಾಂಗವನ್ನು ಬಿಟ್ಟು ಹೋಗುತ್ತಾರೆಂಬ ಒಂದೇ ಕಾರಣಕ್ಕೆ ಒಬಿಸಿ ಪಟ್ಟಿಯಿಂದ ಹೊರತೆಗೆಯಲಾಗಿದೆ. ಸಂಸದರಾಗಿದ್ದಾಗ ಎಸ್.ಪಿಮುದ್ದಹನುಮೇ ಗೌಡರು ಮತ್ತು ಜಿ.ಎಸ್.ಬಸವರಾಜ್ ನಮ್ಮ ಪರ ಮಾತನಾಡಿದರು. ಕೆ.ಎನ್. ರಾಜಣ್ಣನವರು ವಿಧಾನಸಭೆಯಲ್ಲಿ ಕುಂಚಿಟಿಗರಿಗೆ ಮೀಸಲಾತಿ ಕೊಡಿ ಎಂದು ಪ್ರಸ್ತಾಪಿಸಿದ್ದರು. ಆದರೆ ಮಧುಗಿರಿ ಶಾಸಕ ವೀರಭದ್ರಯ್ಯ, ಶಿರಾ ಶಾಸಕರಾಗಿದ್ದ ಟಿ.ಬಿ. ಜಯಚಂದ್ರ ಅವರು ಒಬಿಸಿ ಪಟ್ಟಿಗೆ ಸೇರಿಸಲು ಪ್ರಯತ್ನವನ್ನೆ ಮಾಡಲಿಲ್ಲವೆಂದರು.

ಸರ್ವಜನಾಂಗದರೊಂದಿಗೆ ಮಠಾಧೀಶರು ಇರಬೇಕು :-

      ನಾನು 33 ಜನಾಂಗದ ಸ್ವಾಮಿಗಳ ಜೊತೆಗೆ ಚೆನ್ನಾಗಿದ್ದೇನೆ. ಯಾರೇ ಕರೆದರೂ ನಾನು ಹೋಗಲು ಸಿದ್ಧನಿದ್ದೇನೆ. ವಾಲ್ಮೀಕಿ ಜನಾಂಗದವರು ಬರುತ್ತಾರೆಂದು ಅಸಡ್ಡೆ ತೋರುವುದು, ಹರಿಜನ ಬರುತ್ತಾರೆಂದು ನಾನು ಬರುವುದಿಲ್ಲ ಎಂದು ಎಲ್ಲೂ ಹೇಳುವುದಿಲ್ಲ, ಜನರ ಹೃದಯದಲ್ಲಿ ನಾವಿದ್ದೇವೆ. ಎಲ್ಲರೂ ಒಂದಾದರೆ ಮಾತ್ರ ಹಿಂದೂವಾಗಲು ಸಾಧ್ಯ. ಜಾತಿ ಹುಟ್ಟಿನ ಕಾರಣಕ್ಕಷ್ಟೆ, ಸಂಘರ್ಷಕ್ಕಾಗಿ ಜಾತಿಯನ್ನು ಬಳಸಿಕೊಳ್ಳಬಾರದು. ಮಠಗಳು ದ್ವೇಷ, ಪ್ರತಿಷ್ಠೆಯನ್ನು ಬಿಟ್ಟು ಸೇವೆಯಿಂದಾಗಿ ಮಠಗಳು ಮೋಕ್ಷ ಹೊಂದಬೇಕು. ಮಠಾಧೀಶರು ಮತ್ತು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.

      ಹೋರಾಟದ ಮನೋಭಾವ ಉಳ್ಳವರು ಯಾವಾಗಲು ಟೀಕೆಗೆ ಒಳಗಾಗುತ್ತಾರೆ. ಸಂಘಟನೆ ಮಾಡುವಾಗ ಸಂಘರ್ಷವಿಲ್ಲದಿದ್ದರೆ ಅದಕ್ಕೆ ಕಿಮ್ಮತ್ತು ಇರುವುದಿಲ್ಲ. ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಗಣರಾಜ್ಯವಾದ ಹಿನ್ನೆಲೆ ಮತ್ತು ಮೀಸಲಾತಿ ಪಡೆಯಲು ಹೋರಾಟವೆ ಅಸ್ತ್ರವಾಗಿದೆಯೆಂದರು.

ಯಾರೂ ಶಾಶ್ವತವಾಗಿರುವುದಿಲ್ಲ:-

      ಸ್ವಾಮಿಗಳು ಯಾರೂ ಶಾಶ್ವತವಾಗಿ ಇರೋದಿಲ್ಲ, ಸಮಾಜ ಸೇವೆಯ ಮೂಲಕ ಮೋಕ್ಷ. ಮನೆ- ಮಠ ತೊರೆದು ಸನ್ಯಾಸತತ್ವ ಪಡೆದಿರುತ್ತೇವೆ. ರಾಗ-ದ್ವೇಷ ಮಾಡಿದರೆ ಸಂಘಟನೆ ಸಾಧ್ಯವೆ? ವಿಕೃತ ಮನಸ್ಸಿನಿಂದ ಸಮಾಜವನ್ನು ಒಡೆಯುವ ಕೆಲಸ ಮಾಡಬಾರದು. ಜನ ಜಾಗೃತಿ ಮಾಡುವ ಮೂಲಕ ಸತ್ಯದ ಅರಿವಾಗಬೇಕು. ಮಧುಗಿರಿ, ಪಾವಗಡ, ಶಿರಾ, ಕೊರಟಗೆರೆ, ಗುಬ್ಬಿ ತಾಲ್ಲೂಕುಗಳಲ್ಲಿ ಕುಂಚಿಟಿಗರೆ ಹೆಚ್ಚು ಇದ್ದು, ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡದೆ, ಮೀಸಲಾತಿ ಹೋರಾಟಕ್ಕೆ ಮುಂದಾಗಬೇಕು ಎಂದರು.

      ಹೊಸಕೆರೆ ಗ್ರಾಪಂ ಅಧ್ಯಕ್ಷೆ ಮಂಜುಳ ಮಧುಸೂದನ್, ಉಪಾಧ್ಯಕ್ಷ ರಂಗನಾಥ, ಸದಸ್ಯರಾದ ರಂಗಪ್ಪ, ಲಕ್ಷ್ಮೀ, ದಿವ್ಯ, ಉಮಾ ಚಿರಂಜೀವಿ, ವಿಶ್ವ ಕುಂಚಿಟಿಗ ಯುವಶಕ್ತಿ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಶಾಂತ್, ರಾಷ್ಟ್ರೀಯ ಉಪಾಧ್ಯಕ್ಷ ರಮೇಶ್ ಗುಟ್ಟೆ, ಪ್ರಧಾನ ಕಾರ್ಯದರ್ಶಿ ಎ.ಮಾರುತಿ, ಸುಬ್ರªಹ್ಮಣಿ.ಎನ್, ಕುಂಚವಂಶಿ ಬಂಡಿಕೊಡಿಗೆಹಳ್ಳಿ, ಮೋಹನ್‍ಕುಮಾರ್‍ಎಸ್, ಹರೀಶ್ ಬಾಬು, ದೊರೆ ಭಗವಾನ್, ಮಧುಸೂದನ್, ಆಶಾ.ಡಿ.ಬಿ, ಚೇತನ್, ಗಜೇಂದ್ರ, ವೀರಾಪುರ ಶಿವಕುಮಾರ್, ಪಿ.ಡಿ. ಶಿವಣ್ಣ, ನೀಲಿಹಳ್ಳಿ ರಮೇಶ್, ಬಡಕನಹಳ್ಳಿ ಪ್ರವೀಣ್, ಶಿವಶಂಕರ್, ಹುಣಸವಾಡಿ ಶಿವಕುಮಾರ್, ಮರಿತಿಮ್ಮನಹಳ್ಳಿ ದಿಲೀಪ್, ನೀರಕಲ್ಲು ಶರತ್, ಕತ್ತಿರಾಜನಹಳ್ಳಿ ಶಾಂತಲ, ರಂಗನಪಾಳ್ಯ ಗೋಪಾಲ್, (ದೊಡ್ಡೇರಿ) ಶ್ರೀನಿವಾಸ್.ಎನ್.ಎಸ್, ಗೋಪಾಲ್, ಗ್ರಾಪಂ ರಂಗನಾಥ್, ಜೀವಗೊಂಡನಹಳ್ಳಿ ಗೋಪಾಲ್ ಇದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link