ರಾಷ್ಟ್ರೀಯ ಶಿಕ್ಷಣ ನೀತಿ : ನಿಯಮ ಅರಿತು ದಾಖಲಾಗಿ

ಚಿಕ್ಕನಾಯಕನಹಳ್ಳಿ :

     ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ 2021-22ನೇ ಸಾಲಿಗೆ ದಾಖಲಾದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ನೀತಿಯ ನಿಯಮಗಳು ಹಾಗು ಅದರ ಸಾಧಕ-ಭಾಧಕಗಳ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ||ಹೆಚ್.ಎಸ್.ಶಿವಯೋಗಿ ಅವರು ಮಾತನಾಡಿ ಶ್ರದ್ಧೆ, ಆಸಕ್ತಿಯಿಂದ ವಿದ್ಯಾರ್ಥಿ ಹೊಸ ಶಿಕ್ಷಣ ನೀತಿ ನಿಯಮಗಳನ್ನು ತಿಳಿದು ಮುಂದುವರಿಯಬೇಕು, ಗೊಂದಲಗಳನ್ನು ಬಿಟ್ಟು ನಿಖರವಾದ ವಿಷಯ ಆಯ್ಕೆ ಮಾಡುವ ವಿಧಾನ ವಿದ್ಯಾರ್ಥಿಗಳಿಗೆ ವರವಾಗಿದ್ದು, 40 ವರ್ಷಗಳÀ ನಂತರ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹೊರಟಿರುವ ಸರ್ಕಾರ ಉತ್ತಮ ಪಠ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಾಗಲು ವೇದಿಕೆ ಸಿದ್ಧ ಮಾಡಿದೆ ಎಂದರು.

     ಬೌದ್ಧಿಕ ಸಾಮರ್ಥ್ಯ ಹೆಚ್ಚಳಕ್ಕೆ ಸಹಾಯಕ :

      ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಪ್ರೊ|| ರವಿಕುಮಾರ್.ಸಿ ಅವರು, ಉನ್ನತ ಶಿಕ್ಷಣಕ್ಕೆ ಬಂದ ಪ್ರತಿ ವಿದ್ಯಾರ್ಥಿಗಳಿಗೆ ತಮ್ಮದೇ ಆದ ಕನಸುಗಳಿದ್ದು, ಗುಣಮಟ್ಟದ ಶಿಕ್ಷಣದ ಮೂಲಕ ಕನಸುಗಳನ್ನು ಸಾಕಾರಮಾಡಿಕೊಂಡು ಒಳ್ಳೆಯ ಬೆಳವಣಿಗೆ ಆದರೆ ಸಮಾಜಕ್ಕೆ ನಮ್ಮಿಂದ ಬದಲಾವಣೆ ಸಾಧ್ಯ ಎಂದು ಹೇಳಿ, ಶಿಕ್ಷಣ ವ್ಯವಸ್ಥೆ, ಮತ್ತು ಕಾಲೇಜಿನ ಪರಿಚಯ ಮಾಡಿಕೊಟ್ಟರು. ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ ಎಂದರು.

ಕೋರ್ಸ್ ಆಯ್ಕೆ ವಿದ್ಯಾರ್ಥಿಗೆ :

      ದೇಶದಲ್ಲೇ ಪ್ರಥಮ ಬಾರಿಗೆ ರಾಜಯದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯಗಿದ್ದು, ಉನ್ನತ ಶಿಕ್ಷಣವನ್ನು ಗುಣಮಟ್ಟಗೊಳಿಸಲು ಹೊಸ ನೀತಿ ಉಪಯುಕ್ತ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪ್ರತಿ ವಿದ್ಯಾರ್ಥಿ ತನಗೆ ಇಚ್ಛಿಸಿದ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಕೌಶಲ್ಯ, ಮೌಲ್ಯವರ್ಧಿತ ಪಠ್ಯಗಳು, ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮಾಡಲು ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಡಾ.ಸಿ.ಕೆ.ಶೇಖರ್, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಮತ್ತು ಪೆÇೀಷಕರು ತಮ್ಮ ಗೊಂದಲ ಪರಿಹರಿಸಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link