ಗುಬ್ಬಿ :
ಗುಬ್ಬಿಯ ಇತಿಹಾಸ ಪ್ರಸಿದ್ಧ ಗ್ರಾಮದೇವತೆ ದೇವಿಯ ಜಾತ್ರೆಯ ಪ್ರಯುಕ್ತ ಮಂಗಳವಾರ ಊರಿನ ಪ್ರಮುಖ ರಸ್ತೆಗಳಲ್ಲಿ ದೇವಿಯ ಮೆರವಣಿಗೆ ನಡೆಯಿತು.
ದೇವಿಯನ್ನು ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಿ ಹಳೆ ಸಂತೆ ಮೈದಾನದಲ್ಲಿರುವ ದೇವಾಲಯಕ್ಕೆ ಸಂಜೆ ವೇಳೆಗೆ ಕರೆ ತಂದು ಗದ್ದುಗೆ ಮಾಡಲಾಯಿತು. ಕೊರೋನಾ ಕಾರಣದಿಂದ ವಿಜೃಂಭಣೆಯಿಂದ ನೆಡೆಯಬೇಕಿದ್ದ ಉತ್ಸವ ಸರಳ-ಸಾಂಪ್ರದಾಯಕವಾಗಿ ಜರುಗಿತು. ಮೂರು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ 18 ಕೋಮಿನ ಜನರು ಭಾಗವಹಿಸಿ ತಮ್ಮ ಹರಕೆ ತೀರಿಸಿದರು.
ಕಾರ್ಯಕ್ರಮದಲ್ಲಿ 18 ಕೋಮಿನ ಮುಖಂಡರುಗಳು ಮತ್ತು ಪಟೇಲ್ ಕೆಂಪೇಗೌಡರು, ಬೆಟ್ಟಸ್ವಾಮಿ, ರೇಣುಕಾಪ್ರಸಾದ್, ಸೋಮಶೇಖರಪ್ಪ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ