ಚಿ.ನಾ.ಹಳ್ಳಿ : ವಿದ್ಯುತ್ ಹರಿದು ಇಬ್ಬರಿಗೆ ಗಾಯ

ಚಿ.ನಾ.ಹಳ್ಳಿ : 

      ವಿದ್ಯುತ್ ಕಂಬಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಸಮಯದಲ್ಲಿ ವಿದ್ಯುತ್ ಕಂಬದ 110 ಕೆವಿಯು ಹೈಟೆನ್ಷನ್ ತಂತಿಗೆ ತಗುಲಿದ ಪರಿಣಾಮ ಕಂಬಕ್ಕೆ ವಿದ್ಯುತ್ ಹರಿದು ಇಬ್ಬರು ವ್ಯಕ್ತಿಗಳಿಗೆ ಗಾಯವಾಗಿದ್ದು, ಚಿ.ನಾ.ಹಳ್ಳಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

      ಪಟ್ಟಣದಲ್ಲಿ ಹಾದು ಹೋಗಿರುವ 150 ಎ ರಸ್ತೆ ಕಾಮಗಾರಿಯು ಬರದಿಂದ ನಡೆಯುತ್ತಿದ್ದು, ಪಟ್ಟಣದ ಎಪಿಎಂಸಿ ಬಳಿ ಶ್ರೀಸಾಯಿ ಕನ್ಸ್‍ಟ್ರಕ್ಷನ್‍ನವರು ರಸ್ತೆ ಪಕ್ಕದ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಗುತ್ತಿಗೆ ನೀಡಿದ್ದು, ವಿದ್ಯುತ್ ಗುತ್ತಿಗೆದಾರರು ಸ್ಥಳದಲ್ಲಿರದೇ ಕಾರ್ಮಿಕರು ವಿದ್ಯುತ್ ಕಂಬಗಳನ್ನು ಬೇರೆಡೆಗೆ ಸ್ಥಳಾಂತರಿಸುವಾಗ ಈ ಘಟನೆ ನಡೆದಿದೆ.

     ಮಾದಾಪುರದ ಮಂಜುನಾಥ ಎಂಬ ವ್ಯಕ್ತಿಗೆ ಕೈ ಕಾಲು ಮುರಿದಿದ್ದು, ಲೋಕೇಶ್ ಎಂಬ ವ್ಯಕ್ತಿಗೆ ಕತ್ತಿನಭಾಗ, ಕೈ ಕಾಲುಗಳು ಸುಟ್ಟು ಹೋಗಿದ್ದು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

      ಸ್ಥಳಕ್ಕೆ ಬೆಸ್ಕಾಂ ಅಧಿಕಾರಿ ಯೋಗೇಂದ್ರ ಭೇಟಿ ನೀಡಿ ಗುತ್ತಿಗೆದಾರರು ವಿದ್ಯುತ್ ಕಂಬ ನೆಡುವಾಗ ನಮ್ಮ ಗಮನಕ್ಕೆ ತಂದಿಲ್ಲ ಇದಕ್ಕೆ ಗುತ್ತಿಗೆದಾರರೇ ಹೊಣೆ, ಕಂಬಗಳನ್ನು ಸ್ಥಳಾಂತರಿಸುವಾಗ ನಮ್ಮ ಗಮನಕ್ಕೆ ತಂದಿದ್ದರೆ ಹೈಟೆನ್ಷನ್ ವಿದ್ಯುತ್ ಕಂಬದ ಕೆಳಗೆ 110 ಕೆ.ವಿ ವಿದ್ಯುತ್ ಲೈನ್ ಅಳವಡಿಸಲು ಅವಕಾಶ ಕೊಡುತ್ತಿರಲಿಲ್ಲ ಎಂದರು. ಸ್ಥಳಕ್ಕೆ ಪೊಲಿಸರು ಭೇಟಿ ನೀಡಿ ಕೇಸು ದಾಖಲಿಸಿಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link