ತಿಪಟೂರು : ಹಾಲಿನ ಡೇರಿಯ ನೂತನ ಕಟ್ಟಡ ಉದ್ಘಾಟನೆ

ತಿಪಟೂರು :

     ರೈತರು ತೀರಾ ಸಂಕಷ್ಟದ ಸಮಯದಲ್ಲಿದ್ದ ಸಂದರ್ಭದಲ್ಲಿ ಕೈಹಿಡಿದು ಮುನ್ನಡೆಸಿದ್ದೆ ಹೈನುಗಾರಿಕೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ತಿಳಿಸಿದರು.

  ಹಳ್ಳಿ-ಹಳ್ಳಿಗಳಲ್ಲಿ ಡೇರಿ : ಕುರಿಯನ್ ಕಾರಣ :

      ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ನ್ಯಾಕೇನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಳೆ ಕೈಕೊಟ್ಟಾಗ ರೈತರು ಏನು ಮಾಡಬೇಕೆಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದ ಸಂದರ್ಭದಲ್ಲಿ ಹೈನುಗಾರಿಕೆಯನ್ನು ಮಾಡಲು ಪ್ರಾರಂಭಿಸಿದ ರೈತರಿಗೆ ಇಂದು ಹೈನುಗಾರಿಕೆಯೆ ಪ್ರಧಾನ ಕಸುಬಾಗಿರುವುದನ್ನು ನಾವು ಕಾಣಬಹುದು. ಇಂದು ಹಳ್ಳಿ ಹಳ್ಳಿಗಳಲ್ಲಿ ಡೇರಿ ಕಟ್ಟಡಗಳು ನಿರ್ಮಾಣವಾಗುತ್ತಿವೆ ಎಂದರೆ ಅದಕ್ಕೆ ಕಾರಣ ಕ್ಷೀರಕ್ರಾಂತಿಯ ಪಿತಾಮಹ ವರ್ಗೀಸ್‍ಕುರಿಯನ್. ಅಂದು ಆ ಪುಣ್ಯಾತ್ಮ ಮಾಡಿದ ಕ್ಷೀರಕ್ರಾಂತಿಯಿಂದಾಗಿ ಕೋಟ್ಯಾಂತರ ಜನ ಬದುಕು ಕಟ್ಟಿಕೊಳ್ಳಲು ನೆರವಾಗಿದೆ.

ಮಹಿಳೆಯರ ಸ್ವಾವಲಂಬನೆ :

     ಕೋವಿಡ್ ಸಂದರ್ಭದಲ್ಲಿ ಯುವಕರು ಕೆಲಸವನ್ನು ಬಿಟ್ಟು ಹಳ್ಳಿಗಳಿಗೆ ಮರಳಿದಾಗ ಮಹಿಳೆಯರು ಸಂಸಾರ ತೂಗಿಸಲು ಕಷ್ಟಪಡಿಸುತ್ತಿದ್ದಾಗ ಹೈನುಗಾರಿಕೆ ಎಲ್ಲರ ಕೈಹಿಡಿದು ಕಾಪಾಡಿತು. ಇಂದು ಹೆಚ್ಚಿನದಾಗಿ ಮಹಿಳೆಯರು ಮಕ್ಕಳ ಓದಿನ ಖರ್ಚಿಗೆ, ಕುಟುಂಬ ನಿರ್ವಹಣೆಗೆ ಸ್ವಾವಲಂಭಿಗಳಾಗಲು ಹೈನುಗಾರಿಕೆಯೇ ಮುಖ್ಯ ಕಾರಣವಾಗಿದೆ ಎಂದು ತಿಳಿಸಿದರು.

      ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿ ಕೇಂದ್ರ ಸ್ವಾಮೀಜಿಗಳು, ಕುಪ್ಪೂರು ತಮ್ಮಡಿಹಳ್ಳಿ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

      ಈ ಸಂದರ್ಭದಲ್ಲಿ ತುಮುಲ್ ಅಧ್ಯಕ್ಷ ವಿ.ಸಿ.ಮಹಾಲಿಂಗಯ್ಯ, ಹಳೇಮನೆ ಶಿವನಂಜಪ್ಪ, ತುಮುಲ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link