ಬೆಂಗಳೂರು/ತುಮಕೂರು :
ಸಿದ್ಧಗಂಗಾ ತ್ರಿವಿಧ ದಾಸೋಹಿ ಡಾ.ಶ್ರೀ.ಶಿವಕುಮಾರ ಸ್ವಾಮೀಜಿಯವರು ಲಿಂಗೈಕ್ಯರಾಗಿರುವ ಜನವರಿ 21 ಅನ್ನು ದಾಸೋಹ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ 2ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಕ್ತರ ಬೇಡಿಕೆಯಂತೆ ದಾಸೋಹ ದಿನವಾಗಿ ಆಚರಣೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದರು.
ಇದೀಗ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರಸ್ವಾಮೀಜಿಯವರು ಲಿಂಗೈಕ್ಯರಾಗಿರುವ ಜನವರಿ 21 ನ್ನು ದಾಸೋಹ ದಿನವನ್ನಾಗಿ ಆಚರಿಸಲು ನಿರ್ಧರಿಸಿರುವುದು ಶ್ರೀಗಳು ತ್ರಿವಿಧ ದಾಸೋಹಕ್ಕೆ ನೀಡಿದ ಮಹತ್ತರ ಕೊಡುಗೆಯನ್ನು ಸರಕಾರ ಗುರುತಿಸಿದಂತಾಗಿದೆ. ಇದು ಭಕ್ತರು, ಶ್ರೀಮಠದಲ್ಲೂ ಹರ್ಷಕ್ಕೆ ಕಾರಣವಾಗಿದೆ.
‘ದಾಸೋಹ ದಿನ’ ಸಿಎಂ ಗಮನಸೆಳೆದಿದ್ದ ಪ್ರಜಾಪ್ರಗತಿ
ಸಿದ್ಧಗಂಗಾ ಶ್ರೀಗಳ ದ್ವಿತೀಯ ಪುಣ್ಯಸ್ಮರಣೆ ಆಚರಣೆಗೂ ಮುನ್ನವೇ ಜ.20ರಂದೇ “ದಾಸೋಹ ದಿನ’ ಘೋಷಣೆ ಕುರಿತು ವಿಶೇಷ ವರದಿ ಮಾಡಿದ್ದ ಪ್ರಜಾಪ್ರಗತಿ ಭಕ್ತರ ಬೇಡಿಕೆ ಬಗ್ಗೆ ಸರಕಾರ, ಮುಖ್ಯಮಂತ್ರಿಗಳನ್ನು ಗಮನಸೆಳೆಯುವ ಪ್ರಯತ್ನ ಮಾಡಿತ್ತು. ಪುಣ್ಯಸ್ಮರಣೆ ಕಾರ್ಯಕ್ರಮದಂದೇ ಅಂದಿನ ಸಿಎಂಯಡಿಯೂರಪ್ಪ ದಾಸೋಹ ದಿನದ ಘೋಷಣೆ ಮಾಡಿದ್ದರು. ಆದರೆ ಅಧಿಕೃತ ಸರಕಾರಿ ಕ್ರಮದ ಪ್ರಕ್ರಿಯೆಗೆ ಬೊಮ್ಮಾಯಿ ಸರಕಾರದಲ್ಲಿ ಚಾಲನೆ ದೊರೆತಿದ್‍ದು, ಸೆ.2ರಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ