ಮಧುಗಿರಿ : ದಲಿತ ಸಮಾಧಿ ವಿಕೃತಗೊಳಿಸಿದ ಕಿಡಿಗೇಡಿಗಳು

ಮಧುಗಿರಿ :

ಚಿನಕವಜ್ರ ಗ್ರಾಮದಲ್ಲಿ 4 ಸಮಾಧಿಗಳನ್ನು ಕಿಡಿಗೇಡಿಗಳು ವಿಕೃತಗೊಳಿಸಿರುವುದು.

      ತಾಲ್ಲೂಕಿನ ಕಸಬಾ ವ್ಯಾಪ್ತಿಯ ಚಿನಕವಜ್ರ-ಚನ್ನರಾಯನದುರ್ಗ ರಸ್ತೆ ಸಮೀಪವಿರುವ ಜಮೀನುಗಳಲ್ಲಿ ಅನಾದಿ ಕಾಲದಿಂದಲೂ ತಳ ಸಮುದಾಯದವರ ಶವಗಳನ್ನು ಹೂಳಲಾಗುತ್ತಿತ್ತು. ಆದರೆ ಯಾರೊ ಕಿಡಿಗೇಡಿಗಳು ಈ ಜಮೀನಿನ ಬಳಿ ಮುಖ್ಯ ರಸ್ತೆ ಹಾದು ಹೋಗಿರುವುದರಿಂದ, ಬೆಲೆ ಬಾಳುವ ಜಮೀನು ಇದಾಗಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಿ ಲೇಔಟ್ ಮಾಡುವ ಉದ್ದೇಶದಿಂದ ಸಮಾಧಿಗಳನ್ನು ವಿಕೃತಗೊಳಿಸಿದ್ದಾರೆಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬಂದಿವೆ.

      ಗ್ರಾಮಸ್ಥ ರಂಗಪ್ಪ ಮಾತನಾಡಿ, ನಮ್ಮ ಸಮುದಾಯದ ಮೃತ ಪಟ್ಟ ದೇಹಗಳನ್ನು ಇಲ್ಲಿಯೇ ಮೊದಲಿನಿಂದಲೂ ಸಂಪ್ರದಾಯಬದ್ಧವಾಗಿ ಶವ ಸಂಸ್ಕಾರ ಮಾಡಿ ಹೂಳಲಾಗುತ್ತಿತ್ತು. ಆದರೆ ಯಾರೊ ಕಿಡಿಗೇಡಿಗಳು ಭಾನುವಾರ ಸಮಾಧಿಗಳನ್ನು ವಿಕೃತಗೊಳಿಸಿ, ನಮ್ಮ ಸಮುದಾಯದ ಸಂಪ್ರದಾಯ ಹಾಗೂ ಆಶಯಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಅವರನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link