ನಿಟ್ಟೂರು :
ಗುಬ್ಬಿ ತಾಲ್ಲೂಕು ನಿಟ್ಟೂರು ಗ್ರಾಪಂಯು ಗ್ರಾಮದ ಸಂತೆಬೀದಿಯಲ್ಲಿ ವ್ಯಾಪಾರ ಮಾಡುವ ತರಕಾರಿ ಅಂಗಡಿಗಳ ತೆರವು ಮಾಡಿದ್ದು, ಗ್ರಾಪಂ ವತಿಯಿಂದ ನೂತನವಾಗಿ ನಿರ್ಮಿಸಿರುವ 36 ಅಂಗಡಿ ಮಳಿಗೆಗಳಲ್ಲಿ ವ್ಯಾಪಾರಸ್ಥರು ದಿನನಿತ್ಯದ ತರಕಾರಿ ವ್ಯಾಪಾರ ಮಾಡಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಂಗಡಿ ಮಳಿಗೆಗಳನ್ನು ವ್ಯವಸ್ಥಿತವಾಗಿ ನೀಡಲು ತರಕಾರಿ ವ್ಯಾಪಾರಸ್ಥರ ಸಭೆಯನ್ನು ಸೆ.21 ರಂದು ಬೆಳಿಗ್ಗೆ 11 ಗಂಟೆಗೆ ಗ್ರಾಪಂ ಆವರಣದಲ್ಲಿ ಕರೆಯಲಾಗಿದೆ.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು ಹಾಗೂ ಪಿಡಿಓ ಅವರುಗಳಿದ್ದು, ಸಾರ್ವಜನಿಕರ ಸಮ್ಮುಖದಲ್ಲಿ ಬಹಿರಂಗ ಹರಾಜು ಮಾಡುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿದು ಬಂದಿದೆ. ಪ್ರಜಾಪ್ರಗತಿ ಪತ್ರಿಕೆಯಲ್ಲಿ ಕೆಲ ದಿನಗಳ ಹಿಂದೆ ನಿಟ್ಟೂರು ಸಂತೆ ಬೀದಿಯ ಅವ್ಯವಸ್ಥೆಯ ಬಗ್ಗೆ ಸರಿಪಡಿಸಲು ವರದಿ ಮಾಡಲಾಗಿತ್ತು. ವರದಿಗೆ ಎಚ್ಚೆತ್ತ ನಿಟ್ಟೂರು ಗ್ರಾಪಂ ಈಗ ಕಣ್ತೆರೆದು ಸ್ಪಂದಿಸಿರುವುದು ಗ್ರಾಮಸ್ಥರಲ್ಲಿ ಹರ್ಷ ತಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
