ಬ್ಯಾಂಕ್‍ನಲ್ಲಿ ಹಳ್ಳಿಗಾಡಿನವರಿಗೆ ಭಾಷಾ ತೊಂದರೆ

 ಬರಗೂರು :

     ಕೆನರಾ ಬ್ಯಾಂಕ್ ಸಿಬ್ಬಂದಿಯ ಭಾಷೆ ಸಮಸ್ಯೆಯಿಂದ ಬೇಸತ್ತ ಗ್ರಾಹಕರು ಗ್ರಾಮೀಣ ಪ್ರದೇಶವಾದ ಬರಗೂರು ಗ್ರಾಮದ ಕೆನರಾ ಬ್ಯಾಂಕ್‍ಗೆ ಕನ್ನಡ ಭಾಷೆ ಮಾತನಾಡುವ ಸಿಬ್ಬಂದಿಯನ್ನು ನೇಮಿಸಿ ಗ್ರಾಹಕರ ಕಿರಿ ಕಿರಿ ತಪ್ಪಿಸುವಂತೆ ಸ್ವಸಹಾಯ ಸಂಘಗಳು ಹಾಗೂ ಇತರೆ ಸಂಘ ಸಂಸ್ಥೆಯ ಸದಸ್ಯರು ಒತ್ತಾಯಿಸಿದ್ದಾರೆ.

     ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಕನ್ನಡ ಭಾಷೆಗೆ ಸೀಮಿತವಾದ ಜನರೆ ಹೆಚ್ಚಾಗಿದ್ದು ಸರ್ಕಾರಿ ಕಚೇರಿ ಸೇರಿದಂತೆ ಹಲವು ಕಚೇರಿ ಗಳಲ್ಲಿ ಕನ್ನಡ ಭಾಷೆಯಲ್ಲೆ ಮಾತನಾಡುವ ನೌಕರರನ್ನು ಕಾಣುತ್ತಿದ್ದೇವೆ. ಆದರೆ ಶಿರಾ ತಾಲ್ಲೂಕು ಗ್ರಾಮೀಣ ಪ್ರದೇವಾದ ಬರಗೂರು ಗ್ರಾಮದ ಕೆನರಾ ಬ್ಯಾಂಕ್ ನಲ್ಲಿ ಬಹುತೇಕ ಮಂದಿ ಕನ್ನಡಿಗ ನೌಕರರಿದ್ದರೂ ಸಹ ಪ್ರಮುಖ ಸ್ಥಾನದಲ್ಲಿ ಕಾರ್ಯ ನಿರ್ವಹಿಸುವ ನೌಕರರು ತೆಲುಗು, ಹಿಂದಿ, ಇಂಗ್ಲೀಷ್ ಮಾತೃ ಭಾಷಿಕರಾಗಿದ್ದಾರೆ.

     ಕನ್ನಡವನ್ನು ಹೊರತು ಪಡಿಸಿ ತೆಲುಗು, ಹಿಂದಿ, ಇಂಗ್ಲೀಷ್ ಭಾಷಿಗರನ್ನು ಪಟ್ಟಣ ಪ್ರದೇಶಗಳ ಬ್ಯಾಂಕ್‍ಗಳಿಗೆ ನೇಮಿಸಬಹುದು. ಆದರೆ ಗ್ರಾಮೀಣ ಪ್ರದೇಶಗಳಿಗೆ ಅನ್ಯ ಭಾಷಾ ನೌಕರರನ್ನು ನೇಮಿಸಿ, ಹಳ್ಳಿ ಜನರು ಬ್ಯಾಂಕ್ ವ್ಯವಹಾರ ಮಾಡಲು ಕಷ್ಟಕರವಾಗಿದೆ.
ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು, ಕೆನರಾ ಬ್ಯಾಂಕ್‍ಗೆ ಸಂಬಂಧಿಸಿದ ಮೇಲಧಿಕಾರಿಗಳು ಬ್ಯಾಂಕ್ ನೌಕರರ ಭಾಷೆ ಸಮಸ್ಯೆ ಬಗ್ಗೆ ತುರ್ತು ಕ್ರಮ ಕೈಗೊಂಡು ಕನ್ನಡ ಭಾಷೆ ಮಾತನಾಡುವವರನ್ನು ನೇಮಿಸುವಂತೆ ರಂಗನಾಥ್, ಧನುಷ್ ಕುಮಾರ್, ಗಿರೀಶ್, ನಾಗರಾಜು, ಬಸವರಾಜು, ರಮೇಶ್ ಸೇರಿದಂತೆ ಹಲವಾರು ಗ್ರಾಹಕರು ಒತ್ತಾಯಿಸಿದ್ದಾರೆ.

     ಬರಗೂರು ಕೆನರಾ ಬ್ಯಾಂಕ್‍ನಲ್ಲಿ ಹಳ್ಳಿಗಾಡಿನ ಜನತೆ ಬ್ಯಾಂಕ್ ವ್ಯವಹಾರ ನಡೆಸಲು ತೀವ್ರ ತೊಂದರೆಯಾಗಿದ್ದು, ಇದು. ಕನ್ನಡ ನಾಡಿನಲ್ಲಿ ಹುಟ್ಟಿದ ಕನ್ನಡಿಗರ ದುಸ್ಥಿತಿ ಯಾಗಿದೆ. ಬ್ಯಾಂಕ್‍ನವರು ಗ್ರಾಹಕರ ಅಕೌಂಟ್ ದಾಖಲೆ ಕಳೆದು, ಮತ್ತೊಮ್ಮೆ ಅಕೌಂಟ್ ಮಾಡಿಸಲು ಹೇಳಿದ್ದಾರೆ. ಆದರೆ ಅಕೌಂಟ್ ಮಾಡಿಸಲು ಗ್ರಾಹಕರು ಒಂದು ವರ್ಷದಿಂದ ಐದು ವರ್ಷದವರೆಗೂ ಅಲೆದು, ಬೇಸತ್ತು, ಕೆನರಾ ಬ್ಯಾಂಕ್ ಸಹವಾಸವೇ ಬೇಡ ಎನ್ನುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap