ಹಿರಿಯೂರು:

ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಗೆ ಹಿರಿಯೂರು ತಾಲ್ಲೂಕಿನಲ್ಲಿ ಬೆಂಬಲ ನೀಡುವುದಾಗಿ ವಿವಿಧ ಸಂಘಟನೆ ಮುಖಂಡರು ತೀರ್ಮಾನಿಸಿದರು
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಜನಪರ ಸಂಘಟನೆಗಳು ದಲಿತ ಪರ ಸಂಘಟನೆಗಳು ಕನ್ನಡ ಪರ ಸಂಘಟನೆಗಳು ಮಹಿಳಾ ಸಂಘಟನೆಗಳು ಕಾರ್ಮಿಕ ಸಂಘಟನೆಗಳು ವಿವಿಧ ರಾಜಕೀಯ ಪಕ್ಷದ ಮುಖಂಡರುಗಳ ಸಂಯುಕ್ತ ಕಿಶನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲ ನೀಡುವುದಾಗಿ ಸಭೆಯಲ್ಲಿ ತೀರ್ಮಾನಿಸಿದರು ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕರಾಳ ಕೃಷಿ ಕಾಯ್ದೆಗಳು ವಿದ್ಯುತ್ ಮಸೂದೆ ಖಾಸಗೀಕರಣ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸು ವಂತೆ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಇತ್ಯಾದಿ ಬೇಡಿಕೆಗಳಿಗಾಗಿ ಸೆಪ್ಟೆಂಬರ್ 27ರಂದು ಹಿರಿಯೂರು ನಗರದ ಎಲ್ಲಾ ವಹಿವಾಟುಗಳನ್ನು ಬಂದ್ ಮಾಡುವಂತೆ ಜನಪರ ಸಂಘಟನೆಗಳು ಮನವಿ ಮಾಡಿದವು ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಕೆ ಸಿ ಹೊರಕೇರಪ್ಪ ರೈತ ಸಂಘದ ತಾಲೂಕು ಅಧ್ಯಕ್ಷ ಬಿ ಓ ಶಿವಕುಮಾರ್ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಕಾರ್ಯದರ್ಶಿ ಜೀವೇಶ್ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ ಎಲ್ ಮೂರ್ತಿ ತಾಲೂಕು ಜೆಡಿಎಸ್ ಅಧ್ಯಕ್ಷ ಹನುಮಂತರಾಯಪ್ಪ ದ್ವಿಚಕ್ರ ವಾಹನ ಮಾಲೀಕರ ಸಂಘದ ಅಧ್ಯಕ್ಷ ಕರುಣಾನಿಧಿ ಇಂದಿರಾಗಾಂಧಿ ಅಭಿಮಾನಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ರಂಗಪ್ಪ ಯಾದವ್ ತಾಲೂಕು ಕಾಂಗ್ರೆಸ್ ಎಸ್ ಟಿ ಅಧ್ಯಕ್ಷ ಗಿರೀಶ್ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ಅಧ್ಯಕ್ಷ ಉದಯಶಂಕರ್ ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ ದ ಕೃಷ್ಣ ಪೂಜಾರಿ ಯುವ ಕಾಂಗ್ರೆಸ್ ಮುಖಂಡ ದಾದಾಪೀರ್ ಯುವ ಮುಖಂಡರಾದ ತಿಮ್ಮರಾಜು ಎಸ್ ಮಹೇಶ್ ಆರ್ ಇನ್ನಾಯತ್ ಸಾಬ್ ಹೇಮಂತ್ ಕುಮಾರ್ ನಾಗರಾಜು ತಾಲೂಕು ರೈತ ಸಂಘದ ಮಹಿಳಾ ಅಧ್ಯಕ್ಷೆ ವಿ ಕಲ್ಪನಾ ಯುವ ಘಟಕದ ಅಧ್ಯಕ್ಷ ಚೇತನ್ ಕುಮಾರ್ ರೈತ ಸಂಘದ ತಾಲೂಕು ಕಾರ್ಯಧ್ಯಕ್ಷ ದಸ್ತಗಿರಿ ಸಾಬ್ ಉಪಾಧ್ಯಕ್ಷ ತಿಪ್ಪೇಸ್ವಾಮಿ ಚಿಕ್ಕ ತಿಮ್ಮಯ್ಯ ದೇವರಕೊಟ್ಟ ರಂಗಸ್ವಾಮಿ ಕೊಲ್ಲಾಪುರಿ ರೆಡ್ಡಿ ಅಭಿಬುಲ್ ರೆಹಮಾನ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವೀಶ್ ಉಪ್ಪಳಗೆರೆ ಕರಿಯಪ್ಪ ಅನೇಕರು ಭಾಗವಹಿಸಿ ಬೆಂಬಲ ಸೂಚಿಸಿದರು.








