ಚಳ್ಳಕೆರೆ:
ದುಗ್ಗಾವರ ರಸ್ತೆಯಲ್ಲಿ ಅವಘಡ ಸ್ಥಳದಲ್ಲೇ ಓರ್ವ ಸಾವು. ಇಲ್ಲಿನ ದುಗ್ಗಾವರ ರಸ್ತೆಯಲ್ಲಿ ಖಾಸಗಿ ಬಸ್ ಹಾಗೂ ಮೋಟಾರ್ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗುಡಿಹಳ್ಳಿ ಉಮೇಶ್(23) ಸ್ಥಳದಲ್ಲೇ ಮೃತಪಟ್ಟಿರುತ್ತಾನೆ. ಬೈಕ್‍ನಲ್ಲಿದ್ದ ಮತ್ತೊರ್ವ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಖಾಸಗಿ ಬಸ್ ಚಳ್ಳಕೆರೆಯಿಂದ ಉಳ್ಳಾರ್ತಿ ಮೂಲಕ ಗೌರಸಮುದ್ರಕ್ಕೆ ಹೋಗುತ್ತಿದ್ದು ಬೈಕ್ ಸವಾರ ದುಗ್ಗಾವರದಿಂದ ಚಳ್ಳಕೆರೆ ಕಡೆಗೆ ಬರುವ ಸಂದರ್ಭದಲ್ಲಿ ಇಲ್ಲಿನ ಬ್ರಿಡ್ಜ್ ಸಮೀಪದಲ್ಲಿ ಈ ದುರ್ಘಟನೆ ನಡೆದಿದೆ. ಸುದ್ದಿ ತಿಳಿದ ಕೂಡಲೇ ಠಾಣಾ ಇನ್ಸ್‍ಪೆಕ್ಟರ್ ಜೆ.ಎಸ್.ತಿಪ್ಪೇಸ್ವಾಮಿ ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ