ಕೊರಟಗೆರೆ:
ಎತ್ತಿನಹೊಳೆ ಯೋಜನೆ ಕಾಮಗಾರಿ ಮಾಡುತ್ತೀರುವ Sಓಅ ಒಡೆತನದ ಖಾಸಗಿ ಕಂಪನಿಯ ಮೇಲೆ ಐಟಿ ಅಧಿಕಾರಿಗಳ ತಂಡ ಗುರುವಾರ ಬೆಳಗ್ಗೆ ದಾಳಿ ನಡೆಸಿದೆ.
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ ಸಿಂಗ್ರಿಹಳ್ಳಿ ಸಮೀಪ ಇರುವಂತಹ Sಓಅ ಕಂಪನಿಯ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ತಾಲ್ಲೂಕಿನ ಎಲೆರಾಂಪುರದಿಂದ ರಾಮನಗರದ ತಿಪ್ಪಗೊಂಡನಹಳ್ಳಿ ಕೆರೆವರೆಗೆ ಮಾಡುತ್ತಿರುವ ಸುಮಾರು 245 ಕೋಟಿ ರೂ. ವೆಚ್ಚದ 244 ಕಿಮೀ ದೂರದ ಎತ್ತಿನಹೊಳೆ ಯೋಜನಾ ಕಾಮಗಾರಿಯು ಸತ್ಯನಾರಾಯಣ ಕಂಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ನಿಂದ ಎಲೆರಾಂಪುರ ಸಮೀಪ 2019 ರಲ್ಲಿ ಪ್ರಾರಂಭ ಆಗಿತ್ತು. ಕಂಪನಿಯ ಗುತ್ತಿಗೆಯ ದಾಖಲೆ, ಕಾಮಗಾರಿ ವಿವರದ ಅಂಕಿ-ಅಂಶ, ಯೋಜನೆಯ ರೂಪು-ರೇಷೆ ಮತ್ತು ಯೋಜನೆಯ ಅನುದಾನದ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ.
ಬೆಂಗಳೂರಿನ ಆರು ಮಂದಿಯ ಐಟಿ ಅಧಿಕಾರಿಗಳ ತಂಡ Sಓಅ ಕಂಪನಿಯ ದಾಖಲೆ ಪರಿಶೀಲನೆ ನಡೆಸಿ, ಕಂಪನಿ ಎಂಜಿನಿಯರ್ಗಳಿಂದ ಮಾಹಿತಿ ಪಡೆದಿದ್ದಾರೆ. ಕೋಳಾಲ ಪೆÇಲೀಸರ ತಂಡ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ