ಚಳ್ಳಕೆರೆ:

ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ, ಗುರುವಾರ ಬೆಳಗಿನ ಜಾವ ಒಟ್ಟು 170.10 ಎಂ.ಎಂ. ಮಳೆಯಾಗಿದ್ದು ಅತಿ ಹೆಚ್ಚಿನ ಮಳೆ ತಳಕು ಹೋಬಳಿಯ ಆಗಿದೆ. ಮಳೆ ಹಿನ್ನೆಲೆಯಲ್ಲಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮನೆಗಳು ಬಿದ್ದು ನಷ್ಟವೂ ಸಂಭವಿಸಿದೆ.
ಕಸಬಾ ಹೋಬಳಿಯ ಜಡೇಕುಂಟೆ ಗ್ರಾಮದ ಇಂದಿರಾ ನಗರದಲ್ಲಿ ಹನುಮಕ್ಕ ಕೋಂ ಪೂಜಾರಿ ನಿಂಗಪ್ಪ ಎಂಬುವವರ ವಾಸದ ಮನೆ ಕುಸಿದು ಬಿದ್ದು ಸುಮಾರು 25 ಸಾವಿರ ನಷ್ಟ ಸಂಭವಿಸಿದೆ. ಪರಶುರಾಮಪು ಹೋಬಳಿ ಹುಳ್ಳಿಕಟ್ಟೆಯಲ್ಲಿ ದುರುಗಮ್ಮ ಎಂಬುವವರ ಮನೆ ಕುಸಿದು ಸುಮಾರು 20 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ಬಿ.ಆರ್.ನಾಗರಾಜುರವರ ಮನೆ ಕುಸಿದು ಸುಮಾರು 50 ಸಾವಿರ ನಷ್ಟ ಸಂಭವಿಸಿದೆ.

ತಳಕು ಹೋಬಳಿಯ ಬಂಡೆ ತಿಮ್ಮಾಲಪುರ ಗ್ರಾಮದಲ್ಲಿ ಸುಮಾರು 2.20 ಎಕರೆ ಪ್ರದೇಶದಲ್ಲಿದ್ದ ಹಿರೇಕಾಯಿ ಬೆಳೆ ಮಳೆಗೆ ಕೊಚ್ಚಿಹೋಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ನಗರಂಗೆರೆ ಗ್ರಾಮದ ತಿಪ್ಪಮ್ಮ ಕೋಂ ರಂಗಪ್ಪನವರ ರಿ ಸರ್ವೇ ನಂ186/ಎನಲ್ಲಿ ಹಾಕಿದ್ದ ನಾಲ್ಕು ಎಕರೆ ಪ್ರದೇಶದ ಈರುಳ್ಳಿ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಸಿದ್ದಾಪುರ ಗ್ರಾಮದ ರುದ್ರಮುನಿತಪ್ಪ, ತ್ಯಾರಮಲ್ಲಪ್ಪ, ಮಲ್ಲಮ್ಮ ಇವರ ಜಮೀನಿನಲ್ಲಿದ್ದ ತೊಗರಿ ಮತ್ತು ಮೆಕ್ಕೆಜೋಳ ಮಳೆಗೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ತಾಲ್ಲೂಕಿನ ವಿವಿಧ ಕೆರೆ ಕಟ್ಟೆಗಳಿಗೆ ಸಮೃದ್ಧ ನೀರು ಬಂದಿದೆ. ವಿಶೇಷವಾಗಿ ಕುರುಡಿಹಳ್ಳಿಯ ಗೋಕಟ್ಟೆ ಕಳೆದ 10 ವರ್ಷಗಳಿಂದ ನೀರಿಲ್ಲದೆ ಒಣಗಿದ್ದು, ಪ್ರಸ್ತುತ ರಾತ್ರಿ ಸುರಿದ ಮಳೆಯಿಂದ ಗೋಕಟ್ಟೆಯಲ್ಲಿ ನೀರು ಸಂಗ್ರಹವಾಗಿದೆ.
ಮಳೆ ಪ್ರಮಾಣ ತಳಕು-54.02, ದೇವರಮರಿಕುಂಟೆ-50.02, ನಾಯಕನಹಟ್ಟಿ-44.02, ಪರಶುರಾಮಪು-14.02, ಚಳ್ಳಕೆರೆ-8.02 ಒಟ್ಟು 170.10 ಎಂ.ಎಂ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ಜಡೇಕುಂಟೆ ಗ್ರಾಮದ ಇಂದಿರಾ ನಗರದಲ್ಲಿ ಹನುಮಕ್ಕ ಎಂಬುವವರ ಮನೆ ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಪೋಟೋ7ಸಿಎಲ್‍ಕೆ7 ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಬಂಡೆ ತಿಮ್ಮಾಲಪುರ ಗ್ರಾಮದಲ್ಲಿ ಸುಮಾರು 2.20 ಎಕರೆ ಪ್ರದೇಶದಲ್ಲಿದ್ದ ಹಿರೇಕಾಯಿ ಬೆಳೆ ಮಳೆಗೆ ಕೊಚ್ಚಿಹೋಗಿದೆ. ಚಳ್ಳಕೆರೆ ತಾಲ್ಲೂಕಿನ ಕುರುಡಿಹಳ್ಳಿಯ ಗೋಕಟ್ಟೆ ಕಳೆದ 10 ವರ್ಷಗ ನಂತರ ಗೋಕಟ್ಟೆಯಲ್ಲಿ ನೀರು ಸಂಗ್ರಹವಾಗಿರುವುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








