ಬೆಂಗಳೂರು:

ಕಾದಂಬರಿಕಾರ, ಚಿಂತಕ, ಕನ್ನಡದ ಹಿರಿಯ ನಟ ಜಿ.ಕೆ ಗೋವಿಂದರಾವ್ ಅವರು ಇಂದು ಹುಬ್ಬಳ್ಳಿಯ ತಮ್ಮ ಮಗಳ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿರುವ ತಮ್ಮ ಮಗಳ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಎರಡು ತಿಂಗಳಿನಿಂದ ಆನಾರೋಗ್ಯಕ್ಕೆ ಒಳಗಾಗಿದ್ದ ಅವರು ಆರೋಗ್ಯ ಐದು ದಿನಗಳ ಹಿಂದೆ ಕ್ಷೀಣಿಸಿತ್ತು. ಐದು ದಿನಗಳಿಂದ ಅವರು ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾದ ಮೊದಲ ಮೂರು ದಿನ ಪ್ರಜ್ಞಾವಸ್ಥೆಯಲ್ಲಿದ್ದ ಅವರು, ಕೊನೆಯ ಎರಡು ದಿನ ಅರೆಪ್ರಜ್ಞಾವಸ್ಥೆ ಸ್ಥಿತಿಗೆ ತಲುಪಿದ್ದರು ಎನ್ನಲಾಗಿದೆ.
ಕನ್ನಡದ ಹೊಸ ಅಲೆಯ ಪ್ರಯೋಗಾತ್ಮಕ ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದ ಅವರು, ನಿಜ ಬದುಕಿನಲ್ಲಿ ಮಾನವೀಯ ತುಡಿತಗಳಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








