ನೂರು ಕೋಟಿ ಲಸಿಕೆ ನೀಡಿದ  ಭಾರತ

ದಾವಣಗೆರೆ:

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿಯ ಫಲವಾಗಿ 100 ಕೋಟಿ ಲಸಿಕೆ ನೀಡಿದ ವಿಶ್ವದ ಮೊದಲ ರಾಷ್ಟ್ರವಾಗಿ ಭಾರತ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವಿರೇಶ್ ಹನಗವಾಡಿ ಬಣ್ಣಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಾದ್ಯಂತ ಕೇವಲ 9 ತಿಂಗಳಲ್ಲಿ 100 ಕೊಟಿ ಲಸಿಕೆ ನೀಡಿ ದಾಖಲೆ ನಿರ್ಮಿಸಲಾಗಿದೆ.ಲಸಿಕೆಗೆ ಅವಿರತವಾಗಿ ದೇಶದ ವಿಜ್ಞಾನಿಗಳು, ವೈದ್ಯರು,ದಾದಿಯರು,ಆರೋಗ್ಯ ಸಿಬ್ಬಂದಿಯ ಶ್ರಮಿಸಿದ್ದಾರೆ ಅವರೆಲ್ಲರಿಗೂ ಜಿಲ್ಲಾ ಬಿಜೆಪಿ ಕೃತಜ್ಞತೆ ಸಲ್ಲಿಸುತ್ತದೆ ಎಂದರು.

ಜ.16 ರಂದು ಲಸಿಕೆ ಅಭಿಯಾನ ಪ್ರಾರಂಭಗೊಂಡಾಗ ಹಲವು ದೇಶಗಳು ಕುಹಕವಾಡಿದರು.ವಿರೋಧಪಕ್ಷಗಳು ಅಡೆತಡೆಗಳನ್ನು ನೀಡಿದರು.ಆದರೆ ಎಲ್ಲವನ್ನೂ ಹಿಮ್ಮೆಟ್ಟಿ ವಿಶ್ವದಲ್ಲೇ ಲಸಿಕೆ ನೀಡುವಲ್ಲಿ ಭಾರತ ಮಾದರಿಯಾಗಿದೆ.ಅತ್ಯಂತ ಕಡಿಮೆ ಜನಸಂಖ್ಯೆಯ ದೇಶಗಳಲ್ಲಿ ಮಾಡದಂತಹ ಸಾಧನೆ ಪ್ರಧಾನಿಯವರು ಮಾಡಿದ್ದಾರೆ.ಕೇಂದ್ರ ಸರ್ಕಾರದ ನಿರಂತರ ಪೆÇ್ರೀತ್ಸಾಹ ಮತ್ತು ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಲಸಿಕೆ ಸಂಶೋಧನೆ ಯಶಸ್ವಿಯಾಗಿ ಸಾಧ್ಯವಾಯಿತು.ವಿಪಕ್ಷಗಳ ನಿರಂತರ ಅಪಪ್ರಚಾರ ಮತ್ತು ಅಸಹಕಾರದ ನಡುವೆ ಈ ಸಾಧನೆ ಮಾಡಲಾಗಿದೆ.ಶೇ 94 ರಷ್ಟು ಲಸಿಕೆ ನೀಡಿಕೆಯು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ನಡೆದಿದೆ.ಶೇ 6 ರಷ್ಟು ಮಾತ್ರ ಖಾಸಗಿಯವರಿಗೆ ವಹಿಸಲಾಗಿದೆ.ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಜೊತೆ ನಿರಂತರ ಪತ್ರ ವ್ಯವಹಾರ ನಡೆಸುತ್ತಿದ್ದು.ಮನೆಮನೆ ಭೇಟಿ ಮೂಲಕ ಲಸಿಕೆ ನೀಡುವ ಗುರಿಹೊಂದಿದೆ.

ಲಸಿಕೆಯಿಂದ ಮಾತ್ರ ಕೊವಿಡ್ ನಿಯಂತ್ರಣ ಸಾಧ್ಯ ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವೂ ಕೂಡ ಲಸಿಕೆ ಅಭಿಯಾನದಲ್ಲಿ ಸಾಧನೆ ಮಾಡಿದೆ.ಅದಕ್ಕಾಗಿಯೇ ಕೊವಿಡ್ ಸಾಂಕ್ರಾಮಿಕದ ನಿಯಂತ್ರಣಕ್ಕಾಗಿ ಅಕ್ಟೋಬರ್ 2 ರಂದು ಅತ್ಯುತ್ತಮ ರಾಜ್ಯ ಪ್ರಶಸ್ತಿ ಪಡೆದಿದೆ ಎಂದರು.ದಾವಣಗೆರೆ ಜಿಲ್ಲೆಯಲ್ಲಿಯೂ ಶೇ 80 ರಷ್ಟು ಲಸಿಕಾಕರಣ ನಡೆದಿದೆ ಎಂದು ಮಾಹಿತಿ ನೀಡಿದರು. ಮಂಜಾನಾಯ್ಕ್,ಶಿವರಾಜ್ ಪಾಟೀಲ್,ಶಿವಶಂಕರ್,ಬಿ.ಎಸ್ ಜಗದೀಶ್,ಸೊಕ್ಕೆ ನಾಗರಾಜ್,ವಿಶ್ವಾಸ್ ಸುದ್ದಿಗೋಷ್ಠಿಯಲ್ಲಿ
ಇದ್ದರು.

Recent Articles

spot_img

Related Stories

Share via
Copy link
Powered by Social Snap