ಗುಬ್ಬಿ:

ಸಾರ್ವಜನಿಕ ಸ್ಥಳದಲ್ಲಿ ಬೈಕ್ ಅಡ್ಡಗಟ್ಟಿ ಪತ್ರಕರ್ತ ಜಿ.ಆರ್.ರಮೇಶ್ಗೌಡ ಅವರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಕಾರ್ಯನಿರತ ಪತ್ರಕರ್ತರೆಲ್ಲಾ ಸೇರಿ ಸೋಮವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಶೀಘ್ರ ಹಲ್ಲೊಕೋರರನ್ನು ಬಂಧಿಸುವಂತೆ ಆಗ್ರಹಿಸಿದರು.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಂಜನಪ್ಪ ಮಾತನಾಡಿ, ಏನೇ ವಿಚಾರ ಇದ್ದರೂ ಪತ್ರಕರ್ತರ ಸಂಘದ ಗಮನಕ್ಕೆ ತರಬಹುದಿತ್ತು, ಈ ರೀತಿ ಏಕಾಏಕಿ ಹಲ್ಲೆ ಮಾಡಿರುವುದು ಸರಿಯಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.
ಸಾಮಾಜಿಕ ಕಳಕಳಿಯ ಹೊಣೆ ಹೊತ್ತ ಓರ್ವ ಪತ್ರಕರ್ತನಿಗೆ ರಕ್ಷಣೆ ಸಿಗಲಿಲ್ಲ ಎಂದರೆ ಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿರುವ ಪತ್ರಕರ್ತರ ಸಂಘವು ವರದಿ ಮಾಡಿದ್ದಕ್ಕೆ ಅಥವಾ ವೈಯಕ್ತಿಕ ವಿಚಾರ ಯಾವುದೇ ಆಗಿದ್ದರೂ ಕಾನೂನು ರೀತಿ ಪ್ರಶ್ನಿಸಬಹುದಿತ್ತು. ಈ ರೀತಿ ಕಾನೂನು ಕೈಗೆ ತೆಗೆದುಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಸಮಾಜ ತಿದ್ದುವ ಜವಾಬ್ದಾರಿ ಹೊತ್ತ ಪತ್ರಕರ್ತರಲ್ಲಿ ಭಯ ಹುಟ್ಟಿಸುವ ಇಂತಹ ಘಟನೆ ಮರುಕಳಿಸದಂತೆ ಸರ್ಕಾರವು ಪತ್ರಕರ್ತರಿಗೆ ರಕ್ಷಣೆ ನೀಡಬೇಕೆಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಪತ್ರಕರ್ತರದ ಸಂಘದ ಮನವಿ ಸ್ವೀಕರಿಸಿದ ತಹಶೀಲ್ದಾರ್ ಬಿ.ಆರತಿ ಅವರು ಮಾತನಾಡಿ ಈ ಹಲ್ಲೆ ಪ್ರಕರಣ ನಡೆಯಬಾರದಿತ್ತು. ಘಟನೆ ಬಗ್ಗೆ ಪೆÇಲೀಸರ ಜೊತೆ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ.ಟಿ.ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ದೊಡ್ಡಗುಣಿ ಪ್ರಸನ್ನ, ಸದಸ್ಯರಾದ ಜಿ.ಪಿ.ವೀರಭದ್ರಯ್ಯ, ಚೇಳೂರು ಕೆಂಪರಾಜು, ಕೋಟೆಮೋಹನ್, ಆನಂದ್ ದೀಕ್ಷಿತ್, ಮೆಳೆಕಲ್ಲಹಳ್ಳಿ ಯೋಗೀಶ್, ಶಾಂತರಾಜು, ರಾಜೇಶ್ಗುಬ್ಬಿ, ನರಸಿಂಹಮೂರ್ತಿ, ಮಂಜುನಾಥ್, ಹನುಮಂತರಾಜು, ಸಂತೋಷ್, ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








