ಕೆರೆ-ಕಟ್ಟೆಗಳು ಭರ್ತಿ ನೆರೆಯ ಆಂಧ್ರ್ರಕ್ಕೆ ವರದಾನ

ಮಿಡಿಗೇಶಿ:

          2021-22 ನೇ ಸಾಲಿನ ಸೆಪ್ಟಂಬರ್ ತಿಂಗಳಲ್ಲಿ ಪ್ರಾರಂಭವಾದ ಮಳೆಯು ಸ್ವಲ್ಪ ಹೆಚ್ಚಿನದಾಗಿ ನವೆಂಬರ್ ತಿಂಗಳಲ್ಲಿ ಸುರಿದಿದ್ದರಿಂದ ಗಡಿಯಲ್ಲಿನ ಬಹುತೇಕ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ. ಕೆರೆ ತುಂಬಿದ ಕೋಡಿಗಳಲ್ಲಿ ಹರಿಯುವ ನೀರು ತೊರೆಗಳು ತುಂಬಿ ಹರಿದು ರಾಜ್ಯದ ಬಹುತೇಕ ನೀರು ಆಂಧ್ರ ರಾಜ್ಯದಲ್ಲಿನ ಡ್ಯಾಂಗಳಿಗೆ ಹರಿದು ಅವು ಸಹ ತುಂಬಿವೆ. ಸದರಿ ಡ್ಯಾಂಗಳ ಗೇಟ್‍ಗಳನ್ನು ತೆರೆಯಲಾರಂಭಿಸುವ ಬಗ್ಗೆ ದೃಶ್ಯ ಮಾಧ್ಯಮ, ಮುದ್ರಣ ಮಾಧ್ಯಮ, ಯೂ-ಟ್ಯೂಬ್ ಚಾನಲ್‍ಗಳಲ್ಲಿ ನಿರಂತರವಾಗಿ ವರದಿಯಾಗುತ್ತಿವೆ.

ಅತಿವೃಷ್ಟಿಯಿಂದ ರೈತಾಪಿ ವರ್ಗದವರಿಗೆ, ಮನೆ, ಮಠ ಕಳೆದುಕೊಂಡವರಿಗೆ É ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಹಾರ ಕಲ್ಪಿಸಿಕೊಡುವಂತೆ ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗತೊಡಗಿವೆ. ಮುಖ್ಯಮಂತ್ರಿ ಎಸ್.ಆರ್ ಬೊಮ್ಮಾಯಿ ರಾಜ್ಯದ ಆಯಾ ಜಿಲ್ಲಾಧಿಕಾರಿಗಳ ಬ್ಯಾಂಕ್ ಖಾತೆಗಳಿಗೆ ಇಂತಿಷ್ಟು ಹಣವನ್ನು ಮೀಸಲಿಟ್ಟಿದ್ದು, ಸದರಿ ಹಣವನ್ನು ಆಯಾ ಜಿಲ್ಲಾಧಿಕಾರಿಗಳು ರೆವಿನ್ಯೂ ಇಲಾಖಾಧಿಕಾರಿಗಳಿಂದ ನಷ್ಟಕ್ಕೊಳಗಾದ ರೈತರ ಬೆಳೆಗಳನ್ನು ಕೂಲಂಕಷವಾಗಿ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂಬುದು ರೈತರ, ಪ್ರಜ್ಞಾವಂತ ನಾಗರಿಕರ, ಜನಸಾಮಾನ್ಯರ ಅನಿಸಿಕೆಯಾಗಿದೆ.

ರಾಜ್ಯದ ಹೆಚ್ಚುವರಿ ಮಳೆ ನೀರು ನೆರೆಯ ಆಂಧ್ರ ರಾಜ್ಯದತ್ತ :-

ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಸಿದ್ದರ ಬೆಟ್ಟದ ತಪ್ಪಲಿನ ನೀರು, ತೀತಾ ಡ್ಯಾಂ ಮತ್ತು ಮಾವತ್ತೂರು ಕೆರೆಯಿಂದ ಪ್ರಾರಂಭವಾದ ಮಳೆಯ ನೀರು ಜೊತೆಗೆ ಬಹುತೇಕ ಕೊರಟಗೆರೆ ತಾಲ್ಲೂಕಿನ, ಮಧುಗಿರಿ ತಾಲ್ಲೂಕಿನಲ್ಲಿನ ಐವತ್ನಾಲ್ಕು ಕೆರೆಗಳ ಪೈಕಿ ಸುಮಾರು 30 ಕೆರೆ, ಹೊಸಕೆರೆ ಗ್ರಾಮದ ಎರಡು ಕೆರೆಗಳು, ಹನುಮಂತಪುರ, ಬಿದರೆಕೆರೆ, ಮಿಡಿಗೇಶಿ, ಬೇಡತ್ತೂರು, ವೆಂಕಟಾಪುರ ಕೆರೆಗಳು ಸೇರಿದಂತೆ ಬಹುತೇಕ ಎಲ್ಲವೂ ತುಂಬಿ ಹರಿದು ಜಯಮಂಗಲಿ, ಕುಮುದ್ವತಿ, ಉತ್ತರ ಪಿನಾಕಿನಿ ನದಿಗಳ ಮೂಲಕ ತುಂಬಿ ಆಂಧ್ರರಾಜ್ಯದ ರಾಜ್ಯದ ಪರಗಿ ಕೆರೆ ಸೇರುತ್ತದೆ. ಇದು ಆಂರ್ಧರ ರಾಜ್ಯದ ದೊಡ್ಡ ಕೆರೆಯಾಗಿದ್ದು, ಇದು ಈಗಾಗಲೆ ಮುಕ್ಕಾಲು ಭಾಗ ಭರ್ತಿಯಾಗಿರುವ ಬಗ್ಗೆ ವರದಿಯಾಗಿದೆ.

ಈ ಮೇಲ್ಕಂಡ ಮೂರು ನದಿಗಳು ಪಾವಗಡ ತಾಲ್ಲೂಕು ನಾಗಲ ಮಡಿಕೆ ಬಳಿಯ ಶ್ರೀ ಅಂತ್ಯ ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ಮುಖಾಂತರ ಪಿನಾಕಿನಿ ನದಿಯಲ್ಲಿ ಒಟ್ಟಾಗಿ ಹರಿದು ನೀರು ಪೇರೂರು ಡ್ಯಾಂ ಸೇರಿದೆ. ಸದರಿ ಡ್ಯಾಂ ಸಹ ಭರ್ತಿಯಾಗಿದ್ದು, ಸದರಿ ಡ್ಯಾಂನ ಒಂಭತ್ತು ಗೇಟ್‍ಗಳಲ್ಲಿ ಒಂದು ಗೇಟ್‍ನಿಂದ ನೀರನ್ನು ಹೊರ ಬಿಟ್ಟಿರುವ ಬಗ್ಗೆ ವರದಿಯಾಗಿದೆ. ಸದರಿ ನೀರು ಹಿಂಭಾಗದ ಕೆರೆಗಳನ್ನು ತುಂಬಿಸಿ, ಹೆಚ್ಚಾದ ನೀರು ಅನಂತಪುರಂ ಜಿಲ್ಲೆಯ ಶ್ರೀ ಶೈಲಂ ಡ್ಯಾಂ ಸೇರಿ, ಅದು ತುಂಬಿದಲ್ಲಿ ಅಂತಿಮವಾಗಿ ಬಂಗಾಳಕೊಲ್ಲಿ ಸೇರುತ್ತದೆ. ಸದರಿ ಕಳೆದ ಎರಡು ಮೂರು ತಿಂಗಳುಗಳಿಂದ ಸುರಿಯುತ್ತಿರುವ ಮಳೆಯು ಅರಬ್ಬಿಸಮುದ್ರ ಮತ್ತು ಬಂಗಾಳಕೊಲ್ಲಿಯ ಸಮುದ್ರಗಳ ವಾಯುಭಾರ ಕುಸಿತದಿಂದ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಪೇರೂರು ಡ್ಯಾಂ ಎತ್ತರ ಗರಿಷ್ಠ 60 ಅಡಿಗಳಾಗಿದ್ದು, 59 ಅಡಿಗಳವರೆಗೆ ನೀರು ಭರ್ತಿಯಾಗಿದ್ದು, ಹೆಚ್ಚ್ಚುವರಿ ನೀರನ್ನು ಹೊರ ಬಿಡಲಾಗುತ್ತಿದೆ. ಸದರಿ ಡ್ಯಾಂ ನೋಡಲು ಪ್ರತಿ ದಿನ ಸಾವಿರಾರು ಜನತೆ ಸೇರುತ್ತಿರುವ ಬಗ್ಗೆ ವರದಿಯಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link