ಕುಣಿಗಲ್:
ಪಟ್ಟಣದ ಕರಾಟೆ ಶಾಲೆಯ ವಿದ್ಯಾರ್ಥಿಗಳು ಕಟಾ ಹಾಗೂ ಕುಮಿಟೆ ವಿಭಾಗದಲ್ಲಿ ಭಾಗವಹಿಸಿ 6 ಚಿನ್ನ, 4 ಬೆಳ್ಳಿ ಹಾಗೂ 9 ಕಂಚಿನ ಪದಕಗಳನ್ನು ಗೆದ್ದು ಶಾಲೆಗೆ ಹಾಗೂ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ 3ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಸ್ಪೋರ್ಟ್ಸ್ ಕರಾಟೆ ಡು ಫಿಟ್ನೆಸ್ ಮತ್ತು ಸೆಲ್ಫ್ ಡಿಫೆನ್ಸ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷರಾದ ಡಾ.ಯು.ಸಿ.ಚನ್ನೇಗೌಡ ಹಾಗೂ ಕಾರ್ಯದರ್ಶಿ ಮಂಜುನಾಥ್ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.
ಕಟಾ ವಿಭಾಗದಲ್ಲಿ ಬಿಲ್ವತೇಜ್ (ಬಂಧು) ನೀತಿನ್‍ಗೌಡ, ತೇಜಸ್, ಗಗನ್, ಶ್ರೇಯಸ್ ಪ್ರಥಮ; ರಾಹುಲ್‍ಗೌಡ, ಕುಸುಮ ದ್ವಿತೀಯ; ಹರಿಪ್ರಸಾದ್, ಸೈಯದ್‍ಮತೀನ್, ಪ್ರೀತಮ್, ರುದ್ರೇಶ್, ಜೀವನ್, ಗೋವರ್ಧನ್ ತೃತೀಯ ಸ್ಥಾನ ಪಡೆದಿರುತ್ತಾರೆ. ಕುಮಿಟೆ ವಿಭಾಗದಿಂದ ಶ್ರೇಯಸ್ ಪ್ರಥಮ, ಗೋವರ್ಧನ್ ದ್ವಿತೀಯ, ಕುಸುಮ, ಬಿಲ್ವತೇಜ್ (ಬಂಧು), ನೀತಿನ್‍ಗೌಡ ತೃತೀಯ ಸ್ಥಾನ ಪಡೆದಿರುತ್ತಾರೆ. ಈ ಸಂದರ್ಭದಲ್ಲಿ ತರಬೇತುದಾರರಾದ ಎ.ಎಲ್.ಸೋಮಶೇಖರ, ಕೆ.ಜಿ.ರಾಕೇಶ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ