ತುರುವೇಕೆರೆ:
ಇದೇ ಡಿ.4 ರಂದು ನಡೆಯಲಿರುವ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಯವರ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕ ಭಾಗದ ಗದಗ, ಬಾಗಲಕೋಟೆ, ಬಿಜಾಪುರ ಜಿಲ್ಲೆಗಳಿಂದ ಅವಲಿಂಗ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ನೂರಾರು ಭಕ್ತರು ಪಾದಯಾತ್ರೆಯ ಮುಖಾಂತರ ತುರುವೇಕೆರೆ ಮಾರ್ಗವಾಗಿ ಆಗಮಿಸಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಸಹ ತುರುವೇಕೆರೆ ಬ್ಯಾಂಕ್ ಮೂಡಲಗಿರಿಯಪ್ಪ ಸೇರಿದಂತೆ ಅನೇಕ ಭಕ್ತರು ಅವರನ್ನು ಆತ್ಮೀಯವಾಗಿ ಸತ್ಕರಿಸಿ ನೂರಾರು ಜನರಿಗೆ ಊಟೋಪಚಾರ ನಡೆಸಿ ಬೀಳ್ಕೊಟ್ಟರು. ಹಾಗೆಯೆ ತಾಲ್ಲೂಕಿನ ಕಳ್ಳನಕೆರೆ ಗೇಟ್ನಲ್ಲಿಯೂ ಸಹ ಪಾದಯಾತ್ರಿಗಳು ಹರಿನಾಮ ಸ್ಮರಣೆ ಮಾಡುತ್ತಾ, ಮಾರ್ಗಮಧ್ಯೆ ಆಗಮಿಸಿದ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಗ್ಯಾಷ್ ಪ್ರಭು, ಕಾರ್ಯದರ್ಶಿ ಶಿವರಾಜು, ಬಸವರಾಜು ಇತರರು ಪಾದಯಾತ್ರಿಗಳಿಗೆ ಹಾಲು, ಬಿಸ್ಕತ್ತು ನೀಡಿ ಸತ್ಕರಿಸಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ವಯೋವೃದ್ಧರಾದಿಯಾಗಿ ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ ನೂರಾರು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ